ಬಾಳೆ ಹಣ್ಣು ಮಾರಲು ಬಂದು ಯುವತಿಯ ಬಾಳೇ ಹಾಳು ಮಾಡಿದ ಕಾಮುಕರು!

ಪ್ರೀತಿಸಿದ ಹುಡುಗಿಯನ್ನು ಮದುಮೆ ಮಾಡಿಕೊಡದ ಹುಡುಗಿ ತಂದೆಯನ್ನೇ ಕೊಲೆ ಮಾಡಿದ ಆರೋಪಿ ಮೈಸೂರು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ ಆರೋಪಿಯೂ ಆಗಿದ್ದಾನೆ ಎನ್ನಲಾಗುತ್ತಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಗಸ್ಟ್​ 24 ಮಂಗಳವಾರ ರಾತ್ರಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರು ಪೊಲೀಸರು ದೊಡ್ಡ ಸಾಹಸವನ್ನೇ ಮಾಡಿದ್ದಾರೆ. ಮೈಸೂರು ಪೊಲೀಸರು ಗ್ಯಾಂಗ್‌ರೇಪ್ ಪ್ರಕರಣದ 6 ಆರೋಪಿಗಳ ಪೈಕಿ 5 ಮಂದಿಯನ್ನು ತಮಿಳುನಾಡಲ್ಲಿ ವಶಕ್ಕೆ ತೆಗೆದು ಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣದಲ್ಲಿ ಎಂಜಿನಿಯರಿಂಗ್​ ವಿದ್ಯಾರ್ಥಿಗಳ ತಂಡ ಈ ಕುಕೃತ್ಯ ನಡೆಸಿರಬಹುದು ಎನ್ನಲಾಗಿತ್ತು. ಆದರೆ ಬಂಧಿತ ಐವರ ಪೈಕಿ ಯಾರೂ ವಿದ್ಯಾರ್ಥಿಗಳಲ್ಲ ಎನ್ನುವ ಬಗ್ಗೆ ಮಾಹಿತಿ ಈಗ ಲಭ್ಯವಾಗಿದೆ.

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣದಲ್ಲಿ ತಮಿಳುನಾಡಲ್ಲಿ ತಲೆಮರೆಸಿಕೊಂಡಿದ್ದ 5 ಆರೋಪಿಗಳನ್ನು ಮೈಸೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದ್ದು, ಕಾರ್ಯಾಚರಣೆ ಸಕ್ಸಸ್​ ಆಗಿದೆ ಎಂದು ಹೇಳಿದ್ದಾರೆ. ಇನ್ನೆರಡು ಗಂಟೆಯಲ್ಲಿ ಆರೋಪಿಗಳ ಬಂಧನದ ಬಗ್ಗೆ ಮಾಹಿತಿ ನೀಡುತ್ತೇವೆ. ಪೊಲೀಸರು ಅಥವಾ ನಾನೇ ಅಧಿಕೃತ ಮಾಹಿತಿ ನೀಡುವೆ ಎಂದೂ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights