ಹೆಣದ ಮೇಲೆ ರಾಜಕಾರಣ ಮಾಡುವುದು ಬಿಜೆಪಿಯ ಚಾಳಿ: ಜಿ ಪರಮೇಶ್ವರ್
ಹೆಣದ ಮೇಲೆ ರಾಜಕಾರಣ ಮಾಡುವುದು ಬಿಜೆಪಿಯವರಿಗೆ ಅಭ್ಯಾಸವಾಗಿದೆ. ಸುಳ್ಳು ಹೇಳುವುದು ಅವರ ಜಾಯಮಾನವಾಗಿದೆ. ಈಗ ಬಿಹಾರದಲ್ಲಿಯೂ ಸುಳ್ಳಿನ ಕಂತೆ ಕಟ್ಟುತ್ತಿದ್ದಾರೆ. ಜಗತ್ತಿನಲ್ಲಿಯೇ ಇನ್ನೂ ಕೊರೊನಾಗೆ ಲಸಿಕೆ ಇಲ್ಲದಿದ್ದರೂ, ಉಚಿತ ಲಸಿಕೆ ಕೊಡುತ್ತೇವೆ ಎಂದು ಹೇಳಿ ಕೀಳು ಮಟ್ಟದ ರಾಜಕಾರಣವನ್ನು ಬಿಜೆಪಿ ಮಾಡುತ್ತಿದ್ದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಆರ್‌ಆರ್ ನಗರದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಗೂಂಡಾಗಿರಿ ಮಾಡುತ್ತಿದ್ದಾರೆ ಎಂಬ ಶೋಭಾ ಕರದ್ಲಾಜೆ ಆರೋಪಕ್ಕೆ ತಿರುಗೇಟು ನೀಡಿ, “ಗುಂಡಾಗಿರಿ ಯಾರೂ ಮಾಡಲು ಹೋಗಿಲ್ಲ, ಖಂಡಿತಾ ಎಲ್ಲರೂ ರಾಜಕಾರಣ ಮಾಡುತ್ತಾರೆ. ನಾವೆಲ್ಲ ರಾಜಕಾರಣಿಗಳು ರಾಜಕಾರಣವನ್ನೇ ಮಾಡುವುದು. ರಾಜಕಾರಣವನ್ನೆ ಮಾಡಬಾರದು ಎಂದರೇ ಅವರು ಇನ್ನೇನು ಮಾಡುತ್ತಿದ್ದಾರೆ. ಅವರೂ ರಾಜಕಾರಣವನ್ನೇ ತಾನೆ ಮಾಡುತ್ತಿರುವುದು. ನಮ್ಮ ಸಂವಿಧಾನದಲ್ಲಿ ಮಲ್ಟಿ ಪಾರ್ಟಿ ರಾಜಕಾರಣಕ್ಕೆ ಅವಕಾಶ ಇದೆ. ಗೂಂಡಾಗಿರಿ ಡೆಫಿನೇಷನ್ ಅವರೇ ಹೇಳಬೇಕು ಎಂದಿದ್ದಾರೆ.
ಇದನ್ನೂ ಓದಿ: RRನಗರ ಅಖಾಡ; ಕೈ, ತೆನೆಗಿಂತ ಬಿಜೆಪಿಗಿದೆ ಅದೃಷ್ಟ!
ಶಿರಾದಲ್ಲಿ ಬಿಜೆಪಿ ಈಗಾಗಲೇ ಗೆದ್ದುಬಿಟ್ಟಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಬಿಜೆಪಿ ಗೆದ್ದಿದ್ದರೆ ಇಷ್ಟೆಲ್ಲಾ ಸರ್ಕಸ್ ಯಾಕೆ ಮಾಡುತ್ತಿದ್ದಾರೆ. ಹೋಗಿ ಮನೆಯಲ್ಲಿ ಕುಳಿತುಕೊಳ್ಳಿ, ಇಲ್ಲಿ ಯಾಕೆ ಬಂದು ಮಾಡಬಾರದ್ದೆಲ್ಲ ಮಾಡುತ್ತಾರೆ ಎಂದಿದ್ದೂ , ನಾವು ಹತಾಶರಾಗುವ ಪ್ರಶ್ನೆಯೇ ಇಲ್ಲ,ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂಭ ಬರವಸೆ ವ್ಯಕ್ತ ಪಡಿಸಿದ್ದಾರೆ.
ರಾಜ್ಯದಲ್ಲಿ ಕಾಡುಗೊಲ್ಲರ ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಾಡಿ ಸಿಎಂ, ಬಜೆಟ್ ಕೊಟ್ಟಾಗ ಅಭಿವೃದ್ದಿ ನಿಗಮ ಮಾಡಿ ನೂರು ಕೋಟಿ ಹಣ ಇಟ್ಟಿದ್ದರೇ ಒಳ್ಳೆಯದಿತ್ತು, ಇವತ್ತು ಎಲ್ಲಾ ಕಾಡುಗೊಲ್ಲರು ಕೂಡಾ ಅವರ ಜೊತೆಯಲ್ಲಿಯೇ ಇರುತ್ತಿದ್ದರು. ಆದರೇ ಚುನಾವಣೆ ಬಂದಿದೆ ಅಂತ ಅಭಿವೃದ್ದಿ ನಿಗಮ ಮಾಡಿ ಮೂರು ಕಾಸು ಇಟ್ಟಿಲ್ಲ, ಈಗ ಅವರೇನು ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಶಿರಾ ಗೆಲ್ಲಲು ಬಿಜೆಪಿಗೆ ಕಷ್ಟ: ಕ್ಷೇತ್ರದಲ್ಲಿ ನಡೆಯುತ್ತಾ ವಿಜಯೇಂದ್ರ ತಂತ್ರಗಾರಿಕೆ!