ಗುಜರಾತ್‌ ಚುನಾವಣೆ: BJPಗೆ ಭರ್ಜರಿ ಮುನ್ನಡೆ; ಹೀನಾಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌!

ಗುಜರಾತ್‌ನ 31 ಜಿಲ್ಲಾ ಪಂಚಾಯಿತಿಗಳು, 231 ತಾಲ್ಲೂಕು ಪಂಚಾಯತ್‌ಗಳು ಮತ್ತು 81 ಪುರಸಭೆಗಳಿಗೆ ಮಂಗಳವಾರ ಮತ ಎಣಿಕೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿದೆ.

ಇದೂವರೆಗೂ ಬಂದಿರುವ ಮಾಹಿತಿಯ ಅಂಕಿಅಂಶಗಳ ಪ್ರಕಾರ, ಒಟ್ಟು 81 ಪುರಸಭೆಗಳ ಪೈಕಿ 54 ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 2 ಮತ್ತು ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಒಂದರಲ್ಲಿ ಮುನ್ನಡೆ ಸಾಧಿಸಿವೆ.

ಇನ್ನು ಒಟ್ಟು 31 ಜಿಲ್ಲಾ ಪಂಚಾಯತ್ ಸ್ಥಾನಲ್ಲಿ ಬಿಜೆಪಿ 12 ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇದಲ್ಲದೆ, 231 ತಾಲೂಕು ಪಂಚಾಯಿತಿಗಳ ಪೈಕಿ 51 ಪಂಚಾಯತ್‌ಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದರೆ, ಕಾಂಗ್ರೆಸ್ 7 ರಲ್ಲಿ ಮುನ್ನಡೆ ಸಾಧಿಸಿದೆ ಎಂದು ತಿಳಿದು ಬಂದಿದೆ.

ಸ್ಥಳೀಯ ಸಂಸ್ಥೆಗಳ ಒಟ್ಟು 8,235 ಸ್ಥಾನಗಳ ಪೈಕಿ 7,998 ಸ್ಥಾನಗಳಿಗೆ ಭಾನುವಾರ ಮತದಾನ ನಡೆದಿದೆ. ಇದಕ್ಕೂ ಮುನ್ನ 237 ಸ್ಥಾನಗಳಿಗೆ ವಿವಿಧ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಗಳಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ತ್ರಿಕೋನ ಸ್ಪರ್ಧೆ ನಡೆದಿದೆ.

ಇದನ್ನೂ ಓದಿ: ಚುನಾವಣಾ ಸಮೀಕ್ಷೆ: ದ್ರಾವಿಡ ನಾಡಿನಲ್ಲಿ BJP ಮೈತ್ರಿಗೆ ಭಾರೀ ಮುಖಭಂಗ; DMK-ಕಾಂಗ್ರೆಸ್‌ಗೆ ಅಧಿಕಾರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights