ನಾವಿರೋ ತನಕ ಹಾಸನದಲ್ಲಿ ಜೆಡಿಎಸ್‌ಗೆ ಸೋಲಿಲ್ಲ; ಬಿಜೆಪಿ ಗೆಲ್ಲಲ್ಲ: ಪ್ರಜ್ವಲ್‌ ರೇವಣ್ಣ

ಹಾಸನ ಜಿಲ್ಲೆಯಲ್ಲಿ ನಾವು ಇರುವ ತನಕ ಯಾರು ಏನು ಮಾಡೋಕೆ ಆಗಲ್ಲ. ಹಾಸನ ಜಿಲ್ಲೆಯಲ್ಲಿ ನಾವು ಯಾವ ಚುನಾವಣೆಯನ್ನೂ ಸೋಲಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

ಬಿಜೆಪಿಯವರು ಗ್ರಾಮ ಸ್ವರಾಜ್ ಕಾರ್ಯಕ್ರಮನಾದರೂ ಮಾಡ್ಲಿ. ಸ್ವರಾಜ್ ಮಜ್ದಾ ಬಸ್ಸನ್ನಾದ್ರು ಬಿಡ್ಲಿ. ಆದ್ರೆ ಹಾಸನ ಜಿಲ್ಲೆಯಲ್ಲಿ ನಾವ್ ಇರೋ ತನಕ ಯಾರು ಏನು ಮಾಡಕ್ಕಾಗಲ್ಲ. ಹಾಸನ ಜಿಲ್ಲೆಯಲ್ಲಿ ನಮ್ಮ ಕಾರ್ಯಕರ್ತರು ಇರುವವರೆಗೂ ಯಾವ ಚುನಾವಣೆನೂ ಜೆಡಿಎಸ್‌ ಸೋಲಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯಿತಿಯ ಚುನಾವಣೆಗಳಿಗಿಂತ ಚಿಕ್ಕ ಚುನಾವಣೆಯಾಗಿರುವ ಸಹಕಾರ ಸಂಘಗಳ ಚುನಾವಣೆಯಲ್ಲಿ ಕೂಡ ಕೇವಲ ಒಂದೇ ಒಂದು ಸ್ಥಾನವನ್ನು ಪಡೆಯಲು ಸಾಧ್ಯವಾಗಿಲ್ಲ.

ಐದು ಜನ ಮಿನಿಸ್ಟರಾದ್ರು ಬರಲಿ, ಇಲ್ಲಂದ್ರೆ ಸಚಿವ ಸಂಪುಟವೇ ಬರಲಿ ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನವನ್ನ ನಮ್ಮ ಕಾರ್ಯಕರ್ತರು ಛಿದ್ರವಾಗಲು ಬಿಡುವುದಿಲ್ಲ. ಆ ನಂಬಿಕೆ ನನಗಿದೆ. ಗ್ರಾಮಸ್ವರಾಜ್ ಕಾರ್ಯಕ್ರಮ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗಳ ಬಗ್ಗೆ 30ನೇ ತಾರೀಕು ಎಲ್ಲವನ್ನು ಮಾತನಾಡುತ್ತೇನೆ ಎಂದು ಪ್ರಜ್ವಲ್ ತಿಳಿಸಿದರು.

ಇನ್ನು ಬಿಜೆಪಿಯವರು ಕೊಡುವ ಆಶ್ವಾಸನೆಗಳು ಬರೀ ಆಶ್ವಾಸನೆಗಳಾಗಿಯೇ ಉಳಿಯಲಿವೆ. ಅವರ ಆಶ್ವಾಸನೆಗಳು ಎಂದಿಗೂ ಕಾರ್ಯ ರೂಪಕ್ಕೆ ಬರಲ್ಲ ಎಂದು ಟೀಕಿಸಿದ ಸಂಸದರು, ಶಿರಾ ಚುನಾವಣೆಯಲ್ಲಿ ಕಾಡುಗೊಲ್ಲರ ಮತವನ್ನು ಪಡೆಯಲು ಅವರಿಗೆ ನಿಗಮ ಮಾಡಿದರು.

ಆದರೆ ಅದಕ್ಕೆ ಹಣವನ್ನು ಬಿಡುಗಡೆ ಮಾಡದೆ ಇವತ್ತು ಅದು ಯಾವ ಸ್ಥಿತಿಗೆ ಬಂದಿದೆ ಯೋಚಿಸಬೇಕಾಗಿದೆ. ಹಾಗಾಗಿ ಬಿಜೆಪಿ ಸುಳ್ಳಿನ ರಾಜಕೀಯ ಮಾಡಿ ಜನರನ್ನು ಮರುಳು ಮಾಡುವುದು ಹೆಚ್ಚು ದಿನ ನಡೆಯುವುದಿಲ್ಲ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.


ಇದನ್ನೂ ಓದಿ: ಭಾರತದ ರೈತರ ಪ್ರತಿಭಟನೆಗೆ ಕೆನಡಾ ಪ್ರಧಾನಿ ಬೆಂಬಲ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights