ಆಂಧ್ರ ಸ್ಥಳೀಯ ಚುನಾವಣೆ: ಅಷ್ಟೂ ಸಂಸ್ಥೆಗಳಲ್ಲಿ YSR ಕಾಂಗ್ರೆಸ್‌ ಭರ್ಜರಿ ಗೆಲುವು; ಲಿಸ್ಟ್‌ಯಿಂದ ಕಾಣೆಯಾದ BJP-ಕಾಂಗ್ರೆಸ್‌!

ಆಂಧ್ರಪ್ರದೇಶದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಈ ಪೈಕಿ 10 ಮಹಾನಗರ ಪಾಲಿಕೆಗಳು ಮತ್ತು 69 ಪುರಸಭೆಗಳಲ್ಲಿ YSR ಕಾಂಗ್ರೆಸ್ ಭರ್ಜರಿ ಮುನ್ನಡೆ ಸಾಧಿಸಿದೆ. ಈ ಮೂಲಕ ಈ ಚುನಾವಣೆಯಲ್ಲಿ ಕ್ಲೀನ್‌ ಸ್ವೀಪ್‌ ಪಡೆಯುವ ಸಾಧ್ಯತೆ ಇದೆ.

ಮಾರ್ಚ್ 10 (ಬುಧವಾರ) ರಂದು 12 ಮಹಾನಗರ ಪಾಲಿಕೆಗಳು ಮತ್ತು 71 ಪುರಸಭೆಗಳಿಗೆ ಚುನಾವಣೆ ನಡೆದಿದೆ. ಈ ಪೈಕಿ ಎಲುರು ಮಹಾನಗರ ಪಾಲಿಕೆಯ ಮತ ಎಣಿಕೆ ಮತ್ತು ಚಿಲಕಲುರಿಪೇಟೆ ಪುರಸಭೆಯ ಫಲಿತಾಂಶವನ್ನು ಪ್ರಕಟಿಸದಂತೆ ಹೈಕೋರ್ಟ್‌ ತಡೆ ನೀಡಿದೆ.

ಉಳಿದಂತೆ, ರಾಜ್ಯದಲ್ಲಿ ಪ್ರತಿಪಕ್ಷವಾಗಿರುವ ಟಿಡಿಪಿ ಗುಂಟೂರು ಮಹಾನಗರ ಪಾಲಿಕೆಯಲ್ಲಿ ತೀವ್ರ ಪೈಪೋಟಿಯನ್ನು ನೀಡುತ್ತಿದ್ದು, ಬಹುಶಃ ಗುಂಟೂರು ಪಾಲಿಕೆ ಟಿಡಿಪಿ ಪಾಲಿಗೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗಿನ ಮಾಹಿತಿಯ ಪ್ರಕಾರ, ತಿರುಪತಿ, ಚಿತ್ತೂರು, ಒಂಗೋಲ್ ಮತ್ತು ಕರ್ನೂಲ್ ಮಹಾನಗರ ಪಾಲಿಕೆಗಳನ್ನು YSR ಕಾಂಗ್ರೆಸ್ ಗೆದ್ದಿದೆ ಮತ್ತು 69 ಪುರಸಭೆಗಳಲ್ಲಿ ಬಹುಮತವನ್ನು ಗೆದ್ದುಕೊಂಡಿದೆ.

ಪ್ರತಿಪಕ್ಷ ಟಿಡಿಪಿ ಯಾವುದೇ ಮಹಾನಗರ ಪಾಲಿಕೆ ಮತ್ತು ಪುರಸಭೆಗಳಲ್ಲಿ ಯೋಗ್ಯ ಪೈಪೋಟಿಯನ್ನು ನೀಡುತ್ತಿದೆ. ಆದರೆ, ರಾಷ್ಟ್ರೀಯ ಕಾಂಗ್ರೆಸ್‌ ಹಾಗೂ ಬಿಜೆಪಿ-ಜನಸೇನೆ ಪಕ್ಷದ ಮೈತ್ರಿಯೂ ಈ ಚುನಾವಣಾ ರಂಗದಲ್ಲಿ ಕಾಣೆಯಾಗಿದೆ ಎಂದು ತಿಳಿದು ಬಂದಿದೆ.

ಕಡಪಾ, ಪೂರ್ವ ಗೋದಾವರಿ, ಒಂಗೋಲ್ ಮತ್ತು ಇತರ ಜಿಲ್ಲೆಗಳಲ್ಲಿ ನಡೆದ ಮಹಾನಗರ ಪಾಲಿಕೆ ಮತ್ತು ಪುರಸಭೆಗಳನ್ನು YSR ಕಾಂಗ್ರೆಸ್ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಪಡೆದುಕೊಂಡಿದೆ.

ಇದನ್ನೂ ಓದಿ: ಛತ್ತೀಸ್‌ಘಡ ಹೊಸ ದಾಖಲೆ; ನರೇಗಾ ಅಡಿಯಲ್ಲಿ 16.07 ಕೋಟಿ ಉದ್ಯೋಗ ನೀಡಿದೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights