ಮಹಾರಾಷ್ಟ್ರ ಚುನಾವಣೆ: ಆಡಳಿತಾರೂಢ ಎಂವಿಎ ಮೈತ್ರಿಗೆ ಜಯ; ದೊಡ್ಡ ಪಕ್ಷ ನಾವೇ ಎಂದ ಬಿಜೆಪಿ!

ಮಹಾರಾಷ್ಟ್ರ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶಗಳು ಹೊರ ಬಿದ್ದಿದ್ದು, ಶಿವಸೇನೆ ನೇತೃತ್ವದ ಎಂವಿಎ ಮತ್ತು ಪ್ರತಿಪಕ್ಷ ಬಿಜೆಪಿ ಇಬ್ಬರೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯ ಸಾಧಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಒಳಗೊಂಡ ಎಂವಿಎ ಚುನಾವಣೆಯಲ್ಲಿ ದೊಡ್ಡ ಗೆಲುವು ಸಾಧಿಸಿದೆ ಎಂದು ಎನ್‌ಸಿಪಿ ನಾಯಕರು ಹೇಳಿದ್ದಾರೆ. ಈ ಚುನಾವಣೆಗಳಲ್ಲಿ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಬಾಲಶಾಹೇಬ್ ಥೋರತ್ ಅವರು ಚುನಾವಣೆ ನಡೆದ ಗ್ರಾಮ ಪಂಚಾಯಿತಿಗಳಲ್ಲಿ ಶೇ .80 ರಷ್ಟು ಸ್ಥಾನಗಳನ್ನು ಎಂ.ವಿ.ಎ. ಗೆದ್ದಿದೆ ಎಂದು ಹೇಳಿದ್ದಾರೆ. “ಈ ಚುನಾವಣೆಯಲ್ಲಿ ಎಂವಿಎ ಮೈತ್ರಿ 80 ಶೇಕಡಾ ಗ್ರಾಮಗಳನ್ನು ಗೆದ್ದಿದ್ದು, ಕಾಂಗ್ರೆಸ್ ಪಕ್ಷವು 4,000 ಗ್ರಾಮ ಪಂಚಾಯಿತಿಗಳನ್ನು ಗೆದ್ದಿದೆ. ಇದು ಬಿಜೆಪಿಗೆ ಮತ್ತು ಅದರ ಕಾರ್ಯ ಶೈಲಿಗೆ ಬಲವಾದ ಸಂದೇಶವನ್ನು ರವಾನಿಸಿದೆ ”ಎಂದು ಅವರು ಹೇಳಿದರು.

ಆದರೆ, ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್, “ಎಂವಿಎ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿಗೆ ನೆರವಾಗಿದೆ. ನಾವು ನಮ್ಮ ಪ್ರಾಬಲ್ಯವನ್ನು ವಿಸ್ತರಿಸಲು ಸಾಕಷ್ಟು ಸ್ಥಳಾವಕಾಶ ಸಿಕ್ಕಿತು. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 6,000 ಪಂಚಾಯತಿಗಳನ್ನು ಗೆದ್ದಿದ್ದೇವೆ. ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. “ನೈಸರ್ಗಿಕ ವಿಪತ್ತಿನ ನಂತರ, ಈ ಎಂವಿಎ ಸರ್ಕಾರವು ಜನರ ತೊಂದರೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ”ಎಂದು ಹೇಳಿದ್ದಾರೆ.

ನಾಗಪುರ ಮತ್ತು ಔರಂಗಾಬಾದ್‌ನಲ್ಲಿ ಬಿಜೆಪಿಯು ಶಿವಸೇನೆಯನ್ನು ಸೋಲಿಸಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳಕ್ಕಿಂತ ಅಸ್ಸಾಂ ಚುನಾವಣೆ ಷಾ-ಮೋದಿಗೆ ಅತ್ಯಂತ ನಿರ್ಣಾಯಕ!

ಪಶ್ಚಿಮ ರಾಜ್ಯದ ಒಟ್ಟು 36 ಜಿಲ್ಲೆಗಳ ಪೈಕಿ 34 ಜಿಲ್ಲೆಗಳ 14,000 ಗ್ರಾಮ ಪಂಚಾಯಿತಿಗಳಿಗೆ ಶುಕ್ರವಾರ ಮತದಾನ ನಡೆದಿತ್ತು. ಮಹಾರಾಷ್ಟ್ರದಲ್ಲಿ 27,920 ಗ್ರಾಮ ಪಂಚಾಯಿತಿಗಳಿವೆ. ಅವುಗಳಲ್ಲಿ, ಈಗಾಗಲೇ ಸುಮಾರು 20,000 ಸ್ಥಾನಗಳಿಗೆ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ನವೀ ಮುಂಬೈ ಮಹಾನಗರ ಪಾಲಿಕೆಯ ಭಾಗವಾಗಬೇಕೆಂಬ ಒತ್ತಾಯಕ್ಕೆ ಒತ್ತಾಯಿಸಿ ಥಾಣೆ ಜಿಲ್ಲೆಯ ಕನಿಷ್ಠ 14  ಗ್ರಾಮಗಳು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಿದ್ದವು.

ಮಹಾರಾಷ್ಟ್ರ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶಗಳು: ಗ್ರಾಮ ಪಂಚಾಯಿತಿಗಳು ರಾಜ್ಯಾಡಳಿತದ ಮೂರನೇ ಹಂತವಾಗಿದ್ದು, ಪಕ್ಷದ ಚಿಹ್ನೆಗಳನ್ನು ಬಳಸದೆ ಚುನಾವಣೆಗಳು ನಡೆಯುತ್ತವೆ. ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆಗಳನ್ನು ಆಯೋಗವು ನೀಡುತ್ತದೆ.

ಡಿಸೆಂಬರ್‌ನಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳಲ್ಲಿ ಆಡಳಿತಾರೂ ಮಹಾ ವಿಕಾಸ್ ಅಘಾಡಿ ಜಯಗಳಿಸಿದ ಒಂದು ತಿಂಗಳ ನಂತರ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಿತು.

ಇದನ್ನೂ ಓದಿ: ಬಂಗಾಳ ಚುನಾವಣೆ: ಕಾಂಗ್ರೆಸ್‌-ಸಿಪಿಎಂ ಮೈತ್ರಿ; BJP-TMCಗಳನ್ನು ಮೀರಿಸಿ ಅಧಿಕಾರ ಹಿಡಿಯುತ್ತಾ ಎಡರಂಗ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights