ಗ್ರಾಮ ಪಂ. ಚುನಾವಣಾ ಮತ ಎಣಿಕೆ ಆರಂಭ; ಯಾರಿಗೆ ಸಿಗಲಿದೆ ಸ್ಥಳೀಯ ಸಂಸ್ಥೆಗಳ ಗದ್ದುಗೆ!

ರಾಜ್ಯದ 5,728 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ಇಂದು (ಬುಧವಾರ) ಹೊರಬೀಳಲಿದೆ. ಈಗಾಗಲೇ ಮತ ಎಣಿಕೆ ಬುಧವಾರ ಆರಂಭವಾಗಿದ್ದು, 2.22 ಲಕ್ಷ ಅಭ್ಯರ್ಥಿಗಳ ಲಕ್‌ ನಿರ್ಧಾರವಾಗಲಿದೆ.

ಎರಡು ಹಂತಗಳಲ್ಲಿ 5,728 ಗ್ರಾಮ ಪಂಚಾಯಿತಿಗಳ 72,000 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಶೇ.80ಕ್ಕೂ ಹೆಚ್ಚು ಮತದಾನವಾಗಿತ್ತು. 2,22,814 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇವರಲ್ಲಿ ಈಗಾಗಲೇ 8074 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎಲ್ಲಾ ಜಿಲ್ಲೆಗಳಲ್ಲಿ ಬ್ಯಾಲೆಟ್‌ ಪೇಪರ್‌ಗಳನ್ನು ಬಳಸಿ ಚುನಾವಣೆ ನಡೆಸಲಾಗಿದೆ. ಅದರೆ, ಬೀದರ್‌ ಜಿಲ್ಲೆಯಲ್ಲಿ ಮಾತ್ರ ಇವಿಎಂ ಬಳಸಲಾಗಿದೆ. ಬ್ಯಾಲೆಟ್‌ ಪೇಪರ್‌ಗಳ ಎಣಿಕೆ ನಿಧಾನವಾಗುವುದರಿಂದ ತಡರಾತ್ರಿಯ ವರೆಗೂ ಎಣಿಕೆ ಕಾರ್ಯ ನಡೆಯಬಹುದು ಎಂದು ಹೇಳಲಾಗಿದೆ.

ಗ್ರಾಮ ಪಂಚಾಯತಿ ಚುನಾವಣೆಗಳ ಪಕ್ಷಾತೀತವಾಗಿ ನಡೆದರೂ ಸಹ, ಹೆಚ್ಚಿನ ಅಭ್ಯರ್ಥಿಗಳು ಪಕ್ಷಗಳ ಬೆಂಬಲಿಂದಲೇ ಸ್ಪರ್ಧಿಸಿದ್ದಾರೆ. ಚಿಹ್ನೆಗಳು ಮಾತ್ರ ರೀಯಕೀಯ ಪಕ್ಷಗಳ ಚಿಹ್ನೆಗಳಿಂದ ಹೊರತಾಗಿವೆ. ಗ್ರಾಮ ಪಂಚಾಯತಿ ಚುನಾವಣೆಗಳು ಸ್ಥಳೀಯ ಮಟ್ಟದಲ್ಲಿ ಪಕ್ಷಗಳ ನೆಲೆಯನ್ನು ಭದ್ರಗೊಳಿಸುತ್ತವೆ. ಆದ್ದರಿಂದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಈ ಚುನಾವಣೆಯನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡಿವೆ.

ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, ರಾಜ್ಯದ 226 ಕೇಂದ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ.


ಇದನ್ನೂ ಓದಿ: ಬಿಹಾರ ನಿತೀಶ್‌ ಸರ್ಕಾರಕ್ಕೆ ಸಂಕಷ್ಟ: 17 JDU ಶಾಸಕರು ಸಂಪರ್ಕದಲ್ಲಿದ್ದಾರೆ RJD ನಾಯಕ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights