ಯುದ್ದಭೂಮಿಯಾಗಿರುವ ನಾಗೋರ್ನೊ-ಕರಾಬಖ್: 3000 ಸೈನಿಕರ ಸಾವು!
ಸಂಘರ್ಷ ಪೀಡಿತ ವಿವಾದಿತ ಪ್ರದೇಶ ನಾಗೋರ್ನೊ-ಕರಾಬಖ್ ನಲ್ಲಿ ಯುದ್ಧಗಳು ಭುಗಿಲೆದ್ದಾಗಿನಿಂದ ಅಜರ್ ಬೈಜಾನ್ ದೇಶದ ಸೇನೆಯ 3,000ಕ್ಕೂ ಹೆಚ್ಚು ಸೈನಿಕರು ಹತರಾಗಿದ್ದಾರೆ.
ಅಜರ್ ಬೈಜಾನ್ ಈಗಾಗಲೇ 3,000 ಸೈನಿಕರನ್ನು ಕಳೆದುಕೊಂಡಿದೆ ಎಂದು ಗುಪ್ತಚರ ದತ್ತಾಂಶಗಳಿಂದ ಗೊತ್ತಾಗಿದೆ. ಹೆಚ್ಚಿನ ಮೃತದೇಹಗಳು ಉದ್ವಿಗ್ನಗೊಂಡಿರುವ ಸ್ಥಳದಲ್ಲೇ ಉಳಿದಿವೆ. ಮೃತದೇಹಗಳ ಸ್ಥಳಾಂತರಕ್ಕೆಗೆ ಏನೂ ಮಾಡಲಾಗುತ್ತಿಲ್ಲ ಎಂದು ವಾಗ್ರಾಮ್ ಪೊಗೊಸ್ಯಾನ್ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದಿದ್ದಾರೆ.
ಅಜರ್ ಬೈಜಾನ್ ಮತ್ತು ಅರ್ಮೇನಿಯಾ ನಡುವಿನ ವಿವಾದಿತ ಪ್ರದೇಶವಾದ ನಾಗೋರ್ನೊ-ಕರಾಬಖ್ ಪ್ರಾಂತ್ಯ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ. ಈ ಪ್ರಾಂತ್ಯದ ಏಳು ಜಿಲ್ಲೆಗಳು ಅಜರ್ ಬೈಜಾನ್ ಗೆ ಸೇರಿರುವುದಾಗಿ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟಿದ್ದರೂ, ಸ್ವಯಂ ಘೋಷಿತ ಅರ್ಟ್ ಸಖ್ ಈ ಪ್ರದೇಶವನ್ನು ನಿಯಂತ್ರಣದಲ್ಲಿಟ್ಟುಕೊಂಡಿದೆ.
ಕಳೆದ ವಾರ ಅಜರ್ ಬೈಜಾನ್ ನ ಒಂದು ಹೆಲಿಕಾಪ್ಟರ್ ಮತ್ತು ಮೂರು ಡ್ರೋಣ್ ಗಳನ್ನು ಅರ್ಮೇನಿಯಾ ಹೊಡೆದುರುಳಿಸಿದ ನಂತರ ಘರ್ಷಣೆ ತೀವ್ರಗೊಂಡಿದೆ.
ಇದನ್ನೂ ಓದಿ: ಹತ್ರಾಸ್ ಸಂತ್ರಸ್ತೆ ಕೊನೆಯದಾಗಿ ಮಾತನಾಡಿದ ವಿಡಿಯೋ ವೈರಲ್: ಆಕೆ ಹೇಳಿದ್ದೇನು?