ಯುಪಿ: ಅಳಿವಿನಂಚಿನಲ್ಲಿರುವ ಅಪರೂಪದ ಡಾಲ್ಫಿನ್ ಹತ್ಯೆ ಮಾಡಿದ ಯುವಕರು..!

ಕಳೆದ ತಿಂಗಳು ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ಅಪರೂಪವಾಗಿ ಕಾಣಿಸಿಕೊಂಡ ಡಾಲ್ಫಿನ್ ಅನ್ನು ಸ್ಥಳೀಯ ಯುವಕರೇ ಹೊಡೆದು ಕೊಂದ ವೀಡಿಯೋ ವೈರಲ್ ಆಗಿದೆ. ಕೊಡಲಿ ಮತ್ತು ಕೋಲುಗಳನ್ನು ಬಳಸಿದ ಮೂವರು ಯುವಕರು ಗಂಗೆಟಿಕ್ ಡಾಲ್ಫಿನ್ ಅನ್ನು ಹೊಡೆದು ಕೊಂದಿದ್ದಾರೆ. ಡಾಲ್ಫಿನ್ ಅನ್ನು ನಿರ್ದಯವಾಗಿ ಹೊಡೆಯುವುದನ್ನು ನೋಡಬಹುದಾದ ಘಟನೆಯ ವೀಡಿಯೊದಲ್ಲಿ ಕಾಣಿಸಿಕೊಂಡ ಮೂವರನ್ನು ಪೊಲೀಸರು ಈಗ ಬಂಧಿಸಿದ್ದಾರೆ.

ಮೂವರು ಪುರುಷರು ಡಾಲ್ಫಿನ್ ಅನ್ನು ಕೋಲಿನಿಮದ ಹೊಡೆಯಲು ಹೋದಾಗ ನೀರು ಅದರ ರಕ್ತದಿಂದ ಕೆಂಪಾಗಾಗಿರುವ ದೃಶ್ಯ ಪ್ರಾಣಿಪ್ರಿಯರನ್ನು ಕೆರಳಿಸಿತ್ತು.

ವೀಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಣಿ ಪ್ರಿಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು ತಪ್ಪಕಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು. ಡಾಲ್ಫಿನ್ ಅನ್ನು ನೀರಿನಲ್ಲಿ ಹ್ಯಾಕ್ ಮಾಡುವ ವೀಡಿಯೊದಲ್ಲಿ ಕಾಣಿಸಿಕೊಂಡ ಪ್ರಮುಖ ಆರೋಪಿಗಳನ್ನು ಡಿಸೆಂಬರ್ 31ರಂದು ಪೊಲೀಸರು ಬಂಧಿಸಿದ್ದಾರೆ.

ಅತಿರೇಕದ ಬೇಟೆಯಾಡುವಿಕೆಯ ಘಟನೆಗಳಿಂದಾಗಿ ಭಾರತದಲ್ಲಿ ಅಳಿವಿನಂಚಿನಲ್ಲಿರುವ ಅಪರೂಪದ ಸಸ್ತನಿ ಜಾತಿಗಳಲ್ಲಿ ಗಂಗೆಟಿಕ್ ಡಾಲ್ಫಿನ್‌ಗಳು ಸೇರಿವೆ. ಹೀಗಾಗಿ ಡಾಲ್ಫಿನ್ ಹೊಡೆದು ಕೊಂದ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.