ಈಶಾನ್ಯ ರಾಜ್ಯಗಳ ಪತ್ರಕರ್ತರು ಅಪಾಯದಲ್ಲಿದ್ದಾರೆ;  ತೀವ್ರ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ: ಹಿರಿಯ ಪತ್ರಕರ್ತರು

ಸಂಘರ್ಷದ ನಾಡುಗಳಾಗಿರುವ ಈಶಾನ್ಯ ರಾಜ್ಯಗಳಲ್ಲಿ ವರದಿ ಮಾಡುವ ಪರ್ತಕರ್ತರು ವಿಮೆ ಕೊರತೆ ಮತ್ತು ಹಿಂಸಾಚಾರದ ಬೆದರಿಕೆಗಳು ಸೇರಿದಂತೆ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತೆ ಸಜೋಯ್ ಹಜಾರಿಕಾ ಹೇಳಿದ್ದಾರೆ.

ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಆಯೋಜಿಸಿದ್ದ ವೆಬ್‌ನಾರ್‌ನಲ್ಲಿ ಮಾತನಾಡಿದ ಅವರು, ಈಶಾನ್ಯದಲ್ಲಿ ಪೆಟ್ರೀಚಿಯಾ ಮುಖಿಮ್‌ ಮೇಲೆ ನಡೆದ ಹಲ್ಲೆಯಂತಹ ದಾಳಿಗಳು ಪತ್ರಕರ್ತರ ಮೇಲೆ ಭಾರಿ ಆತಂಕ ಮತ್ತು ಬೆದರಿಕೆಯನ್ನು ಸೃಷ್ಠಿಸಿವೆ ಎಂದು ಹೇಳಿದ್ದಾರೆ.

“ಪತ್ರಕರ್ತರು ತಮ್ಮದೇ ರೀತಿಯಲ್ಲಿ ವರದಿ ಮಾಡಿದ್ದಕ್ಕಾಗಿ ಅವರನ್ನು ದೂಷಿಸುವುದು ತಪ್ಪು ಎಂದು ನಾನು ಭಾವಿಸುತ್ತೇನೆ. ಸ್ಥಳೀಯ ಪತ್ರಿಕೆಗಳಿಗೆ ಮತ್ತು ಟಿವಿ ಚಾನೆಲ್‌ಗಳಿಗೆ ವರದಿ ಮಾಡುವ ವರದಿಗಾರರನ್ನು ನವ ದೆಹಲಿಯಿಂದ ಪ್ರತ್ಯೇಕಿಸಬೇಕು ಎಂದು ನಾನು ಭಾವಿಸುತ್ತೇನೆ. ಇಲ್ಲವಾದರೆ ಈಶಾನ್ಯದಲ್ಲಿ ಏನು ನಡೆಯುತ್ತಿದೆ ಎಂಬುದಕ್ಕೆ ಅದು ಅಡ್ಡಿಯಾಗುತ್ತದೆ” ಎಂದು ಇಂಫಾಲ್ ಫ್ರೀ ಪ್ರೆಸ್‌ನ ಸಂಪಾದಕ ಪ್ರದೀಪ್ ಫಂಜೌಬಾಮ್ ಹೇಳಿದ್ದಾರೆ.

“ಈ ಪ್ರದೇಶದಲ್ಲಿ ಮಾಧ್ಯಮ ಪ್ರಾರಂಭಕ್ಕಾಗಿ ಸಹಯೋಗದ ಅವಶ್ಯಕತೆಯಿದೆ. ನಾವು ವಸ್ತುಸಂಗ್ರಹಾಲಯವಲ್ಲ. ಆದರೆ ಜೀವಂತ ಜಗತ್ತು ಎಂದು ಜಗತ್ತಿಗೆ ಹೇಳಲು ನಾವು ಬಯಸುತ್ತೇವೆ, ”ಎಂದು ಪ್ರಶಸ್ತಿ ಪುರಸ್ಕೃತ ಪತ್ರಕರ್ತೆ ತೆರೇಸಾ ರೆಹಮಾನ್ ಅವರು ಹೇಳಿದರು.


ಇದನ್ನೂ ಓದಿ: ಭಾರತದ ಮಾಧ್ಯಮಗಳು ದ್ವೇಷಬಿತ್ತುವ ಟ್ರೋಲ್‌ ಫ್ಯಾಕ್ಟರಿಗಳು: ಬ್ರಿಟನ್‌ ಸಂಸದ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights