ಇರಾಕ್‌ ನೆಲೆಗಳ ಮೇಲೆ ಅಮೆರಿಕಾ ರಾಕೆಟ್‌ ದಾಳಿ; ಇರಾಕ್‌ನಲ್ಲಿ ಪ್ರಕ್ಷುಬ್ದ ವಾತಾವರಣ!

ಅಮೆರಿಕಾ ಸೇನಾ ಪಡೆಗಳು ಪಶ್ಚಿಮ ಇರಾಕ್‌ನ ವಿಮಾನ ನಿಲ್ದಾಣದ ಹೊರಗೆ ರಾಕೆಟ್‌ ದಾಳಿ ನಡೆಸಿದ್ದು, ಇರಾಕ್‌ನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಘಟನೆಯಲ್ಲಿ ಅಮೆರಿಕಾ ನೇತೃತ್ವದ ಒಕ್ಕೂಟದ ಗುತ್ತಿಗೆದಾರರೊಬ್ಬರು ಸಾವನ್ನಪ್ಪಿದ್ದು, ಎಂಟು ಮಂದಿಗೆ ಗಾಯಗಳಾಗಿವೆ ಎಂದು ಇರಾಕ್‌ನ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಸಿವಿಲಿಯನ್ ಇರ್ಬಿಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ರಾತ್ರಿ 9.30ರ ವೇಳೆಯಲ್ಲಿ 10 ರಾಕೇಟ್‌ಗಳಲ್ಲಿ ಅಮೆರಿಕಾ ದಾಳಿ ಮಾಡಿದೆ.

ಕಿರ್ಕುಕ್ ಪ್ರಾಂತ್ಯದ ಗಡಿಯ ಸಮೀಪವಿರುವ ಇರ್ಬಿಲ್‌ನ ದಕ್ಷಿಣ ಭಾಗದಲ್ಲಿ ದಾಳಿ ಮಾಡಲಾಗಿದೆ. ವಿಮಾನ ನಿಲ್ದಾಣದ ಸಮೀಪವಿರುವ ಕೆಲವು ವಸತಿ ಪ್ರದೇಶಗಳ ಮೇಲೆ ರಾಕೇಟ್‌ಗಳು ಬಿದ್ದಿವೆ. ರಾಕೆಟ್‌ ದಾಳಿಯಿಂದ ಕಾರುಗಳು ಮತ್ತು ಇತರ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ “ಹಲವಾರು ಜನರು” ಗಾಯಗೊಂಡಿರುವುದಾಗಿ ತಿಳಿದುಬಂದಿದೆ ಎಂದು ಕುರ್ದಿಸ್ತಾನದ ಆಂತರಿಕ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಘಟನೆಯಿಂದ ಇರಾಕ್‌ನಲ್ಲಿ, ಇರಾನ್‌ ಬೆಂಬಲಿತ ಮಿಲಿಟಿಯಾ ಗುಂಪುಗಳು ಹೆಚ್ಚಿನ ದಾಳಿ ಮತ್ತು ತೀವ್ರವಾದ ಉದ್ವಿಗ್ನತೆ ಉದ್ಭವಿಸಲು ಕಾರಣವಾಗಬಹುದು. ಇದು 2015ರ ಪರಮಾಣು ಒಪ್ಪಂದದ ಬಗ್ಗೆ ಇರಾನ್ ಜೊತೆ ಮಾತುಕತೆಗಳನ್ನು ಆರಂಭಿಸಲು ಬೈಡನ್ ಆಡಳಿತಕ್ಕೆ ಅಡಚಣೆ ಉಂಟು ಮಾಡುವ ಸಾಧ್ಯತೆ ಇದೆ.

ಕಳೆದ ವಾರ ಇರಾಕ್-ಸಿರಿಯಾ ಗಡಿಯಲ್ಲಿ ಅಲೈನ್ಡ್‌ ಮಿಲಿಟಿಯಾ ಮೇಲೆ ಅಮೆರಿಕ-ಇರಾನ್ ಬಾಂಬ್ ಸ್ಫೋಟಿಸಿದ ನಂತರ ನಡೆದ ಮೊದಲ ದಾಳಿ ಇದಾಗಿದೆ.

ಇದನ್ನೂ ಓದಿ: ಭಾರತ-ಚೀನಾ-ರಷ್ಯಾ ಕೊಳಕು ರಾಷ್ಟ್ರಗಳು: ಪುನರುಚ್ಚರಿಸಿದ ಟ್ರಂಪ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights