ಫ್ಯಾಕ್ಟ್‌ಚೆಕ್ : ಒಬ್ಬ ಹುಡುಗಿಗೆ ಇಬ್ಬರು ಹುಡುಗರು ತಾಳಿ ಕಟ್ಟುವ ವೈರಲ್ ವಿಡಿಯೋ ಹಿಂದಿನ ವಾಸ್ತವವೇನು?

ಒಬ್ಬ ಹುಡುಗಿಗೆ ಇಬ್ಬರು ಹುಡುಗರು ತಾಳಿ ಕಟ್ಟುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಸಾಮಾಜಿಕ ಮಾಧ್ಯಮದ ಬಳಕೆದಾರರಾದ ಮೊಹಮ್ಮದ್ ತನ್ವೀರ್ ಎಂಬುವವರು ತಮ್ಮ ಟ್ವಿಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು ” ಇಬ್ಬರು ಹುಡುಗರು ಒಬ್ಬ ಹುಡುಗಿಗೆ ಹಣೆಗೆ ಸಿಂಧೂರ ಹಚ್ಚಿ ಒಬ್ಬರ ನಂತರ ಒಬ್ಬರು ಮಂಗಳಸೂತ್ರವನ್ನು ಕಟ್ಟಿದರು ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

DNA ಸುದ್ದಿ ವಾಹಿನಿಯ ಹಿಂದಿಯ ಅಧಿಕೃತ ಟ್ವಿಟರ್ ಖಾತೆಯು ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಟ್ವೀಟ್ ಮಾಡಿದ್ದು, ಅದರ ಬಗ್ಗೆ ಪೂರ್ಣ ಲೇಖನವನ್ನು ಹಂಚಿಕೊಂಡಿದೆ.

ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋ ನಿಜವೇ? ಒಬ್ಬ ಹುಡುಗಿಗೆ ಇಬ್ಬರು ಹುಡುಗರು ಮಾಂಗಲ್ಯ ಕಟ್ಟಿರುವ ಘಟನೆ ಎಲ್ಲಿ ನಡೆದಿದೆ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲೂ ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ‘ಟುಕ್ಕಾ’ ಎಂಬ ಹೆಸರಿನಲ್ಲಿ ಫೇಸ್‌ಬುಕ್ ಪೇಜ್‌ ಲಭ್ಯವಾಗಿದ್ದು, ಇದರಲ್ಲಿ ವೈರಲ್ ವಿಡಿಯೋದ ಮೂಲ ವಿಡಿಯೋ ಲಭ್ಯವಾಗಿದೆ.ಈ ಪೇಜ್‌ನಲ್ಲಿ ಕೌಟುಂಬಿಕ ವಿಷಯಗಳನ್ನೊಳಗೊಂಡ ಮನರಂಜನೆಯ ವಿಡಿಯೋಗಳನ್ನು ಪ್ರಸಾರ ಮಾಡಲಾಗುತ್ತದೆ ಎಂದು ತಿಳಿಸಿದೆ.

ಸುಮಾರು 6ಲಕ್ಷಕ್ಕೂ ಹೆಚ್ಚಿನ ಜನ ಈ ಪೇಜ್‌ಅನ್ನು ಫಾಲೋ ಮಾಡುತ್ತಿದ್ದು. ಇದರಲ್ಲಿ ನಾಟಕೀಯ( ಸ್ಕ್ರಿಪ್ಟೆಡ್) ವಿಡಿಯೋಗಳನ್ನು ರಚಿಸಿ ಪೋಸ್ಟ್‌ ಮಾಡಲಾಗುತ್ತದೆ.

ಈಗ ವೈರಲ್ ಆಗಿರುವ ವಿಡಿಯೋವನ್ನು ನವೆಂಬರ್ 10, 2022 ರಂದು ಪೋಸ್ಟ್ ಮಾಡಲಾಗಿದೆ. ವೀಡಿಯೊದ ಕೊನೆಯಲ್ಲಿ 2 ಸೆಕೆಂಡುಗಳಿಗಿಂತ ಕಡಿಮೆ ಅವಧಿಗೆ ಡಿಸ್‌ಕ್ಲೈಮರ್‌ನಲ್ಲಿ, ‘ವೀಡಿಯೊವನ್ನು ತುಕ್ಕ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಿಸಲಾಗಿದ್ದು, ಸಂಪೂರ್ಣವಾಗಿ ಮನರಂಜನಾ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ ಎಂದು ತಿಳಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಇಬ್ಬರು ಹುಡುಗರು, ಒಬ್ಬ ಹುಡುಗಿಯನ್ನು ಮದುವೆಯಾಗುತ್ತಿರುವ ವಿಡಿಯೋ ಕ್ಲಿಪ್‌ಅನ್ನು ನಿಜವಾದ ವಿಡಿಯೋ ಅಲ್ಲ, ಇದನ್ನು ಮನರಂಜನಾ ಉದ್ದೇಶಗಳಿಗಾಗಿ ನವೆಂಬರ್ 10, 2022 ರಂದು ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ ಸ್ಕ್ರಿಪ್ಟ್ ವೀಡಿಯೊವಾಗಿದೆ. ಕೆಲವು ಸುದ್ದಿ ವಾಹಿನಿಗಳು ಈ ವಿಡಿಯೋವನ್ನು  (DNA ಹಿಂದಿ ಮತ್ತು ನ್ಯೂಸ್ 18 ಹಿಂದಿ) ನಿಜವಾದ ಘಟನೆ ಎಂಬ ಅಭಿಪ್ರಾಯ ಬರುವಂತೆ ಹಂಚಿಕೊಂಡಿದ್ದವು. ಆದರೆ ಇದೊಂದು ಸ್ಕ್ರಿಪ್ಟ್‌ ಮಾಡಲಾದ ವಿಡಿಯೋ ಎಂದು ಆಲ್ಟ್‌ ನ್ಯೂಸ್ ವರದಿ ಮಾಡಿದೆ.

ಕೃಪೆ: ಆಲ್ಟ್‌ ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಈ ಫೋಟೊದಲ್ಲಿರುವ ಮಹಿಳೆ ಮೋದಿ ಪತ್ನಿ ಜಶೋದಾಬೆನ್ ಅಲ್ಲ! ಮತ್ತ್ಯಾರು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights