ರಾಜಕಾರಣಿಗಳ ವಿರುದ್ಧ 4,442 ಕ್ರಿಮಿನಲ್‌ ಕೇಸ್‌; ಹಾಲಿ MP, MLAಗಳೇ ಹೆಚ್ಚು ಪ್ರಕರಣಗಳಲ್ಲಿ ಆರೋಪಿಗಳು

ದೇಶಾದ್ಯಂತ ಒಟ್ಟು 4,442 ಕ್ರಿಮಿನಲ್ ಪ್ರಕರಣಗಳನ್ನು ರಾಜಕಾರಣಿಗಳು ಎದುರಿಸುತ್ತಿದ್ದಾರೆ. ಈ ಪೈಕಿ, 2,556 ಪ್ರಕರಣಗಳನ್ನು ಹಾಲಿ ಸಂಸದರು ಮತ್ತು ಶಾಸಕರು ಆರೋಪಿಗಳಾಗಿದ್ದಾರೆ ಎಂದು ಎಲ್ಲಾ ರಾಜ್ಯಗಳ ಹೈಕೋರ್ಟ್‌ಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿರುವ ವರದಿಗಳ ಅಂಕಿಅಂಶದಲ್ಲಿ ಬಹಿರಂಗಗೊಂಡಿದೆ.

ದೇಶಾದ್ಯಂತ ರಾಜಕಾರಣಿಗಳ ವಿರುದ್ಧ ಇರುವ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯನ್ನು ತ್ವರಿತವಾಗಿ ನಡೆಬೇಕು ಎಂದು ವಕೀಲೆ ಅಶ್ವಿನಿ ಉಪಾಧ್ಯಾಯ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಎಲ್ಲಾ ಹೈಕೋರ್ಟ್‌ಗಳಿಗೆ ರಾಜಕಾರಣಿಗಳ ವಿರುದ್ಧ ಪ್ರಕರಣಗಳ ಮಾಹಿತಿ ನೀಡುವಂತೆ ಕೇಳಿತ್ತು.

ಸುಪ್ರೀಂ ಸೂಚನೆಯಂತೆ ಎಲ್ಲಾ ಹೈಕೋರ್ಟ್‌ಗಳು ಮಾಹಿತಿ ನೀಡಿದ್ದು, ಅಂಕಿ ಅಂಶಗಳಲ್ಲಿ ಒಟ್ಟು 4,442 ಪ್ರಕರಣಗಳಿವೆ ಎಂದು ತಿಳಿದುಬಂದಿದೆ. ಇವುಗಳ ಪೈಕಿ, 352 ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯಗಳು ತಡೆನೀಡಿವೆ. ಅಲ್ಲದೆ 413 ಪ್ರಕರಣಗಳು ಜೀವಾವಧಿ ಶಿಕ್ಷೆಗೆ ಅರ್ಹವಾಗಿವೆ ಎಂದು ಬಹಿರಂಗವಾಗಿದೆ.

ವರದಿಯ ಪ್ರಕಾರ, ರಾಜಕಾರಣಿಗಳ ವಿರುದ್ಧದ ಪ್ರಕರಣಗಳಲ್ಲಿ ಉತ್ತರ ಪ್ರದೇಶವು ಅಗ್ರಸ್ಥಾನದಲ್ಲಿದ್ದು, 1,217 ಪ್ರಕರಣಗಳು ಬಾಕಿ ಉಳಿದಿವೆ. ಅವುಗಳಲ್ಲಿ 446 ಪ್ರಕರಣಗಳಲ್ಲಿ ಹಾಲಿ ಶಾಸಕರು ಮತ್ತು ಸಂಸದರು ಆರೋಪಿಗಳಾಗಿದ್ದಾರೆ.

ಬಿಹಾರದಲ್ಲಿ 531 ಪ್ರಕರಣಗಳಿದ್ದು, ಅದರಲ್ಲಿ 256 ಪ್ರಕರಣಗಳಲ್ಲಿ ಹಾಲಿ ಎಂಎಲ್‌ಎ ಮತ್ತು ಎಂಪಿಗಳ ಆರೋಪಿಗಳಾಗಿದ್ದಾರೆ.

ಹಲವಾರು ಪ್ರಕರಣಗಳಲ್ಲಿ, ಭ್ರಷ್ಟಾಚಾರ ತಡೆ ಕಾಯ್ದೆ, ಮನಿ ಲಾಂಡರಿಂಗ್ ತಡೆ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ತಡೆಗಟ್ಟುವ ಕಾಯ್ದೆ ಮತ್ತು ಸೆಕ್ಷನ್ 500 ಐಪಿಸಿ ಅಡಿಯಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.


ಇದನ್ನೂ ಓದಿ:  ನೀಟ್‌ ಪರೀಕ್ಷೆ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ; ಪರೀಕ್ಷೆಗೆ ಅಡ್ಡಿಯಿಲ್ಲ: ಸುಪ್ರೀಂ ಕೋರ್ಟ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights