ಪ್ರಧಾನಿ ಮೋದಿಯಿಂದ ನನಗೆ ಸಿಎಂ ಆಫರ್ ಬಂದಿತ್ತು: ಹೆಚ್‌ಡಿಕೆ

2018ರ ಚುನಾವಣೆ ನಂತರ ಬಂದ ಅತಂತ್ರ ಫಲಿತಾಂಶ ಬಂದ ನಂತರ ಮೈತ್ರಿ ಸರ್ಕಾರ ರಚನೆಯ ವೇಳೆ ಪ್ರಧಾನಿ ಮೋದಿ ಹಾಗೂ ಬಿಜೆಪಿಯ ನಾಯಕರಿಂದ ನನ್ನನ್ನು ಸಿಎಂ ಮಾಡುವ ಆಫರ್‌ ಬಂದಿತ್ತು ಎಂದು ಮಾಜಿ ಸಿಎಂ ಹೆಚ್‌ಡಿಕೆ ಹೇಳಿದ್ದಾರೆ.

5 ವರ್ಷಗಳ ಕಾಲ ಯಾರೂ ನನ್ನನ್ನು ಟಚ್ ಮಾಡೋಲ್ಲ ಎಂದು ಬಿಜೆಪಿಗರು ಹೇಳಿದ್ದರು ಎಂಬುದಾಗಿ ಸಿರಾದಲ್ಲಿ ಸುದ್ದಿಗಾರರೊಂದಿಗೆ ಹೇಳಿದ್ದಾರೆ.

ಮೈತ್ರಿ ಸರ್ಕಾರ ರಚನೆಗಾಗಿ ನನ್ನನ್ನು ಸಿಎಂ ಮಾಡುವಂತೆ ಕಾಂಗ್ರೆಸ್‌ನವರು ದೇವೇಗೌಡರ ಬಳಿ ಕೇಳಿಕೊಂಡಿದ್ದರು. ನನ್ನ ಆರೋಗ್ಯ ಸರಿಯಿಲ್ಲ ಎಂದು ಹೇಳಿದರೂ ಅವರು ಕೇಳಲಿಲ್ಲ. ಕೊನೆಗೆ ನನ್ನನ್ನೇ ಸಿಎಂ ಮಾಡಿದ್ರು ಎಂದು ಅವರು ಹೇಳಿದ್ದಾರೆ.

ಶಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಆ ಕ್ಷೇತ್ರದ ಮೇಲೆ ಹೆಚ್ಚು ಒತ್ತು ಕೊಟ್ಟಿರುವ ಹೆಚ್‌ಡಿಕೆ ಶಿರಾಕ್ಕೆ ಭೇಟಿ ನೀಡುತ್ತಲೇ ಇದ್ದಾರೆ. ಇಂದು ಜೆಡಿಎಸ್‌ ಅಭ್ಯರ್ಥಿಯನ್ನೂ ಫೈನಲ್‌ ಮಾಡುವುದಾಗಿ ಹೇಳಿದ್ದಾರೆ.


ಇದನ್ನೂ ಓದಿ: ಮಿತ್ರಪಕ್ಷಗಳ ವಿಶ್ವಾಸ ಕಳೆದುಕೊಳ್ಳುತ್ತಿರುವ ಬಿಜೆಪಿ! ಮೈತ್ರಿ ತೊರೆದ 18 ಪಕ್ಷಗಳು!

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.