ಭಾರತದಲ್ಲಿ 45,903 ಹೊಸ ಕೊರೊನಾ ಕೇಸ್ : 490 ಸೋಂಕಿತರು ಮಹಾಮಾರಿಗೆ ಬಲಿ..!

ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 45,903 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು 490 ಜನ ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ಸೋಮವಾರ 45,903 ಹೊಸ ಕೊರೊನವೈರಸ್ ಪ್ರಕರಣಗಳನ್ನು ವರದಿ ಮಾಡಲಾಗಿದ್ದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 85,53,657ಕ್ಕೆ ತಲುಪಿದೆ.

ಜೊತೆಗೆ ಭಾರತವು ಕಳೆದ 24 ಗಂಟೆಗಳಲ್ಲಿ 490 ಸಾವುಗಳನ್ನು ದಾಖಲಿಸಿದ್ದು, ಒಟ್ಟು ಸಾವಿನ ಸಂಖ್ಯೆ 1,26,611 ಕ್ಕೆ ಏರಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 5,09,673 ಆಗಿದೆ. ಒಂದೇ ದಿನ 48,405 ಜನ ಚೇತರಿಕೆ ಕಂಡಿದ್ದರೆ ಈವರೆಗೆ ಒಟ್ಟು 79,17,373 ಜನ ಚೇತರಿಸಿಕೊಂಡಿದ್ದಾರೆ. ಭಾನುವಾರ, 49,082 ರೋಗಿಗಳು ರೋಗದಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಮಾತ್ರವಲ್ಲದೇ ಅಕ್ಟೋಬರ್ 15 ರಿಂದ ಹೊಸ ದೈನಂದಿನ ಪ್ರಕರಣಗಳು ಕೆಳಮುಖವಾಗಿವೆ ಎಂದು ಸಚಿವಾಲಯ ತಿಳಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights