ಶವಗಾರದಲ್ಲಿ ಶವನಿರ್ವಹಣಾ ಹುದ್ದೆ; ಅರ್ಜಿ ಸಲ್ಲಿಸುತ್ತಿದ್ದಾರೆ ಎಂಜಿನಿಯರಿಂಗ್, ಪದವೀದರರು!

ಕೊಲ್ಕತ್ತಾದ ವೈದ್ಯಕೀಯ ಕಾಲೇಜಿನಲ್ಲಿರುವ ಶವಾಗಾರದಲ್ಲಿ ಶವಗಳ ನಿರ್ವಹಣೆಗೆ ಪ್ರಯೋಗಾಲಯ ಸಹಾಯಕ (ಡೋಮ್‌)ರನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದ್ದು, ಈ ಹುದ್ದೆಗಳಿಗೆ ನೂರಾರು ಎಂಜಿನಿಯರ್‌ ಪದವೀದದರು, ಸ್ವಾತಕ ಮತ್ತು ಸ್ನಾತಕೋತ್ತರ ಪದವೀದರರು ಅರ್ಜಿ ಸಲ್ಲಿಸಿದ್ದಾರೆ.

ಕೊಲ್ಕತ್ತಾದ ನೀಲ್ ರತನ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ವಿಧಿವಿಜ್ಞಾನ ಔಷಧ ಮತ್ತು ವಿಷಶಾಸ್ತ್ರ ವಿಭಾಗಕ್ಕೆ ನೌಕರರನ್ನು ನೇಮಿಸಿಕೊಳ್ಳಲು ಆರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಇದಕ್ಕೆ, ಸುಮಾರು 8 ಸಾವಿರ ಜನರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ,  100 ಮಂದಿ ಎಂಜಿನಿಯರ್‌ಗಳು, 500 ಸ್ನಾತಕೋತ್ತರ ಪದವೀಧರರು ಮತ್ತು 2,200 ಪದವೀಧರರು ಸೇರಿದ್ದಾರೆ ಎಂದು ಅಧಿಕಾರಿ ಶನಿವಾರ ಹೇಳಿದ್ದಾರೆ.

ಇದನ್ನೂ ಓದಿ: ವೋಟಿಗೆ ನೋಟು: ಸಂಸದೆ ಮಾಲೋತ್ ಕವಿತಾ ಅವರಿಗೆ 06 ತಿಂಗಳು ಜೈಲು, 10 ಸಾವಿರ ದಂಡ!

ಒಟ್ಟು ಅರ್ಜಿಗಳಲ್ಲಿ 84 ಮಹಿಳೆಯರು ಸೇರಿದಂತೆ 784 ಜನರನ್ನು ಆಗಸ್ಟ್ 1 ರಂದು ಲಿಖಿತ ಪರೀಕ್ಷೆಗೆ ಕರೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಈ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ಕನಿಷ್ಠ 8 ನೇ ತರಗತಿ ಪಾಸು 18 ರಿಂದ 40 ವಯಸ್ಸಿನವರಿಗೆ ಅರ್ಜಿಗಳನ್ನು ಸಲ್ಲಿಸುವಂತೆ ಇದು ಕರೆ ನೀಡಿತ್ತು. ಹುದ್ದೆಗೆ ತಿಂಗಳಿಗೆ 15 ಸಾವಿರ ರೂ. ಸಂಭಾವನೆ ನೀಡಲಾಗುತ್ತದೆ.

“ಹಲವಾರು ಅರ್ಜಿದಾರರು ಕೆಲಸಕ್ಕೆ ಬೇಕಾಗುವ ಅರ್ಹತೆಗಿಂತ ಹೆಚ್ಚು ಅರ್ಹತೆ ಹೊಂದಿದ್ದಾರೆ. ಎಂಜಿನಿಯರ್‌ಗಳು, ಸ್ನಾತಕೋತ್ತರ ಪದವೀಧರರು ಮತ್ತು ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಿರುವುದು ಸಾಕಷ್ಟು ಆಘಾತಕಾರಿಯಾಗಿದೆ. ಇದು ಮೊದಲ ಬಾರಿಗೆ ಸಂಭವಿಸಿದೆ” ಎಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕಿಯ ರಕ್ಷಣೆ; ದೃಶ್ಯ ಕ್ಯಾಮೆರಾದಲ್ಲಿ ಸೆರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights