ಸಿಬ್ಬಂದಿಗಳಿಗೆ ಧೂಮಪಾನ ಮಾಡದಂತೆ ನಿಷೇಧ ಹೇರಿದ ಜಪಾನ್ ಕಂಪನಿ..!

ಕಂಪನಿಯ ಸಿಬ್ಬಂದಿಗಳ ಆರೋಗ್ಯ ದೃಷ್ಟಿಯಿಂದ ಜಪಾನಿನ ಕಂಪನಿಯೊಂದು ತನ್ನ ಸಿಬ್ಬಂದಿಗಳಿಗೆ ಧೂಮಪಾನ ಮಾಡದಂತೆ ನಿಷೇಧ ಹೇರಿದೆ.

ಜಪಾನ್ ನ ಹಣಕಾಸು ಹಿಡುವಳಿ ಕಂಪನಿಯಾದ ನೋಮುರಾ ಹೋಲ್ಡಿಂಗ್ಸ್ ಇಂಕ್ ಕಂಪನಿ ಈ ಆದೇಶವನ್ನು ಹೊರಡಿಸಿದೆ. ಈ ಆದೇಶ ಅಕ್ಟೋಬರ್‌ನಲ್ಲಿ ಜಾರಿಗೆ ಬರಲಿದ್ದು ಕಂಪನಿಯ ಎಲ್ಲಾ ಧೂಮಪಾನ ಕೋಣೆಗಳನ್ನು ಮುಚ್ಚಲು ತೀರ್ಮಾನಿಸಲಾಗಿದೆ. ಸಿಬ್ಬಂದಿಗಳು ಮನೆಯಿಂದ ಕೆಲಸ ಮಾಡುತ್ತಿದ್ದರೂ ಸಹ ಈ ನಿಯಮ ಅನುಸರಿಸಬೇಕಾಗುತ್ತದೆ. ಈ ಆದೇಶ ಪರಸ್ಪರ ನಂಬಿಕೆಯನ್ನು ಆಧರಿಸಿರುತ್ತದೆ.  ಆದೇಶ ಮೀರಿದರೆ ಯಾವುದೇ ದಂಡ ಇರುವುದಿಲ್ಲ ಎಂದು ಕಂಪನಿಯ ವಕ್ತಾರ ಯೋಷಿತಕ ಓಟ್ಸು ತಿಳಿಸಿದ್ದಾರೆ.

ಸಿಬ್ಬಂದಿಗಳಿಗೆ ಅನುಕೂಲಕರ ಕೆಲಸದ ವಾತಾವರಣವನ್ನು ಸೃಷ್ಟಿಸಲು, ಧೂಮಪಾನವನ್ನು ತಡೆಯಲು ಮತ್ತು ಉದ್ಯೋಗಿಗಳ ಆರೋಗ್ಯವನ್ನು ಉತ್ತೇಜಿಸಲು ಈ ನಿಯಮ ಜಾರಿಗೆ ತರಲಾಗಿದೆ ಎಂದು ಬುಧವಾರ ನೋಮುರಾ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ.

“ಪ್ರತಿಯೊಬ್ಬರೂ ಆರೋಗ್ಯವಂತರಾಗಿರಬೇಕು ಮತ್ತು ಉದ್ಯೋಗಿಗಳು ತಮ್ಮ ಸಾಮರ್ಥ್ಯ, ಪಾತ್ರಗಳನ್ನು ಸಂಪೂರ್ಣವಾಗಿ ಪ್ರದರ್ಶಿಸಲು ಉತ್ಸಾಹದಿಂದ ಬದುಕುವಂತಹ ವಾತಾವರಣ ಇರಬೇಕು” ಎಂದು ಅದು ಹೇಳಿದೆ.

ಮನೆಯಲ್ಲಿ ಧೂಮಪಾನ

ಸಿಗರೇಟಿಗೆ ಸಂಬಂಧಿಸಿದ ಆರೋಗ್ಯದ ಅಪಾಯಗಳ ಬಗ್ಗೆ ಹೆಚ್ಚು ಗಮನ ಹರಿಸಿದ ನೋಮುರಾ ಕಂಪನಿ ಧೂಮಪಾನದ ವಿರುದ್ಧ ಕ್ರಮ ಕೈಗೊಂಡ ಜಪಾನಿನ ಏಕೈಕ ಸಂಸ್ಥೆಯಾಗಿದೆ. ಜಪಾನ್‌ನ ನ್ಯಾಷನಲ್ ಕ್ಯಾನ್ಸರ್ ಸೆಂಟರ್ ಮಾರ್ಚ್ ಸಮೀಕ್ಷೆಯ ಪ್ರಕಾರ, ಸಾಂಕ್ರಾಮಿಕ ಸಮಯದಲ್ಲಿ ಕೆಲಸ ಮಾಡುವ ಅಥವಾ ಮನೆಯಲ್ಲಿಯೇ ಇರುವುದರಿಂದ ತಮ್ಮ ಸಿಗರೇಟ್ ಬಳಕೆ ಹೆಚ್ಚಾಗಿದೆ ಎಂದು 10 ರಲ್ಲಿ ಇಬ್ಬರು ಧೂಮಪಾನಿಗಳು ಹೇಳಿದ್ದಾರೆ. ಈ ಧೂಮಪಾನಿಗಳು ಮನೆಯಲ್ಲಿ ಕೆಲಸ ಮಾಡುವಂತವರಾಗಿದ್ದಾರೆ. ಇದನ್ನು ತಡೆಯಲು ಕಂಪನಿ ಮುಂದಾಗಿದೆ.

ಆರೋಗ್ಯಕರ ಸಿಬ್ಬಂದಿ

ನೋಮುರಾ ತನ್ನ ವೆಬ್‌ಸೈಟ್‌ನಲ್ಲಿ, ಜಪಾನ್‌ನಲ್ಲಿನ ತನ್ನ ಉದ್ಯೋಗಿಗಳಲ್ಲಿ ಧೂಮಪಾನದ ಪ್ರಮಾಣವನ್ನು 2025 ರ ವೇಳೆಗೆ 12% ಕ್ಕೆ ಇಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ. ಜೊತೆಗೆ ಥರ್ಡ್ ಹ್ಯಾಂಡ್ ಧೂಮಪಾನ ತಡೆಗಟ್ಟಲು ಊಟದ ಸಮಯದಲ್ಲಿ ಅಥವಾ ವಿರಾಮದ ಸಮಯದಲ್ಲಿ ಧೂಮಪಾನ ಮಾಡಿದ ನಂತರ 45 ನಿಮಿಷಗಳ ಕಾಲ ತನ್ನ ಕಛೇರಿಗಳಿಂದ ದೂರವಿರಲು ಶಿಫಾರಸು ಮಾಡುತ್ತದೆ ಎಂದು ಓಟ್ಸು ಹೇಳಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights