ನಾನು ಸಗಣಿಯಲ್ಲಿ ಹುಟ್ಟಿದ್ದೇನೆ, ನನಗೆ ಕೊರೊನಾ ಬರಲ್ಲ ಎಂದ ಬಿಜೆಪಿ ಸಚಿವೆ!

ಕೊರೊನಾ ವೈರಸ್‌ ದೇಶದಲ್ಲಿ ಕಾಣಿಸಿಕೊಂಡಾಗಿನಿಂದ ಬಿಜೆಪಿಯ ಶಾಸಕರು, ಸಂಸದರು, ಸಚಿವರು ನಾನಾ ರೀತಿಯ ಕೊರೊನಾ ಮದ್ದುಗಳನ್ನು ಕಂಡು ಹಿಡಿಯುತ್ತಲೇ ಇದ್ದಾರೆ. ಇದೀಗ ಮಧ್ಯಪ್ರದೇಶ ಬಿಜೆಪಿ ಸಚಿವೆ ಹೊಸ ಆವಿಷ್ಕಾರ ಮಾಡಿದ್ದಾರೆ.

ಮಧ್ಯಪ್ರದೇಶದ ಬಿಜೆಪಿ ಸರ್ಕಾರದಲ್ಲಿ ಸಚಿವೆಯಾಗಿರುವ ಇಮಾರ್ತಿ ದೇವಿಅವರಿಗೆ ಕೊರೊನಾ ತಗುಲಿದೆ ಎಂದು ವರದಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಾನು ಸಗಣಿ ಮತ್ತು ಮಣ್ಣಿನಲ್ಲಿ ಜನಿಸಿದವಳು. ಹಾಗಾಗಿ ಕೊರೊನಾ ನನ್ನ ಹತ್ತಿರವೂ ಸುಳಿಯುವುದಿಲ್ಲ. ನನಗೆ ಕೊರೊನಾ ಬಂದಿಲ್ಲ. ಮಾಧ್ಯಗಳು ತಪ್ಪಾಳು ವರದಿ ಮಾಡಿವೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯವರು ಕೊರೊನಾ ನಿಯಂತ್ರಣಕ್ಕೆ ತಟ್ಟೆ, ಜಾಗಟೆ, ಗಂಟೆ ಬಾರಿಸಿ, ದೀಪ ಹಚ್ಚಲು ಕರೆಕೊಟ್ಟಿದ್ದರು. ಇದಾದ ನಂತರ, ಬಿಜೆಪಿಯ ಸಂಸದರೊಬ್ಬರು ಬಾಬ್‌ಜಿ ಹಪ್ಪಳ ತಿನ್ನೋದರಿಂದ ಕೊರೊನಾ ಬರಲ್ಲ ಎಂದಿದ್ದರು. ಮೈಸೂರಿನ ಬಿಜೆಪಿ ಶಾಸಕ ರಾಮ್‌ದಾಸ್ ಅವರು ಬೆಳಕಿನ ಶಾಕಕ್ಕೆ ಕೊರೊನಾ ಸಾಯುತ್ತೆ ಎಂದು‌ ಹೇಳಿದ್ದರು. ಅಲ್ಲದೆ, ಬಿಜೆಪಿ ಮುಖಂಡರೊಬ್ಬರು 30-60 ರಮ್ ಕುಡಿಯುವುದರಿಂದಲೂ ಕೊರೊನಾ ಬರಲ್ಲ ಎಂದಿದ್ದರು. ಇದೀಗ ಈ ಪಟ್ಟಿಗೆ ಹೊಸದಾಗಿ ಸಗಣಿ ಸಂಶೋಧನೆ ಸೇರಿಕೊಂಡಿದೆ.

ಸಚಿವೆ ಇಮಾರ್ತಿ ದೇವಿ ಅವರ ಹೇಳಿಕೆ ವ್ಯಾಪಕವಾಗಿ ಟ್ರೋಲ್‌ ಆಗುತ್ತಿದೆ.


ಇದನ್ನೂ ಓದಿ: ಹರ್ಬಲ್ ಮೈಸೂರ್ ಪಾಕ್‌ ತಿಂದರೆ ಕೊರೊನಾ ಬರಲ್ಲ ಎಂದ ಮಾಲೀಕ: ಬೀಗ ಜಡಿದ ಸರ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights