ಸಧ್ಯದಲ್ಲೇ ಛಿದ್ರಗೊಳ್ಳಲಿದೆ ಟಿಎಂಸಿ; 5,000 ಕಾರ್ಯಕರ್ತರು ಬಿಜೆಪಿ ಸೇರುತ್ತಾರೆ: ಸುವೇಂದು ಅಧಿಕಾರಿ
ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಅಸಮಾಧಾನ ಹೊರಕಾಗಿ ಟಿಎಂಸಿ ತೊರೆದು ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ, ತೃಣಮೂಲ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಸಧ್ಯದಲ್ಲೇ ಟಿಎಂಸಿ ಛಿದ್ರಗೊಳ್ಳಲಿದ್ದು, ಟಿಎಂಸಿ ಯ 5,000 ಕಾರ್ಯಕರ್ತರು ಬಿಜೆಪಿ ಸೇರಲಿದ್ದಾರೆ ಎಂದು ಹೇಳಿದ್ದಾರೆ.
ಪುರ್ಬಾದಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಸುವೇಂದು ಅಧಿಕಾರಿ, ಶೀಘ್ರದಲ್ಲಿಯೇ ಟಿಎಂಸಿ ಛಿದ್ರಗೊಳ್ಳಲಿದ್ದು, ಕೆಲವು ಪುರಸಭೆ ಸದಸ್ಯರೊಂದಿಗೆ ಸೌಮೇಂದು ಹಾಗೂ 5 ಸಾವಿರ ಟಿಎಂಸಿ ಕಾರ್ಯಕರ್ತರು ಕೇಸರಿ ಪಕ್ಷವನ್ನು ಸೇರಲಿದ್ದಾರೆ ಎಂದರು.
ಕಮಲ ಪ್ರತಿಯೊಂದು ಮನೆಯಲ್ಲಿಯೂ ಅರಳುತ್ತಿದ್ದು, ತಮ್ಮ ಸಹೋದರ ಕೈಗೊಂಡ ಹೆಜ್ಜೆಯಂತೆ ಬಿಜೆಪಿ ಸೇರುತ್ತಿರುವುದಾಗಿ ಸೌಮೇಂದು ಗುರುವಾರ ಹೇಳಿಕೆ ನೀಡಿದ್ದರು. ಅಧಿಕಾರಿ ಮನೆಯಲ್ಲಿ ಇತರ ಇಬ್ಬರು ಸದಸ್ಯರು ಟಿಎಂಸಿ ಕ್ಯಾಂಪ್ ನಲ್ಲಿದ್ದಾರೆ.
ಕಳೆದವಾರ ಪಶ್ಚಿಮ ಬಂಗಾಳದಲ್ಲಿ ಗೃಹ ಸಚಿವ ಅಮಿತ್ ಶಾ ನಡೆಸಿದ ರ್ಯಾಲಿಯ ಸಂದರ್ಭದಲ್ಲಿ ಟಿಎಂಸಿಯಲ್ಲಿದ್ದ ಸುವೇಂದು ಅಧಿಕಾರಿ ಸೇರಿದಂತೆ ಹಲವು ಶಾಸಕರು ಮತ್ತು ಕಾರ್ಯಕರ್ತರು ಟಿಎಂಸಿ ತೊರೆದು ಬಿಜೆಪಿ ಸೇರಿದ್ದಾರೆ.
ಇದನ್ನೂ ಓದಿ: ಬಿಎಸ್ವೈ ವಿರುದ್ದ ಮತ್ತೆ ಯತ್ನಾಳ್ ವಾಗ್ದಾಳಿ: BJPಗೆ ತಲೆನೋವಾದ ಕೇಸರಿ ಶಾಸಕ!

