ವಿಡಿಯೋ: ಕ್ಯಾಮೆರಾ-ರೂಲ್-ಆಕ್ಷನ್; ಕಾಡಿನ ಬೆಂಕಿ ನಂದಿಸಲು ಅರಣ್ಯ ಸಚಿವರ ಅಸಾಮಾನ್ಯ ಪ್ರಯತ್ನ!
ಉತ್ತರಖಂಡದ ಕಾಡುಗಳಲ್ಲಿ 900 ಕ್ಕೂ ಹೆಚ್ಚು ಸ್ಥಳಗಳಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಅದನ್ನು ನಂದಿಸಲು ರಾಜ್ಯವೇ ಎದುರು ನೋಡುತ್ತಿದೆ. ಇಂತಹ ಸಂಧಿಗ್ದ ಸಂದರ್ಭದಲ್ಲಿ ಬೆಂಕಿ ನಂದಿಸಲು ರಾಜ್ಯ ಸಚಿವರ ಅಸಾಮಾನ್ಯ ಪ್ರಯತ್ನವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ.
ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಟಿವಿಯ ಸಿಬ್ಬಂದಿಯೊಬ್ಬರು ಚಿತ್ರೀಕರಿಸಲು ಆರಂಭಿಸುತ್ತಿದ್ದಂತೆಯೇ, ಸಚಿವ ಹರಕ್ ಸಿಂಗ್ ರಾವತ್ ಅವರು ಗಿಡವೊಂದನ್ನು ಹಿಡಿದು ಬೆಂಕಿಯ ಜ್ವಾಲೆ ಮೇಲೆ ದಾಳಿ ನಡೆಸುತ್ತಿದ್ದಾರೆ. ನಿನ್ನೆ ಸಂಜೆ ಈ ವಿಡಿಯೋ ಚಿತ್ರೀಕರಿಸಿದಾಗ ಸಚಿವರು ಗಾರ್ವಾಲ್ ಬೆಟ್ಟದಲ್ಲಿದ್ದರು ಎಂದು ವರದಿಯಾಗಿದೆ.
ಸಚಿವರು ಪೊದೆಸಸ್ಯವನ್ನು ಹಿಡಿದು ಬೆಂಕಿಯ ಮೇಲೆ ಎಸೆಯುತ್ತಾರೆ. ಆದರೆ, ಅದರಿಂದ ಬಂಕಿ ನಂದುವುದಿಲ್ಲ.
ನಂತರ ಕ್ಯಾಮೆರಾ ಕೋನವು (ಆಂಗಲ್) ಬದಲಾಗುತ್ತದೆ ಮತ್ತು ವಿಡಿಯೋದಲ್ಲಿ ಕಾಡಿನ ಬೆಂಕಿ ಕಾಣಿಸುವುದಿಲ್ಲ. ಸಚಿವ ರಾವತ್ ಮಾತ್ರ ಕಾಣಿಸಿಕೊಳ್ಳುತ್ತಾರೆ,
ವೀಡಿಯೊ ಅನೇಕರಿಂದ ಟ್ರೋಲ್‌ಗೆ ಒಳಗಾಗಿದೆ. ವಿಶೇಷವಾಗಿ ಪರಿಸರ ಕಾರ್ಯಕರ್ತರ ಕಾಮೆಂಟ್‌ಗಳಿಗೆ ವಿಡಿಯೋ ಒಳಗಾಗಿದೆ.
“ಉತ್ತರಾಖಂಡದ ಕೆಚ್ಚೆದೆಯ ಅರಣ್ಯ ಸಚಿವ ಹರಾಕ್ಸಿಂಗ್ ರಾವತ್ ಅವರು ಇತ್ತೀಚಿನ ತಂತ್ರಜ್ಞಾನದೊಂದಿಗೆ #ಫಾರೆಸ್ಟ್ ಫೈರ್ ಅನ್ನು ನಂದಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತಿದ್ದಾರೆ. ಅವರ ಐತಿಹಾಸಿಕ ಕ್ರಮವು ಉತ್ತರಾಖಂಡ ಕಾಡಿನ ಬೆಂಕಿಯಿಂದ ನಮನ್ನು ರಕ್ಷಿಸುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ಪರಿಸರ ಕಾರ್ಯಕರ್ತ ಆರವ್ ಸೇಠ್ ಟ್ವೀಟ್ ಮಾಡಿದ್ದಾರೆ.
https://twitter.com/AaravSeth_/status/1379335919602266112?s=20
ಭಾನುವಾರ, ರಾವತ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬೆಂಕಿಯನ್ನು ನಿವಾರಿಸಲು ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತದೆ ಎಂದು ಹೇಳಿದ್ದಾರೆ.
#देहरादून : एक्सक्लूसिव विज़ुअल्स
एक्शन में हरक सिंह रावत
वन मंत्री डॉ हरक सिंह रावत खुद आग बुझाने जंगल में पहुंचे।
श्रीनगर के वन क्षेत्र में आग बुझाने पहुंचे मंत्री हरक सिंह रावत।@BJP4UK @drharaksrawat @Drharaksingh @BJP4Delhi #HarakSinghRawat #viralvideo pic.twitter.com/ahw9fpZOM0— Hind Khabar (@HindKhabar1) April 5, 2021
“ರಾಜ್ಯದ 964 ಸ್ಥಳಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಏಳು ಪ್ರಾಣಿಗಳು ಮತ್ತು ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಬೇಸಿಗೆಯ ಹವಾಮಾನವು ರಾಜ್ಯ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಮುಖ್ಯಮಂತ್ರಿ (ತಿರಥ್ ಸಿಂಗ್ ರಾವತ್) ಮತ್ತು ನಾನು ಪರಿಸ್ಥಿತಿಯನ್ನು ಪ್ರತ್ಯೇಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ನಾವು ಹೆಲಿಕಾಪ್ಟರ್ಗಳೊಂದಿಗೆ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಸಚಿವರು ಹೇಳಿದ್ದಾರೆ.
Read Also: ಮತಗಟ್ಟೆಗೆ ಸೈಕಲ್‌ನಲ್ಲಿ ತೆರಳಿದ ನಟ ವಿಜಯ್; ಪ್ರತಿಭಟನೆ ಎಂದ ಅಭಿಮಾನಿಗಳು – ಯಾವ ಉದ್ದೇಶವೂ ಇಲ್ಲ ಎಂದ ವಕ್ತಾರರು

