ಪ್ರಧಾನಿ ಮೋದಿಯನ್ನು ನೀರೋ ರಾಜನಿಗೆ ಹೋಲಿಸಿದ ಖರ್ಗೆ: BJP ಸರ್ಕಾರದ ವಿರುದ್ಧ ತರಾಟೆ!

ರೋಮ್‌ ನಗರವೇ ಹೊತ್ತಿ ಉರಿಯುತ್ತಿದ್ದಾಗ, ಅಲ್ಲಿನ ರಾಜ ನೀರೋ ಪಿಟೀಲು ಬಾರಿಸುತ್ತಿದ್ದ. ಅದೇ ರೀತಿಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ವೇಳೆ ನಮ್ಮ ನೀರೋ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ ಎಂದು ಕಾಂಗ್ರೆಸ್‌ ನಾಯಕ, ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ರೋಮ್ ಹತ್ತಿ ಉರಿಯುವಾಗ ನೀರೋ ಪಿಟೀಲು ಬಾರಿಸುತ್ತಿದ್ದನಂತೆ. ನಮ್ಮ ನೀರೋ ಚುನಾವಣೆಯಲ್ಲಿ ಬ್ಯೂಸಿಯಾಗಿದ್ದಾರೆ. ದೇಶದಲ್ಲಿ ಕೊರೊನಾ ಸಾವಿನ ಸಂಖ್ಯೆ 1.73 ಲಕ್ಷಕ್ಕೆ ಏರಿದೆ. ದಿನವೊಂದಕ್ಕೆ ಎರಡು ಲಕ್ಷ ಮಂದಿ ಸೋಂಕಿತರಾಗುತ್ತಿದ್ದಾರೆ. ಲಸಿಕೆ, ಆಮ್ಲಜನಕ, ಸೋಂಕಿತರ ಚಿಕಿತ್ಸೆಗೆ ಅಗತ್ಯವಾದ ರೆಮ್‍ಡಿಸಿವಿರ್ ಔಷಧಿ ಇಲ್ಲದೆ ಅವ್ಯವಸ್ಥೆಯಾಗಿದೆ ಎಂದು ಖರ್ಗೆ ಆತಂಕ ವ್ಯಕ್ತ ಪಡಿಸಿದ್ದಾರೆ.

ಅಧಿಕಾರಕ್ಕೆ ಬಂದು ಏಳು ವರ್ಷ ಕಳೆದಿದೆ, ನಮ್ಮ ದೇಶದ ನೀರೋ ಯಾವಾಗ ಆಡಳಿತ ಶುರು ಮಾಡುತ್ತಾರೆಂದು ನಿರೀಕ್ಷಿಸಬಹುದು ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಕೇಂದ್ರ ಸರ್ಕಾರದ ಕೊರೊನಾ ರಣತಂತ್ರ ಹೇಗಿದೆ ಎಂದರೆ ಮೊದಲ ಹಂತದಲ್ಲಿ ಲಾಕ್‍ಡೌನ್ ಜಾರಿ ಮಾಡುವುದು. ಎರಡನೆ ಹಂತದಲ್ಲಿ ಗಂಟೆ ಬಾರಿಸುವುದು, ಮೂರನೆ ಹಂತದಲ್ಲಿ ದೇವರ ನಾಮಗಳನ್ನು ಹಾಡುವುದು ಎಂದು ಲೇವಡಿ ಮಾಡಿದ್ದಾರೆ.

Read Also: ವಲಸೆ 2.0: ಮುಂಬೈ ರೈಲು ನಿಲ್ದಾಣಗಳಲ್ಲಿ 2020ರ ವಲಸೆ ದೃಶ್ಯಗಳು ಮರುಕಳಿಸುತ್ತಿವೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights