ಚೀನಾದ ಗುವಾಂಗ್‌ಡಾಂಗ್‌ಗೆ ಅಪ್ಪಳಿಸಿದ ಲುಪಿಟ್ ಚಂಡಮಾರುತ; 33,000ಕ್ಕೂ ಹೆಚ್ಚು ಜನರ ಸ್ಥಳಾಂತರ

ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಕರಾವಳಿ ಪ್ರದೇಶಗಳಲ್ಲಿ ಗುರುವಾರ ಬೆಳಿಗ್ಗೆ ಲುಪಿಟ್ ಚಂಡಮಾರುತವು ಅಪ್ಪಳಿಸಿದ್ದು, ಭಾರೀ ಹಾನಿಗೆ ಕಾರಣವಾಗಿದೆ. ಹೀಗಾಗಿ ಆ ಪ್ರದೇಶದ 33,000 ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.

ಚಂಡಮಾರುತವು ಬೆಳಿಗ್ಗೆ 11:20 ರ ಸುಮಾರಿಗೆ ನ್ಯಾನಾವೊ ಕೌಂಟಿ, ಶಾಂಟೌ ಸಿಟಿಯ ಕರಾವಳಿಗೆ ಅಪ್ಪಳಿಸಿದೆ ಎಂದು ಚೀನಾದ ಕ್ಸಿನ್ಹುವಾ ವರದಿ ಮಾಡಿದೆ.

ಗುವಾಂಗ್‌ಡಾಂಗ್ ಪ್ರಾಂತ್ಯದ ಹವಾಮಾನ ವೀಕ್ಷಣಾಲಯದ ಪ್ರಕಾರ, ಚಂಡಮಾರುತವು ಸೆಕೆಂಡಿಗೆ 24 ಮೀಟರ್ ವರೆಗಿನ ವೇಗವನ್ನು ಹೊಂದಿದೆ.

ಈ ಪ್ರದೇಶದ ಕಡಲತೀರದಲ್ಲಿದ್ದ 43 ರಮಣೀಯ ತಾಣಗಳು ಮತ್ತು ಸ್ನಾನದ ಕಡಲತೀರಗಳನ್ನು ಸಹ ಮುಚ್ಚಿದೆ ಎಂದು ಪ್ರಾಂತೀಯ ತುರ್ತು ನಿರ್ವಹಣಾ ವಿಭಾಗ ತಿಳಿಸಿದೆ.

3,500 ಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳು ಬಂದರುಗಳಿಗೆ ಮರಳಿದ್ದಾರೆ.

ರೈಜಿಯಾಂಗ್‌ನ ಆಗ್ನೇಯ ಭಾಗ, ಫುಜಿಯಾನ್‌ನ ಪೂರ್ವ ಭಾಗ, ಗುವಾಂಗ್‌ಡಾಂಗ್‌ನ ಹೆಚ್ಚಿನ ಭಾಗ ಮತ್ತು ಗುವಾಂಗ್ಕ್ಸಿವಾಂಗ್ ಪ್ರದೇಶದ ಆಗ್ನೇಯ ಭಾಗದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ 7 ಪದಕ ಗೆದ್ದ ಈಜುಗಾರ್ತಿ; ವಿಶ್ವ ದಾಖಲೆ ನಿರ್ಮಿಸಿದ ಎಮ್ಮಾ ಮೆಕಿಯನ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights