ದೆಹಲಿ ಗಲಭೆ: ಕಾಂಗ್ರೆಸ್‌ ಮುಖಂಡ ಸಲ್ಮಾನ್ ಖುರ್ಷಿದ್‌ ಹೆಸರು ಸೇರಿಸಿ ಚಾರ್ಜ್‌ಶೀಟ್‌!

ದೆಹಲಿ ಗಲಭೆ ಪ್ರಕರಣದ ಚಾರ್ಜ್‌ ಶೀಟ್‌ ಸಲ್ಲಿಸಿರುವ ದೆಹಲಿ ಪೊಲೀಸರು ಚಾರ್ಜ್‌ ಶೀಟ್‌ನಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಸಲ್ಮಾನ್‌ ಖುರ್ಷಿದ್‌ ಅವರ ಹೆಸರನ್ನೂ ಸೇರಿದ್ದಾರೆ. ದೆಹಲಿ ಗಲಬೆಗೆ ಸಂಬಂಧಿಸಿದಂತೆ ಖುರ್ಷಿದ್‌ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಸೆಪ್ಟೆಂಬರ್ 17 ರಂದು ಸಲ್ಲಿಸಲಾದ 17,000 ಪುಟಗಳ ಚಾರ್ಜ್‌ಶೀಟ್‌ನಲ್ಲಿನ ಸಾಕ್ಷಿಯೊಬ್ಬರ ಹೇಳಿಕೆಯಂತೆ, “ಉಮರ್ ಖಾಲಿದ್, ಸಲ್ಮಾನ್ ಖುರ್ಷಿದ್, ನದೀಮ್ ಖಾನ್ ಅವರೆಲ್ಲರೂ, ದೆಹಲಿಯ ಸಿಎಎ/ಎನ್‌ಆರ್‌ಸಿ ವಿರೋಧಿ ಧರಣಿಗಳಲ್ಲಿ ಜನರನ್ನು ಸಜ್ಜುಗೊಳಿಸಲು ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿದ್ದರು” ಎಂದು ಸೇರಿಸಲಾಗಿದೆ.

ಪ್ರಚೋದನಕಾರಿ ಭಾಷಣಗಳ ನಿಖರ ಸ್ವರೂಪವನ್ನು ಪೊಲೀಸರು ಉಲ್ಲೇಖಿಸಿಲ್ಲ. ರಕ್ಷಣಾತ್ಮಕ ಸಾಕ್ಷಿ ಎಂದು ಪೊಲೀಸರು ಸಾಕ್ಷಿಯ ಗುರುತನ್ನು ಬಹಿರಂಗಗೊಳಿಸಿಲ್ಲ. ಗಲಭೆಗೆ ಸಂಚು ರೂಪಿಸಿದ ಆರೋಪಿಗಳು ಪಿತೂರಿಗಾರರ ಪ್ರಮುಖ ತಂಡದ ಭಾಗವಾಗಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: ದೆಹಲಿ ಹಿಂಸಾಚಾರ: ದ್ವೇಷ ಭಾಷಣದ ಪ್ರಕರಣವನ್ನು ವಿಚಾರಣೆ ನಡೆಸುವಂತೆ ದೆಹಲಿ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ಈ ಹೇಳಿಕೆಯನ್ನು CrPC ಸೆಕ್ಷನ್ 164 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗಿದೆ. ಪ್ರತಿಭಟನಾ ಸ್ಥಳಗಳಲ್ಲಿ ಖುರ್ಷಿದ್ ಭಾಷಣ ಮಾಡಿದ್ದರು ಎಂದು ಮತ್ತೊಬ್ಬ ಆರೋಪಿಯೂ ಕೂಡ  ಹೇಳಿದ್ದಾನೆ ಎಂದು ಪೊಲೀಸರು ದಾಖಲಿಸಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

Delhi riots: A chronology

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡರಾದ ಸಲ್ಮಾನ್ ಖುರ್ಷಿದ್ “ನಾನು ನೀಡಿದ ಪ್ರಚೋದನಕಾರಿ ಹೇಳಿಕೆ ಏನು ಎಂದು ತಿಳಿಯಲು ನನಗೆ ಕುತೂಹಲವಿದೆ. ನಾನು ಸಾಂವಿಧಾನಿಕ, ನ್ಯಾಯಸಮ್ಮತವಾದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇನೆ” ಎಂದಿದ್ದಾರೆ.

ಇದುವರೆಗೆ ಪೊಲೀಸ್ ಚಾರ್ಜ್‌ಶೀಟ್‌ಗಳಲ್ಲಿ ಹೆಸರಿಸಲಾದವರಲ್ಲಿ ಖುರ್ಷಿದ್ ಉನ್ನತ ಮಟ್ಟದ ರಾಜಕಾರಣಿಯಾಗಿದ್ದಾರೆ. ಸರ್ಕಾರದ ಟೀಕಾಕಾರರನ್ನು ದಮನಿಸಲು ಗಲಭೆಯ ತನಿಖೆಯಲ್ಲಿ ಅವರ ಹೆಸರನ್ನು ಬಳಸಲಾಗುತ್ತಿದೆ ಎಂಬ ಆರೋಪ ಪೊಲೀಸರ ಮೇಲಿದೆ.

ಇದನ್ನೂ ಓದಿ: ಕೋಮು ದ್ವೇಷಕ್ಕಾಗಿ ಅಂಗಡಿಗಳ ಮೇಲೆ ಕೇಸರಿ ಧ್ವಜ: ವಕೀಲರಿಂದ ದೂರು ದಾಖಲು

ಸಿಪಿಎಂ ಮುಖಂಡರಾದ ಬೃಂದಾ ಕಾರಟ್, ವಕೀಲ ಪ್ರಶಾಂತ್ ಭೂಷಣ್ ಮತ್ತು ಸ್ವರಾಜ್ ಇಂಡಿಯಾ ಪಕ್ಷದ ಮುಖ್ಯಸ್ಥ ಯೋಗೇಂದ್ರ ಯಾದವ್ ಅವರ ಹೆಸರನ್ನೂ ದ್ವೇಷ ಭಾಷಣ ಮಾಡಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾಗಿದೆ.

ಆದರೆ, ಬಿಜೆಪಿ ನಾಯಕರು ಜನರನ್ನು ಪ್ರಚೋದಿಸಿದ್ದಾರೆ ಹಾಗೂ ಗಲಭೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿದ್ದ ಕನಿಷ್ಠ ಎಂಟು ದೂರುಗಳಲ್ಲಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಎನ್‌ಡಿಟಿವಿ ಹೇಳಿದೆ. ಅದರಲ್ಲಿ ನಾಲ್ಕು ದೂರುಗಳಲ್ಲಿ ಯಾವುದೇ ಎಫ್‌ಐಆರ್‌ ಕೂಡಾ ದಾಖಲಿಸಲಾಗಿಲ್ಲ. ಉಳಿದವುಗಳನ್ನು ಯಾವುದೇ ಸಂಬಂಧವಿಲ್ಲದ ಪ್ರಕರಣಗಳಿಗೆ ಲಿಂಕ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.


ಇದನ್ನೂ ಓದಿ: ದೆಹಲಿ ಗಲಬೆಗೆ ಪ್ರಚೋದಿಸಿದ್ದು ಬಿಜೆಪಿ ಕಾರ್ಪೊರೇಟರ್‌; ಪ್ರತ್ಯಕ್ಷದರ್ಶಿಯಿಂದ ದೂರ!

Spread the love

Leave a Reply

Your email address will not be published. Required fields are marked *