ಫ್ಯಾಕ್ಟ್‌ಚೆಕ್ : ರಾಹುಲ್ ಗಾಂಧಿಗೆ ಮದುವೆಯಾಗಿ ಇಬ್ಬರು ಮಕ್ಕಳಿರುವುದು ನಿಜವೇ?

ರಾಹುಲ್ ಗಾಂಧಿ ಹುಡುಗಿಯೊಬ್ಬಳ ಜೊತೆ ಇರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಫೋಟೊದಲ್ಲಿರುವ ಹುಡುಗಿಯನ್ನು ರಾಹುಲ್ ಗಾಂಧಿ ಮದುವೆಯಾಗಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

Image

ತಾನು ಅವಿವಾಹಿತನೆಂದು ಭಾರತೀಯರಿಗೆ ಸುಳ್ಳು ಹೇಳಿ ಕೊಲಂಬಿಯಾದ ಮಹಿಳೆಯನ್ನು ಮದುವೆಯಾಗಿ 14 ವರ್ಷದ ಪುತ್ರ ನಿಯಾಕ್ ಹಾಗೂ 10 ವರ್ಷದ ಪುತ್ರಿ ಮಾಯಿಂಕ್ ಜೊತೆಗೆ ಲಂಡನ್ನಿನಲ್ಲಿ ಸಂಸಾರ ಮಾಡುತ್ತಿರುವುದಾಗಿ #ವಿಕ್ಕಿಲಿಕ್ಸ್ ಬಹಿರಂಗ ಪಡಿಸಿದೆ. ಕಾಂಗಿ ಗುಲಾಮರೇ ನಕಲಿ ಗಾಂಧಿಯ ಅದೆಷ್ಟು ಸುಳ್ಳು ನಂಬುತ್ತೀರಿ? ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿರು ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ರಾಹುಲ್ ಗಾಂಧಿಯವರ ಮದುವೆಗೆ ಸಂಬಂಧಿಸಿದಂತೆ WikiLeaks.org ನಲ್ಲಿ ಹುಡುಕಿದಾಗ, ಯಾವುದೇ ಸೂಕ್ತ ಮಾಹಿತಿ ಕಂಡುಬಂದಿಲ್ಲ. ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಇದು ಸ್ಪ್ಯಾನಿಷ್ ನಟಿ, ನತಾಲಿಯಾ ರಾಮೋಸ್ ಎಂದು ತಿಳಿದು ಬಂದಿದೆ.

ನಟಿ, ನಿರ್ದೇಶಕಿ ನತಾಲಿಯಾ ರಮೋಸ್‌ 2017ರಲ್ಲಿ ರಾಹುಲ್ ಗಾಂಧಿಯವರೊಂದಿಗೆ ತೆಗೆದುಕೊಂಡ ಫೋಟೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Nathalia Ramos An (@nathaliaramos)

ಫೋಟೋದಲ್ಲಿ ರಾಹುಲ್‌ ಗಾಂಧಿ ಅವರೊಂದಿಗಿರುವ ಮಹಿಳೆ ಸ್ಪ್ಯಾನಿಶ್‌-ಅಮೆರಿಕದ ಟೆಲಿವಿಷನ್‌ ಸೀರೀಸ್‌ಗಳಲ್ಲಿ ನಟಿಸುವ ನಟಿ. ಅವರ ಹೆಸರು, ನತಾಲಿಯಾ ರಮೋಸ್‌. ನತಾಲಿಯಾ ಸೆಪ್ಟೆಂಬರ್‌ 15, 2017ರಲ್ಲಿ ರಾಹುಲ್‌ ಗಾಂಧಿ ಅವರೊಂದಿಗಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದರು. ಲಾಸ್‌ಏಂಜಲೀಸ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಇಬ್ಬರು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ತೆಗೆದ ಫೋಟೋವನ್ನು ಬಳಿಸಿಕೊಂಡು ಸುಳ್ಳುಸುದ್ದಿ ಹರಡಲಾಗುತ್ತಿದೆ.

2019ರಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಇದೇ ರೀತಿಯ ಪ್ರತಿಪಾದನೆಯನ್ನು ಮಾಡುತ್ತಾ, ರಾಹುಲ್ ಗಾಂಧಿಗೆ ಮದುವೆಯಾಗಿ ಇಬ್ಬರು ಮಕ್ಕಳು ಇದ್ದಾರೆ ಎಂದು ಸುಳ್ಳು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿತ್ತು.

ಒಟ್ಟಾರೆಯಾಗ ಹೇಳುವುದಾದರೆ, ಸೆಪ್ಟೆಂಬರ್‌ 15, 2017ರಲ್ಲಿ ರಾಹುಲ್‌ ಗಾಂಧಿ ಅವರೊಂದಿಗೆ, ನಟಿ ನತಾಲಿಯಾ ಫೋಟೊವನ್ನು ತೆಗೆಸಿಕೊಂಡಿದ್ದು, ತಮ್ಮಇನ್‌ಸ್ಟಾ ಮತ್ತು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಟ್ವಿಟರ್ ನಲ್ಲಿ ಹಂಚಿಕೊಂಡ ಫೋಟೊವನ್ನು, ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಎಲ್ಲಡೆ ವೈರಲ್ ಮಾಡಿ ರಾಹುಲ್ ಗಾಂಧಿ ಮದುವೆ ಆಗಿ ಮುಚ್ಚಿಟ್ಟಿದ್ದಾರೆ. ಕೊಲಂಬಿಯಾದ ಮಹಿಳೆಯನ್ನು ಮದುವೆಯಾಗಿ 14 ವರ್ಷದ ಪುತ್ರ ನಿಯಾಕ್ ಹಾಗೂ 10 ವರ್ಷದ ಪುತ್ರಿ ಮಾಯಿಂಕ್ ಜೊತೆಗೆ ಲಂಡನ್ನಿನಲ್ಲಿ ಸಂಸಾರ ಮಾಡುತ್ತ ಮದುವೆ ಆಗಿಲ್ಲ ಎಂದು ರಾಹುಲ್ ಗಾಂಧಿ ಸುಳ್ಳು ಹೇಳಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಪ್ರಧಾನಿ ಮೋದಿ ಗಾಯಕಿ ರಿಹಾನಳನ್ನ ನೋಡುತ್ತಿರುವಂತೆ ಎಡಿಟ್ ಮಾಡಿದ ಚಿತ್ರ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights