ನಾಳೆ ನಾಡಿದ್ದು ಭಾರತ್ ಬಂದ್ : ರಸ್ತೆಗಿಳಿಯಲ್ಲ KSRTC ಮತ್ತು BMTC
ಕಾರ್ಮಿಕ ನೀತಿ ವಿರೋಧಿಸಿ ನಾಳೆ ಮತ್ತು ನಾಡಿದ್ದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ನಾಳೆ ಮತ್ತು ನಾಡಿದ್ದು ಕೆಎಸ್ ಆರ್ ಸಿ ಮತ್ತು ಬಿಎಮ್ ಟಿಸಿ ಬಸ್ ಗಳು ರಸ್ತೆಗಿಳಿಯೋದಿಲ್ಲ ಎಂದು ತಿಳಿದು ಬಂದಿದೆ. ಕಾರ್ಮಿಕ ನೀತಿಗಳ ವಿರೋಧ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಾರಿಗೆ ಸಂಘಟನೆಗಳು ಬಂದ್ ನಡೆಸುತ್ತಿವೆ. ನಾಳೆ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಬಂದ್ ಕೈಗೊಳ್ಳಲಾಗುತ್ತಿದ್ದು ರಾಜ್ಯ ಸರ್ಕಾರದ ಬೆಂಬಲ ಕೂಡ ಇದೆ ಎನ್ನಲಾಗುತ್ತಿದೆ.
ಈ ಬಂದ್ ಗೆ ಓಲಾ, ಆಟೋ ನೈತಿಕ ಬೆಂಬಲ ನೀಡಲಿದ್ದು, ಬ್ಯಾಂಕ್, ಪೋಸ್ಟ್ ಆಫೀಸ್, ಹಾಲು ಮಾರಾಟ, ಪೆಟ್ರೋಲ್ ಬಂಕ್, ಶಾಲಾ-ಕಾಲೇಜು, ಆಸ್ಪತ್ರೆ, ಮೆಡಿಕಲ್ ಶಾಪ್, ಮೆಟ್ರೋ ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಇನ್ನೂ ದಿನನಿತ್ಯ ಬಿಸ್ ಮೂಲಕವೇ ಕಾರ್ಯ ನಿರ್ವಹಿಸುವಂತವರೆಲ್ಲರ ಕಾರ್ಯ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಬೆಳಿಗ್ಗೆ ಕೆಲಸ ಕಾರ್ಯಗಳಿಗೆ ಹೋಗುವಂತ ಕೆಲಸಗಾರರಿಗೂ ಹಾಗೂ ದೂರದ ಊರುಗಳಿಂದ ಪ್ರಯಾಣ ಮಾಡುವಂತ ಪ್ರಯಾಣಿಕರಿಗೂ ಬಂದ್ ನ ಬಿಸಿ ತಟ್ಟಲಿದೆ. ಜೊತೆಗೆ ಬೀದಿ ಬದಿ ವ್ಯಾಪರ ಕೂಡ ಬಂದ್ ಆಗಲಿರುವ ಸಾಧ್ಯತೆ ಇದೆ.
ಭಾರತ ಬಂದ್ ಕಟ್ಟುನಿಟ್ಟಾಗಿ ಮಾಡಿದ್ದೇ ಆದರೆ ಬಸ್ ಮೂಲಕ ಪ್ರಯಾಣ ಮಾಡುವಂತವರಿಗೆ ಬಂದ್ ನ ಬಿಸಿ ಬಹುತೇಕ ತಟ್ಟುವ ಸಾಧ್ಯತೆ ಇದೆ.
