ಫ್ಯಾಕ್ಟ್‌ಚೆಕ್ : ರೈತ ಹೋರಾಟದಲ್ಲಿ ಟ್ರಾಕ್ಟರ್‌ಗಳನ್ನು ಟ್ಯಾಂಕರ್‌ಗಳಂತೆ ವಿನ್ಯಾಸ ಮಾಡಿದ್ದಾರೆಂದು ಸುಳ್ಳು ಸುದ್ದಿ ಹಂಚಿಕೆ

ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ 12 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೇಶದ ರೈತರು  ಕೇಂದ್ರ ಸರ್ಕಾರದ ವಿರುದ್ದ 2024 ಫೆಬ್ರವರಿ 13 ರಿಂದ ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಈ ಹೋರಾಟಕ್ಕೆ ಸಂಬಂಧಿಸಿದಂತೆ ಹಲವು ನಕಲಿ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಅವುಗಳ ಕುರಿತು ಫ್ಯಾಕ್ಟ್‌ಚೆಕ್ ಸ್ಟೋರಿಗಳನ್ನು ಏನ್‌ಸುದ್ದಿ.ಕಾಂ ಪ್ರಕಟಿಸಿದೆ.

ಟ್ರ್ಯಾಕ್ಟರ್‌ಗಳು ಟ್ಯಾಂಕ್‌ಗಳಂತೆ ಕಾಣುವ ಚಿತ್ರವು ವೈರಲ್ ಆಗುತ್ತಿದೆ. ಈ ಫೋಟೋ ರೈತರ ಆಂದೋಲನದ ಫೋಟೋ ಎಂದು ಹೇಳಲಾಗುತ್ತಿದೆ.

25,000 ಕ್ಕೂ ಹೆಚ್ಚು ರೈತರು ಮತ್ತು ಸುಮಾರು 5,000 ಟ್ರಾಕ್ಟರ್‌ಗಳು ಸೋಮವಾರ ಪಂಜಾಬ್ ಮತ್ತು ಹರಿಯಾಣದ ವಿವಿಧ ಜಿಲ್ಲೆಗಳಿಂದ ಮಂಗಳವಾರ ದೆಹಲಿ ತಲುಪಲು ತಮ್ಮ ಸಂಚಾರವನ್ನು ಪ್ರಾರಂಭಿಸಿದ್ದವು.

“ಬ್ಯಾರಿಕೇಡ್‌ಗಳಿಂದ ನಿರ್ಮಿಸಿದ ತಡೆಗೋಡೆಯನ್ನು ಉರುಳಿಸುವ ಹೈಡ್ರಾಲಿಕ್ ಉಪಕರಣಗಳನ್ನು ಟ್ರ್ಯಾಕ್ಟರ್‌ಗಳಿಗೆ ಅಳವಡಿಸಲಾಗಿದೆ, ಅಶ್ರುವಾಯು ಶೆಲ್‌ಗಳ ವಿರುದ್ಧ ಹೋರಾಡಲು ಬೆಂಕಿ-ನಿರೋಧಕ ಹಾರ್ಡ್-ಶೆಲ್ ಟ್ರೇಲರ್‌ಗಳನ್ನು ಸಿದ್ಧಪಡಿಸಲಾಗಿದೆ. ಅವರು ಈ ಮಾರ್ಪಡಿಸಿದ ವಾಹನಗಳೊಂದಿಗೆ ಕಸರತ್ತುಗಳನ್ನು ಸಹ ಮಾಡಿದ್ದಾರೆ” ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ರೈತರ ಪ್ರತಿಭಟನಾ ರ್ಯಾಲಿಯನ್ನು ತಡೆಯಲು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನಿರ್ಮಿಸಿದ ಬ್ಯಾರಿಕೇಡ್‌ಗಳನ್ನು ಹಾಕಿರುವ ಬಗ್ಗೆ ಹಲವಾರು ವರದಿಗಳಿವೆ.

