ಫ್ಯಾಕ್ಟ್‌ಚೆಕ್ : ಅಮೇರಿಕಾ ತನ್ನ ಧೀರ್ಘ ಪ್ರಯಾಣದ ರೈಲಿಗೆ ಅಂಬೇಡ್ಕರ್ ಭಾವಚಿತ್ರ ಅಳವಡಿಸಿದೆಯೇ?

ಅಮೇರಿಕಾ ಸರ್ಕಾರವು ತನ್ನ ದೂರದ ಪ್ರಯಾಣದ ರೈಲಿನಲ್ಲಿ ಬಿ. ಆರ್. ಅಂಬೇಡ್ಕರ್ ಅವರ ಪೋಸ್ಟರ್ ಅನ್ನು ಹಾಕುವ ಮೂಲಕ ಗೌರವ ಸೂಚಿಸಿದೆ ಎಂದು ಪ್ರತಿಪಾದಿಸಿದ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಾರತ ಸರ್ಕಾರವು ಮಾಡಬೇಕಾದ ಕೆಲಸವನ್ನು ಅಮೆರಿಕಾ ಮಾಡಿದೆ, ಆದರೆ ಭಾರತ ಮಾತ್ರ ಏನನ್ನೂ ಮಾಡಲಿಲ್ಲ ಎಂಬ ಹೇಳಿಕೆಯೊಂದಿಗೆ ಮತ್ತು ಈ ಸುದ್ದಿಯನ್ನು ವರದಿ ಮಾಡದ ಮಾಧ್ಯಮಗಳನ್ನು ಉಲ್ಲೇಖಿಸಿ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ? ಅಮೇರಿಕ ತನ್ನ ದೂರ ಪ್ರಯಾಣದ ರೈಲಿಗೆ ಅಂಬೇಡ್ಕರ್ ಅವರ ಭಾವಚಿತ್ರ ವಿರುವ ಪೋಸ್ಟರ್‌ ಅನ್ನು ಹಾಕಿ ಗೌರವ ಸೂಚಿಸಲಾಗಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ಅನ್ನು ಪರಿಶೀಲಿಸಿದಾಗ, ಅಂಬೇಡ್ಕರ್‌ ಅವರ ಗೌರವಾರ್ಥವಾಗಿ ಅಮೇರಿಕಾ ಸರ್ಕಾರವೂ ತನ್ನ ದೂರ ಪ್ರಯಾಣದ ರೈಲಿಗೆ ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಹಾಕಿಲ್ಲ ಎಂಬುದು ದೃಢವಾಗಿದೆ. ಮೇಲಾಗಿ ಅಮೇರಿಕಾ ಸರ್ಕಾರ ಇಷ್ಟು ದೊಡ್ಡ ಕೆಲಸ ಮಾಡಿದ್ದರೆ ಎಲ್ಲೆಡೆ ಸುದ್ದಿಯಾಗುತ್ತಿತ್ತು. ವೈರಲ್ ಪೋಸ್ಟ್‌ಅನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಸುದ್ದಿಯ ಮೂಲಗಳು ಲಭ್ಯವಾಗಿಲ್ಲ.

ಫೆಬ್ರವರಿ 20, 2017 ರಂದು ABP ಲೈವ್‌ನಲ್ಲಿ ಮತ್ತೊಂದು ಸುದ್ದಿ ಲೇಖನದಲ್ಲಿ ವೈರಲ್ ಚಿತ್ರಕ್ಕೆ ಹೊಂದಿಕೆಯಾಗುವ ದೆಹಲಿ ಮೆಟ್ರೋಗೆ ಸಂಬಂಧಿಸಿದ ಚಿತ್ರವನ್ನು ಬಳಸಲಾಗಿದೆ. ಈ ಚಿತ್ರನ್ನು ಅಮೇರಿಕಾದ ದೂರ ಪ್ರಯಾಣದ ರೈಲು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಝೀ ಬ್ಯುಸಿನೆಸ್, ವೆಬ್ ದುನಿಯಾ ಮತ್ತು ಇಂಡಿಯಾ ಟಿವಿಯಂತಹ ಮಾಧ್ಯಮ ಸಂಸ್ಥೆಗಳ ಇತರ ಸುದ್ದಿ ಲೇಖನಗಳಲ್ಲಿ ದೆಹಲಿ ಮೆಟ್ರೋದ ಪ್ರಾತಿನಿಧ್ಯವಾಗಿ ಚಿತ್ರವನ್ನು ಬಳಸಿಕೊಂಡಿವೆ. ರೈಲಿನಲ್ಲಿ ಬಿ.ಆರ್. ಅಂಬೇಡ್ಕರ್ ಅವರ ಚಿತ್ರವನ್ನು ವೆಬ್‌ನಲ್ಲಿ ಎಲ್ಲಿಯೂ ಹುಡುಕಲು ಸಾಧ್ಯವಾಗಲಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ದೀರ್ಘ ಪ್ರಯಾಣದ ರೈಲಿನಲ್ಲಿ ಬಿ.ಆರ್. ಅಂಬೇಡ್ಕರ್ ಅವರ ಪೋಸ್ಟರ್ ಅನ್ನು ಹಾಕಲು ಅಮೇರಿಕಾ ಸರ್ಕಾರ ಘೋಷಿಸಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ನ್ಯೂಸ್‌ ಮೊಬೈಲ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಭಾರತದಲ್ಲಿ ಹುಟ್ಟುವುದೇ ಮಹಾಪಾಪ ಎಂದರೇ ಮಲ್ಲಿಕಾರ್ಜುನ ಖರ್ಗೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights