ದೇಶಾದ್ಯಂತ ಕೊರೊನಾ ಲಸಿಕೆ ಉಚಿತ – ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್

ಹೊಸ ರೂಪಾಂತರಿ ಕೊರೊನಾ ದೇಶಕ್ಕೆ ಕಾಲಿಡುತ್ತಿದ್ದಂತೆ ಇಂದಿನಿಂದ ದೇಶಾದ್ಯಂತ ಕೋವಿಡ್-19 ಲಸಿಕೆ ಡ್ರೈ ರನ್ ಆರಂಭವಾಗಿದೆ. ಮತ್ತೊಂದು ಸಂತಸದ ವಿಚಾರ ಅಂದರೆ ದೇಶಾದ್ಯಂತ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್​ ಸ್ಪಷ್ಟಪಡಿಸಿದ್ದಾರೆ.

ಕೊರೊನಾ ಲಸಿಕೆ ಪಡೆಯಲು ಇದ್ದ ಎಲ್ಲಾ ಊಹಾಪೋಹಗಳಿಗೆ ಸಚಿವರು ತೆರೆ ಎಳೆದಿದ್ದಾರೆ. ಕೊರೊನಾ ಲಸಿಕೆ ಪಡೆಯಲು ಯಾವುದೇ ಹಣ ನೀಡಬೇಕಾಗಿಲ್ಲ. ಈ ನಿಯಮ ರಾಜ್ಯ ರಾಜಧಾನಿ ದೆಹಲಿ ಮಾತ್ರವಲ್ಲ ಇಡೀ ದೇಶಕ್ಕೆ ಅನ್ವಯವಾಗುತ್ತದೆ. ಯಾವುದೇ ವದಂತಿಗಳಿಗೆ ಕಿವಿ ಕೊಡಬೇಡಿ ಎಂದು ಸಚಿವರು ಇಂದು ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ. ನಾವು ಮಾಡುತ್ತಿರುವ ಕೊರೋನಾ ವ್ಯಾಕ್ಸಿನ್ ಪ್ರಯೋಗ ಬಹಳ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದರು.

ಲಸಿಕೆ ಪ್ರಯೋಗ ಕುರಿತಾಗಿ ವಿವಿಧ ವದಂತಿಗಳು ಹರಿದಾಡುತ್ತಿವೆ. ಆದರೆ ಜನರು ಈ ವದಂತಿಗಳನ್ನು ನಂಬದೆ, ಉಚಿತ ಕೊರೋನಾ ಲಸಿಕೆ ಪಡೆಯುವತ್ತ ಗಮನ ಹರಿಸಿ ಎಂದು ಪುನರುಚ್ಚಿಸಿದರು. ದೆಹಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಡ್ರೈ ರನ್ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೋವಿಡ್ ಲಸಿಕೆಗೆ ಶುಲ್ಕ ಪಾವತಿಸಬೇಕೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ಈ ಕೊರೋನಾ ಲಸಿಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾತ್ರವಲ್ಲ, ಇಡೀ ರಾಷ್ಟ್ರಾದ್ಯಂತ ಉಚಿತವಾಗಿ ಲಭ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಸ್ಪಷ್ಟನೆ ನೀಡಿದ್ದಾರೆ.

ಇಂದಿನಿಂದ ದೇಶಾದ್ಯಂತ ಅಂದರೆ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಕೋವಿಡ್ ಡ್ರೈ ರನ್ ಆರಂಭವಾಗಿದೆ.

Spread the love

Leave a Reply

Your email address will not be published. Required fields are marked *