ವೈರಲ್ ಫೋಟೊವನ್ನು ಮುಖ್ಯವಾಹಿನಿ ಮಾಧ್ಯಮವಾದ ANI ಹಂಚಿಕೊಂಡಿದೆ. ಈ ಸುದ್ದಿಯನ್ನು 11 ಫೆಬ್ರವರಿ 2024 ರಂದು ANI ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವುದನ್ನು ನಾವು ಕಂಡುಕೊಂಡಿದ್ದೇವೆ. ಆದರೆ ಬೇರೆ ಕೆಲವು ಚಿತ್ರವನ್ನು ಸುದ್ದಿಯಲ್ಲಿ ಬಳಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅದೇ ಫೋಟೋದೊಂದಿಗೆ OpIndia ಸುದ್ದಿ ಲೇಖನ ಲಭ್ಯವಾಗಿದೆ. ಈ ಲೇಖನದಲ್ಲಿ ಅವರು ಬಳಸಿದ ಫೋಟೋ ಕೇವಲ AI ನಿಂದ ರಚಿಸಲಾದ ಸಾಂಕೇತಿಕ ಚಿತ್ರವಾಗಿದೆ. ಈ ಚಿತ್ರವನ್ನು ನೈಜ ಚಿತ್ರವೆಂದು OpIndia ಹಂಚಿಕೊಂಡಿದೆ.

Fact Check: ರೈತರ ಪ್ರತಿಭಟನೆಗೆ ಮಾರ್ಪಡಿಸಲಾದ ಟ್ರಾಕ್ಟರ್ ತಯಾರಿಸಲಾಗಿದೆ ಎಂದ ವೀಡಿಯೋ ಟರ್ಕಿಯದ್ದು!

ಮತ್ತಷ್ಟು ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದ್ದು ಅದನ್ನು ಪರಿಶೀಲಿಸಿದಾಗ,  ಈ ವೇಳೆ ರೈತರ ಪ್ರತಿಭಟನೆಗೆ ಸಂಬಂಧಿಸಿದ ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳನ್ನು ನಾವು ಕಂಡುಕೊಂಡಿದ್ದೇವೆ. ಆದರೆ ಇದರೊಂದಿಗೆ ಸುಮಾರು 2 ವಾರಗಳ ಹಿಂದೆ, @cengizler_tarim_55 ಎಂಬ ಟರ್ಕಿಶ್ ಟಿಕ್ಟಾಕ್ ಬಳಕೆದಾರರು ಹಂಚಿಕೊಂಡ ಮಾರ್ಪಡಿಸಿದ ಟ್ರಾಕ್ಟರ್ ನ ವೀಡಿಯೋವನ್ನು ಹಂಚಿಕೊಂಡಿರುವುದನ್ನು ಗಮನಿಸಿದ್ದೇವೆ.

ಈ ವೀಡಿಯೋವನ್ನು 30 ಜನವರಿ 2024 ರ @aminkhang4718 ಚಾನೆಲ್‌ನ ಯೂಟ್ಯೂಬ್ ಕಿರುಚಿತ್ರದಲ್ಲಿಯೂ ಹಂಚಿಕೊಳ್ಳಲಾಗಿದೆ. ಫೆಬ್ರವರಿ 1, 2024 ರಂದು ortakoy_haberim ಎಂಬ ಟರ್ಕಿಶ್ ಇನ್ಸ್ಟಾಗ್ರಾಮ್ ಪುಟದಿಂದಲೂ ಈ ವೀಡಿಯೋ ಹಂಚಿಕೊಳ್ಳಲಾಗಿದೆ.

Fact Check: ರೈತರ ಪ್ರತಿಭಟನೆಗೆ ಮಾರ್ಪಡಿಸಲಾದ ಟ್ರಾಕ್ಟರ್ ತಯಾರಿಸಲಾಗಿದೆ ಎಂದ ವೀಡಿಯೋ ಟರ್ಕಿಯದ್ದು!

ತನಿಖೆಯ ಬಳಿಕ, ವೈರಲ್ ವೀಡಿಯೋದಲ್ಲಿ ಕಂಡುಬರುವ ಟ್ರಾಕ್ಟರ್ ಮೇಲೆ ಅದರ ಕಂಪನಿಯ ಹೆಸರು ಹಟ್ಟಾಟ್ 260 ಜಿ ಎಂಬುದನ್ನು ಬರೆಯಲಾಗಿದೆ ಎಂಬುದನ್ನು ನಾವು ಗಮನಿಸಿದ್ದೇವೆ.  ಹಟ್ಟಾಟ್ ಟ್ರಾಕ್ಟರ್ ನ ಅಧಿಕೃತ ವೆಬ್ಸೈಟ್, ವೀಕ್ಷಿಸಿದ್ದು, ಇದರಲ್ಲಿ ಮಾರ್ಪಡಿಸದೇ ಇರುವ ಟ್ರಾಕ್ಟರ್‌ನ ಫೋಟೋವನ್ನು ನೋಡಿದ್ದೇವೆ.

Fact Check: ರೈತರ ಪ್ರತಿಭಟನೆಗೆ ಮಾರ್ಪಡಿಸಲಾದ ಟ್ರಾಕ್ಟರ್ ತಯಾರಿಸಲಾಗಿದೆ ಎಂದ ವೀಡಿಯೋ ಟರ್ಕಿಯದ್ದು!

ಹೆಚ್ಚಿನ ತನಿಖೆಯ ವೇಳೆ ಲಿಂಕ್ಡ್ ಇನ್‌ ನಲ್ಲಿ ಹಟ್ಟಾಟ್ ಟ್ರ್ಯಾಕ್ಟರ್ ಎಂಬುದು ಟರ್ಕಿಶ್ ಟ್ರಾಕ್ಟರ್ ಕಂಪನಿ ಯಾಗಿದ್ದು ÇERKEZKÖY, TEKİRDAĞ ಎಂಬಲ್ಲಿದೆ ಎಂದು ತೋರಿಸುತ್ತದೆ.

Fact Check: ರೈತರ ಪ್ರತಿಭಟನೆಗೆ ಮಾರ್ಪಡಿಸಲಾದ ಟ್ರಾಕ್ಟರ್ ತಯಾರಿಸಲಾಗಿದೆ ಎಂದ ವೀಡಿಯೋ ಟರ್ಕಿಯದ್ದು!

ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಟ್ರಾಕ್ಟರ್  ಹಿಂದೆ ಸೆಲಿಕ್ ಅಕು ಎಂದು ಬರೆಯಲಾದ ಬೋರ್ಡ್ ಕಂಡುಬರುತ್ತದೆ. ಹುಡುಕಿದಾಗ, ಇದು ಟರ್ಕಿಶ್ ಬ್ಯಾಟರಿ ಕಂಪನಿ ಎಂದು ತಿಳಿದುಬಂದಿದೆ.

ವೈರಲ್‌ ವೀಡಿಯೋದ ಸ್ಕ್ರೀನ್‌ ಗ್ರ್ಯಾಬ್
ವೈರಲ್‌ ವೀಡಿಯೋದ ಸ್ಕ್ರೀನ್‌ ಗ್ರ್ಯಾಬ್
 

ಟರ್ಕಿಯ ಬ್ಯಾಟರಿ ಕಂಪೆನಿ ಹೆಸರು
ಟರ್ಕಿಯ ಬ್ಯಾಟರಿ ಕಂಪೆನಿ ಹೆಸರು
ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿ ರೈತರ ಹೋರಾಟದಲ್ಲಿ ಬ್ಯಾರಿಕೇಡ್‌ಗಳಿಂದ ನಿರ್ಮಿಸಿದ ತಡೆಗೋಡೆಯನ್ನು ಉರುಳಿಸುವ ಹೈಡ್ರಾಲಿಕ್ ಉಪಕರಣಗಳನ್ನು ಟ್ರ್ಯಾಕ್ಟರ್‌ಗಳಿಗೆ ಅಳವಡಿಸಲಾಗಿದೆ, ಅಶ್ರುವಾಯು ಶೆಲ್‌ಗಳ ವಿರುದ್ಧ ಹೋರಾಡಲು ಬೆಂಕಿ-ನಿರೋಧಕ ಹಾರ್ಡ್-ಶೆಲ್ ಟ್ರೇಲರ್‌ಗಳನ್ನು ಪ್ರತಿಭಟನಾ ನಿರತ ರೈತರು ಸಿದ್ಧಪಡಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಪೋಸ್ಟ್‌ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ದೆಹಲಿ ಗಡಿಯಲ್ಲಿನ ರೈತರ ಹೋರಾಟದ ದೃಶ್ಯಗಳು ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights