ಸಗಣಿ ಚಿಪ್‌ಗಳು ಮೊಬೈಲ್‌ ರೇಡಿಯೇಡಿಷನ್‌ ಹೇಗೆ ಕಡಿಮೆ ಮಾಡುತ್ತವೆ ಸಾಬೀತು ಪಡಿಸಿ: ವಿಜ್ಞಾನಿಗಳ ಸವಾಲು

ದನದ ಸಗಣಿಯಿಂದ ಮಾಡಿದ ಚಿಪ್‌ಗಳನ್ನು ಬಿಡುಗಡೆ ಮಾಡಿದ್ದ ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭ ಭಾಯಿ ಕಥಿರಿಯಾ, ಈ ಚಿಪ್‌ಗಳ ಮೊಬೈಲ್‌ ರೇಡಿಯೇಚನ್‌ಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳಿಕೆ ನೀಡಿದ್ದರು. ಅವರ ಹೇಳಿಕೆಯನ್ನು ವಿರೋಧಿಸಿರುವ 600ಕ್ಕೂ ಹೆಚ್ಚು ವಿಜ್ಞಾನಿಗಳು ಕಥಿರಿಯಾ ಅವರು ತಮ್ಮ ಹೇಳಿಕೆಯಂತೆ ಸಗಣಿ ಚಿಪ್‌ಗಳು ಮೊಬೈಲ್‌ ರೇಡಿಯಷನ್‌ಗಳನ್ನು ಕಡಿಮೆ ಮಾಡುವುದನ್ನು ಸಾಬೀತು ಪಡಿಸಬೇಕು ಎಂದು ಸವಾಲು ಹಾಕಿದ್ದಾರೆ.

ದನದ ಸಗಣಿಯಿಂದ ಮಾಡಿದ ಚಿಪ್ ಮೊಬೈಲ್ ರೇಡಿಯೇಷನ್’ನ್ನು ಕಡಿಮೆ ಮಾಡುತ್ತದೆ ಎಂಬುದನ್ನು ಯಾವ ವಿಜ್ಞಾನಿಗಳು, ಎಲ್ಲಿ ಪ್ರಯೋಗಗಳನ್ನು ನಡೆಸಿದ್ದಾರೆ. ಅಧ್ಯಯನದ ಪ್ರಮುಖ ಸಂಶೋಧಕರು ಯಾರು, ಸಂಶೋಧನೆಯ ವರದಿಯನ್ನು ಎಲ್ಲಿ ಪ್ರಕಟಿಸಲಾಗಿದೆ ಎಂಬೆಲ್ಲಾ ಮಾಹಿತಿಗಳನ್ನು ನೀಡಿ ಎಂದು ಇಂಡಿಯಾ ಮಾರ್ಚ್ ಫಾರ್ ಸೈನ್ಸ್ ನ ಮುಂಬೈ ಅಧ್ಯಾಯದ ಹೇಳಿಕೆಯಲ್ಲಿ ವಿಜ್ಞಾನಿಗಳು ಕೇಳಿದ್ದಾರೆ.

ಕಳೆದ ವಾರವಷ್ಟೇ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭ್‌ಭಾಯಿ ಕಥಿರಿಯಾ ಅವರು, ದನದ ಸಗಣಿಯಿಂದ ತಯಾರಿಸಿದ ಚಿಪ್‌ನ್ನು ಬಿಡುಗಡೆಗೊಳಿಸಿದ್ದರು. ಬಳಿಕ ಇದರ ಬಳಕೆಯಿಂದ ಮೊಬೈಲ್‌ ಹ್ಯಾಂಡ್‌ಸೆಟ್‌ಗಳಿಂದ ಹೊರಸೂಸುವ ರೇಡಿಯೇಷನ್‌ (ವಿಕಿರಣ) ತಡೆಯಬಹುದು ಎಂದು ಹೇಳಿದ್ದರು.

“ಸಗಣಿ ಎಲ್ಲರನ್ನೂ ರಕ್ಷಿಸುತ್ತದೆ. ಇದು ವಿಕಿರಣ ವಿರೋಧಿಯಾಗಿದ್ದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದೊಂದು ರೇಡಿಯೇಷನ್‌ ಚಿಪ್‌ ಆಗಿದ್ದು, ಮೊಬೈಲ್‌ ಫೋನ್‌ಗಳ ರೇಡಿಯೇಷನ್‌ ತಡೆಯಲು ಇವನ್ನು ಮೊಬೈಲ್‌ನಲ್ಲಿ ಬಳಸಬಹುದು. ಖಾಯಿಲೆಗಳಿಂದಲೂ ಇದು ರಕ್ಷಿಸಲಿದೆ ಎಂದು ತಿಳಿಸಿದ್ದರು.


ಇದನ್ನೂ ಓದಿ: ಸಚಿವೆಯನ್ನು ಐಟಂ ಎಂದು ಕರೆದ ಮಾಜಿ ಸಿಎಂ: ಬಿಜೆಪಿಗರಿಂದ ತರಾಟೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights