ಜೆಎನ್‌ಯು ದೇಶದ್ರೋಹ ಪ್ರಕರಣ: ಕನ್ಹಯ್ಯ ಕುಮಾರ್‌ ಸೇರಿ 10 ಮಂದಿಗೆ ದೆಹಲಿ ಕೋರ್ಟ್‌ ಸಮನ್ಸ್

2016 ರ ಜೆಎನ್‌ಯು ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್‌ 15 ರಂದು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಮತ್ತು ಇತರ 9 ಜನರಿಗೆ ದೆಹಲಿ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿದೆ.

ಸಂಸತ್ತಿನ ದಾಳಿಯ ಅಪರಾಧಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದನ್ನು ಖಂಡಿಸಿ ಫೆಬ್ರವರಿ 9, 2016 ರಂದು ಜೆಎನ್‌ಯು ಕ್ಯಾಂಪಸ್‌ನಲ್ಲಿ ನಡೆದ ಪ್ರತಿಭಟನಾ ಮೆರವಣಿಕೆಯನ್ನು ಕನ್ಹಯ್ಯ ಕುಮಾರ್ ಮುನ್ನಡೆಸಿದ್ದರು. ಈ ವೇಳೆ ಇತರ ಆರೋಪಿಗಳು ಸೇರಿದಂತೆ ಎಲ್ಲರೂ ದೇಶದ್ರೋಹದ ಘೋಷಣೆ ಕೂಗಿದ್ದರು ಎಂದು ದೆಹಲಿ ಪೊಲೀಸರು ಆರೋಪಿಸಿ ಕನ್ಹಯ್ಯ ಕುಮಾರ್‌ ಅವರನ್ನು ಬಂಧಿಸಿದ್ದರು. ಅವರಿಗೆ ನ್ಯಾಯಾಲಯ ಜಾಮೀನು ನೀಡಿತ್ತು. ಇದೀಗ ದೆಹಲಿ ಪೊಲೀಸರು ಜಾರ್ಜ್‌ ಶೀಟ್‌ ಸಲ್ಲಿದ್ದು, ಅದರ ಆಧಾರದ ಮೇಲೆ ವಿಚಾರಣೆಗೆ ಹಾಜರಾಗುವಂತೆ ಎಲ್ಲರಿಗೂ ಸಮನ್ಸ್‌ ನೀಡಿದೆ.

ಚಾರ್ಜ್‌ಶೀಟ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಿರುವ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಧೀಶರಾದ ಡಾ.ಪಂಕಜ್ ಶರ್ಮಾ ಅವರು ಆರೋಪಿಗಳಾದ ಕನ್ಹಯ್ಯ ಕುಮಾರ್, ಸೈಯದ್ ಉಮರ್ ಖಾಲಿದ್, ಅನಿರ್ಬನ್ ಭಟ್ಟಾಚಾರ್ಯ, ಅಕ್ವಿಬ್ ಹುಸೇನ್, ಮುಜೀಬ್ ಹುಸೇನ್ ಗಟೂ, ಮುನೀಬ್ ಹುಸೇನ್ ಗಟೂ, ಉಮರ್ ಗುಲ್, ರಯೀದ್ ಬಶೀರ್ ರಶೀಸ್ ಭಟ್ ಅವರಿಗೆ ಸಮನ್ಸ್‌ ನೀಡಿದ್ದು, ಮಾರ್ಚ್‌ 15 ರಂದು ವಿಚಾರಣಗೆ ಹಾಜರಾಗಲು ಸೂಚಿಸಿದ್ದಾರೆ.

ಈ ಎಲ್ಲಾ ಆರೋಪಿಗಳ ವಿರುದ್ಧ, ಐಪಿಸಿ ಸೆಕ್ಷನ್‌ 124 ಎ (ದೇಶದ್ರೋಹ), 323 (ಸ್ವಯಂ ಪ್ರೇರಣೆಯಿಂದ ನೋವುಂಟು ಮಾಡುವುದು), 471 (ನಕಲಿ ದಾಖಲೆ ಬಳಕೆ), 143, 149 (ಕಾನೂನುಬಾಹಿರವಾಗಿ ಸಭೆ ಸೇರುವುದು), ‌147 (ಗಲಭೆಗೆ ಶಿಕ್ಷೆ) ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.


ಇದನ್ನೂ ಓದಿ: ರಿಂಕು ಶರ್ಮಾ ಹತ್ಯೆ: BJP ಹಾದಿಯಲ್ಲೇ ಕೇಸರಿ ಪಡೆಯನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಿದೆ AAP!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights