ಹೆಣ್ಣು ಮಕ್ಕಳನ್ನು ಟಾರ್ಗೆಟ್‌ ಮಾಡೋದು ಸುಲಭ; ನನ್ನನ್ನು 100% ಟಾರ್ಗೆಟ್‌ ಮಾಡಲಾಗಿದೆ: ನಟಿ ರಾಗಿಣಿ

ನನ್ನನ್ನು 100% ಟಾರ್ಗೆಟ್‌ ಮಾಡಲಾಗಿದೆ. ಟಾರ್ಗೆಟ್‌ ಮಾಡಿಯೇ ನನ್ನನ್ನು ಡ್ರಗ್ಸ್‌ ಕೇಸ್‌ನಲ್ಲಿ ಸಿಲುಕಿಸಿದ್ದಾರೆ. ಆದರೆ, ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ತಪ್ಪು ಮಾಡಿಲ್ಲ ಎಂದ ಮೇಲೆ ಟೆನ್ಶನ್‌ ಯಾಕೆ? ನನ್ನ ಮೇಲೆ ಜನರ ಪ್ರೀತಿ ಇದೆ ಎಂದು ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ರಿವೇದಿ ಹೇಳಿದ್ದಾರೆ.

ಡ್ರಗ್ಸ್‌ ಪ್ರಕರಣದಲ್ಲಿ ಜೈಲು ಸೇರಿದ್ದ ರಾಗಿಣಿ, ಜಾಮೀನು ಪಡೆದು ಹೊರ ಬಂದಿದ್ದಾರೆ. ಹೊರ ಬಂದ ಬಳಿಕೆ ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ನಡ ಜನರಿಗೆ ಸಹಾಯ ಮಾಡುವುದರಲ್ಲಿ ನಿರತರಾಗಿದ್ದಾರೆ. ಬುಧವಾರ ವಿಜಯಪುರದಲ್ಲಿ ಬಡವರಿಗೆ ಆಹಾರ ಕಿಟ್‌ಗಳನ್ನು ಅವರು ವಿತರಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಡ್ರಗ್ಸ್​ ಕೇಸ್​ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ನನ್ನನ್ನು 100% ಟಾರ್ಗೆಟ್‌ ಮಾಡಲಾಗಿದೆ. ಕೇವಲ ಒಂದು ವಿಚಾರವಾಗಿ ಮಾತ್ರವಲ್ಲ. ಪ್ರತಿ ವಿಚಾರದಲ್ಲೂ ಹೆಣ್ಮಕ್ಕಳನ್ನು ತುಂಬಾ ಸುಲಭವಾಗಿ ಟಾರ್ಗೆಟ್ ಮಾಡೋದು ಹವ್ಯಾಸವಾಗಿದೆ. ನನ್ನ ಮೇಲೆ ಜನರ ಪ್ರೀತಿ, ವಿಶ್ವಾಸವಿದೆ. ನಾವು ತಪ್ಪು ಮಾಡಿಲ್ಲಾ ಅಂದ್ರೆ ಟೆನ್ಷನ್ ಮಾಡಿಕೊಳ್ಳಬಾರದು ಎಂದು ರಾಗಿಣಿ ತಿಳಿಸಿದ್ದಾರೆ.

ಪ್ರಶಾಂತ್​ ಸಂಬರಗಿ ಯಾರು ಎಂಬುದು ನನಗೆ ನಿಜವಾಗಿ ಗೊತ್ತಿಲ್ಲ. ಅವರೊಂದಿಗೆ ನಾನು ಮಾತನಾಡಿಯೂ ಇಲ್ಲ. ಅವರು ಏನು ಮಾತನಾಡುತ್ತಾರೆಯೇ ಮಾತನಾಡಲಿ. ಅವರನ್ನು ನಾವು ಕಂಟ್ರೋಲ್‌ ಮಾಡೋಕೆ ಆಗಲ್ಲ. ನಾವು ನಮ್ಮನ್ನು, ನಮ್ಮ ಮಾತುಗಳನ್ನು ಮಾತ್ರ ಕಂಟ್ರೋಲ್‌ ಮಾಡೋಕೆ ಸಾಧ್ಯ. ಬೇರೆಬ್ಬರನ್ನು ಬ್ಲೇಮ್ ಮಾಡೋ ಬದಲು ಎಲ್ಲರೂ ಅವರವರ ಕೆಲಸದಲ್ಲಿ ಕರೆಕ್ಟ್ ಆಗಿದ್ರೆ ಸಾಕು ಎಂದು ರಾಗಿಣಿ ಹೇಳಿದ್ದಾರೆ.

Read Also: ಕೊರೊನಾ 3ನೇ ಅಲೆ; ಹೆಚ್ಚಲಿವೆ ಸಾವು-ನೋವುಗಳ ಸಂಖ್ಯೆ; ಮಕ್ಕಳ ಆರೈಕೆಗಾಗಿ ವಿಶೇಷ ವ್ಯವಸ್ಥೆಗೆ ತಜ್ಞರ ಸಲಹೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights