ಫ್ಯಾಕ್ಟ್‌ಚೆಕ್: ಖರ್ಗೆಯವರ ಬಟ್ಟೆಗೆ ರಾಹುಲ್ ಗಾಂಧಿ ತಮ್ಮ ಕೈ ಮುಟ್ಟಿದ್ದು ನಿಲ್ಲಿ ಎಂದು ತಿಳಿಸಲು: ಇಲ್ಲಿದೆ ಪೂರ್ಣ ವಿಡಿಯೋ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬೆನ್ನಿಗೆ ತಮ್ಮ ಕೈ ಒರೆಸಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅಂದರೆ ಖರ್ಗೆಯವರಿಗೆ ರಾಹುಲ್ ಅಗೌರವ ಸೂಚಿಸಿದ್ದಾರೆ ಎನ್ನುವ ಅರ್ಥದಲ್ಲಿ  ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ

ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದರೂ ಅವರನ್ನು ರಿಮೋಟ್‌ ಕಂಟ್ರೋಲ್‌ ಅಧ್ಯಕ್ಷ ಎಂದೇ BJP ಟೀಕಿಸುತ್ತದೆ. ಗಾಂಧಿ ಕುಟುಂಬದ ಮಾತುಗಳನ್ನು ಕೇಳಿಕೊಂಡಿರುವ ಎಐಸಿಸಿ ಅಧ್ಯಕ್ಷ ಎಂತಲೂ ಕರೆಯುತ್ತಾರೆ. ಇಂತಹ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರ  ಬೆನ್ನಿಗೆ ಕೈ ಸವರಿದ್ದು, “ಖರ್ಗೆ ಅವರನ್ನು ರಾಹುಲ್‌ ಗಾಂಧಿ ಅವಮಾನಿಸುತ್ತಿದ್ದಾರೆ” ಎಂದು ಬಿಜೆಪಿ ಟೀಕಿಸಿದೆ.

 

ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಬೆನ್ನಿಗೆ ಕೈ ಒರೆಸಿದಂತೆ ವಿಡಿಯೋದಲ್ಲಿ ತೋರಿಸಲಾಗಿದೆ. ಹಾಗಿದ್ದರೆ ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಮತ್ತು BJP ಮಾಡುತ್ತಿರುವ ಆಪಾದನೆ ನಿಜವೇ ಎಂದು ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮುಂದೆ ನಡೆದುಕೊಂಡು ಹೋಗುತ್ತಿರುವಾಗ ರಾಹುಲ್‌ ಗಾಂಧಿ ಅವರು ಬಾಯಿ ಮುಟ್ಟಿ, ನಂತರ ಖರ್ಗೆ ಬೆನ್ನಿನ ಮೇಲೆ ಕೈ ಇಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಆದರೆ BJP ಯು ವಿಡಿಯೋದ ಪೂರ್ಣ ತುಣುಕನ್ನು ಹಂಚಿಕೊಳ್ಳದೆ ಜನರನ್ನು ತಪ್ಪುದಾರಿಗೆಳೆಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಇದರ ಬೆನ್ನಲ್ಲೆ ಕಾಂಗ್ರೆಸ್ ಪೂರ್ಣ ವಿಡಿಯೋವನ್ನು ಬಿಡುಗಡೆ ಮಾಡಿದ್ದು, BJP ಆರೋಪಕ್ಕೆ ಕಾಂಗ್ರೆಸ್‌ ತಿರುಗೇಟು ನೀಡಿದೆ. ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ವಿಭಾಗದ ಉಸ್ತುವಾರಿ ನಿತಿನ್‌ ಅಗರ್ವಾಲ್‌ ಅವರು ಈ ಕುರಿತು ಪ್ರತಿಕ್ರಿಯಿಸಿದ್ದಾರೆ. “ವಿಡಿಯೊವನ್ನು ಪೂರ್ತಿಯಾಗಿ ವೀಕ್ಷಿಸಿ. ಖರ್ಗೆ ಅವರನ್ನು ಅವರ ಮನೆಗೆ ಬಿಡಲು ರಾಹುಲ್‌ ಗಾಂಧಿ ಅವರು ಕರೆದಿದ್ದಾರೆ. ಆದರೆ, 40 ಪರ್ಸೆಂಟ್‌ ಕಮಿಷನ್‌ ಸರ್ಕಾರವು ಕರ್ನಾಟಕದಲ್ಲಿ ಪ್ರಚಾರ ಮಾಡಲು ಯಾವುದೇ ವಿಷಯಗಳಿಲ್ಲದೆ ಇಂತಹ ದುರುದ್ದೇಶಪೂರ್ವಕ, ನಕಲಿ ಅಂಶಗಳನ್ನು ಸುದ್ದಿ ಮಾಡುತ್ತಿದೆ” ಎಂದು ಟೀಕಿಸಿದ್ದಾರೆ.

ಸಂಸತ್‌ ಕಲಾಪದ ಬಳಿಕ ರಾಹುಲ್‌ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ತಮ್ಮ ಕಾರಿನಲ್ಲಿಯೇ ಮನೆಗೆ ಡ್ರಾಪ್‌ ಮಾಡಿದ್ದಾರೆ. ಡ್ರಾಪ್‌ ಮಾಡುವ ಕುರಿತು ನಿಲ್ಲಿ ಎಂದು ಮಾತನಾಡಿಸುವಾಗ ರಾಹುಲ್‌ ಗಾಂಧಿ ಅವರು ಖರ್ಗೆ ಬೆನ್ನು ಮುಟ್ಟಿದ್ದಾರೆ. ಅದರ ಪೂರ್ತಿ ವಿಡಿಯೊವನ್ನು ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರಿನಾತೆ ಟ್ವೀಟ್‌ ಮಾಡಿದ್ದಾರೆ. ಖರ್ಗೆ ಅವರು ರಾಹುಲ್‌ ಕಾರಿನಲ್ಲಿ ಕುಳಿತುಕೊಳ್ಳುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ಮಲ್ಲಿಕಾರ್ಜುನ ಖರ್ಗೆ ಅವರ ಕಾರು ಹಿಂದೆ ನಿಂತಿತ್ತು. ರಾಹುಲ್ ಗಾಂಧಿ ಅವರ ಕಾರು ಸಮೀಪದಲ್ಲಿಯೇ ಇತ್ತು. ಹೀಗಾಗಿ ಖರ್ಗೆ ಅವರನ್ನು ತಾವೇ ಮನೆವರೆಗೂ ಬಿಡುತ್ತೇನೆ ಎಂದು ರಾಹುಲ್ ಗಾಂಧಿ ಆಹ್ವಾನ ನೀಡಿದ್ದರು ಎಂದು ಪಕ್ಷದ ನಾಯಕಿ ಸುಪ್ರಿಯಾ ಶ್ರೀನಾತೆ ಅವರು ವಿಡಿಯೋ ಹಂಚಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಂಸತ್‌ ಕಲಾಪದ ಬಳಿಕ ರಾಹುಲ್‌ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ತಮ್ಮ ಕಾರಿನಲ್ಲಿಯೇ ಮನೆಗೆ ಡ್ರಾಪ್‌ ಮಾಡಿದ್ದಾರೆ. ಡ್ರಾಪ್‌ ಮಾಡುವ ಕುರಿತು ಮಾತನಾಡಿಸುವಾಗ ರಾಹುಲ್‌ ಗಾಂಧಿ ಅವರು ಖರ್ಗೆ ಬೆನ್ನು ಮುಟ್ಟಿದ್ದಾರೆ, ಇದನ್ನೆ BJP ತಪ್ಪಾಗಿ ಹಂಚಿಕೊಂಡಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಭಾರತದಲ್ಲಿ ಹುಟ್ಟುವುದೇ ಮಹಾಪಾಪ ಎಂದರೇ ಮಲ್ಲಿಕಾರ್ಜುನ ಖರ್ಗೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights