ಸೈಮಾ ಅವಾರ್ಡ್‌ 2021: ರಚಿತಾ ರಾಮ್, ರಶ್ಮಿಕಾ, ಬಿ.ಸುರೇಶ್‌, ದರ್ಶನ್, ರಕ್ಷಿತ್ ಶೆಟ್ಟಿಗೆ ಪ್ರಶಸ್ತಿ!

2021ರ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಹೈದರಾಬಾದ್‌ನಲ್ಲಿ ನಡೆದಿದ್ದು, ಕನ್ನಡದ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಆಯುಷ್ಮಾನ್​ ಭವ ಸಿನಿಮಾದಲ್ಲಿ ನಟನೆಗಾಗಿ ರಚಿತಾ ರಾಮ್ ತಮ್ಮದಾಗಿಸಿಕೊಂಡಿದ್ದಾರೆ.

ಯಜಮಾನ ಚಿತ್ರದ ನಟನೆಗಾಗಿ ನಟ ದರ್ಶನ್, ಅವನೇ ಶ್ರೀಮನ್ನಾರಾಯಣ ಚಿತ್ರದ ನಟನೆಗಾಗಿ ರಕ್ಷಿತ್ ಶೆಟ್ಟಿ ಪ್ರಶಸ್ತಿ ಪಡೆದರೆ, ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ‘ಆಕ್ಟ್-1978’ ಚಿತ್ರದಲ್ಲಿನ ನಟನೆಗಾಗಿ ಬಿ.ಸುರೇಶ್ ತಮ್ಮದಾಗಿಸಿಕೊಂಡಿದ್ದಾರೆ.

ತೆಲುಗಿನ ಡಿಯರ್ ಕಾಮ್ರೆಡ್ ಮತ್ತು ಕನ್ನಡದ ಯಜಮಾನ ಚಿತ್ರಗಳಲ್ಲಿನ ನಟನೆಗಾಗಿ ಎರಡು ಭಾಷೆಗಳಲ್ಲಿ ಅತ್ಯುತ್ತಮ ನಟಿ ಕ್ರಿಟಿಕ್ಸ್​ ಅವಾರ್ಡ್‌ಗಳನ್ನು ರಶ್ಮಿಕಾ ಮಂದಣ್ಣ ಬಾಚಿಕೊಂಡಿದ್ದಾರೆ.

“ಪ್ರಶಸ್ತಿಗಳು ಬಹಳ ಮುಖ್ಯ ಅಲ್ಲ. ಅದಕ್ಕಿಂತ ಮುಖ್ಯವಾದದು ಜರ್ನಿ. ಈ ಪಯಣದಲ್ಲಿ ಏನೇನು ಮಾಡಲು ಸಾಧ್ಯವೋ ಅದನೇಲ್ಲಾ ಮಾಡಬೇಕು ಅಷ್ಟೇ. ಪ್ರಶಸ್ತಿ ಬಂದರೂ, ಬರದಿದ್ದರೂ ವ್ಯತ್ಯಾಸವಿಲ್ಲ. ಪ್ರಶಸ್ತಿಗಳನ್ನು ಮೀರಿದ್ದು ಬದುಕು” ಎಂದು ಸೈಮಾ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದ ನಟ, ನಿರ್ದೇಶಕ ಬಿ.ಸುರೇಶ್ ಹೇಳಿದ್ದಾರೆ.

ಇದನ್ನೂ ಓದಿ: ಅಭಿಮಾನಿಗೆ ಕಿರುಕುಳ ಆರೋಪ; ನಟಿ, ಬಿಜೆಪಿ ಮುಖಂಡೆ ವಿರುದ್ದ ದೂರು ದಾಖಲು!

“ಈ ಪಾತ್ರ ಮಾಡಲು ನನಗೆ ಕಥೆ ಹೇಳಿದಾಗ ನಾನು ಬೇರೆ ಐದು ಜನ ಕಲಾವಿದರ ಹೆಸರನ್ನು ಹೇಳಿ ಅವರು ನನಗಿಂತ ಚೆನ್ನಾಗಿ ಪಾತ್ರ ನಿರ್ವಹಿಸುತ್ತಾರೆ ಎಂದಿದ್ದೆ. ಆದರೆ, ನಿರ್ದೇಶಕರು ನೀವೇ ಈ ಪಾತ್ರ ಮಾಡಬೇಕು ಎಂದರು” ಎಂದು ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ.

ಸೈಮಾ- 2021ರ ಕನ್ನಡ ವಿಭಾಗದ ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ:

ಅತ್ಯುತ್ತಮ ನಟ: ದರ್ಶನ್​ (ಯಜಮಾನ)

ಅತ್ಯುತ್ತಮ ನಟಿ: ರಚಿತಾ ರಾಮ್​ (ಆಯುಷ್ಮಾನ್​ ಭವ)

ಅತ್ಯುತ್ತಮ ನಟ ಕ್ರಿಟಿಕ್ಸ್​ ಅವಾರ್ಡ್​: ರಕ್ಷಿತ್​ ಶೆಟ್ಟಿ (ಅವನೇ ಶ್ರೀಮನ್ನಾರಾಯಣ)

ಅತ್ಯುತ್ತಮ ನಟಿ ಕ್ರಿಟಿಕ್ಸ್​ ಅವಾರ್ಡ್​: ರಶ್ಮಿಕಾ ಮಂದಣ್ಣ (ಯಜಮಾನ)

ಅತ್ಯುತ್ತಮ ಹೊಸ ನಟ ಅಭಿಷೇಕ್​ ಅಂಬರೀಷ್​ (ಅಮರ್​)

ಅತ್ಯುತ್ತಮ ಪೋಷಕ ನಟಿ: ಕಾರುಣ್ಯ ರಾಮ್​ (ಮನೆ ಮಾರಾಟಕ್ಕಿದೆ)

ಅತ್ಯುತ್ತಮ ಪೋಷಕ ನಟ: ಬಿ.ಸುರೇಶ್ (ಆಕ್ಟ್-1978)

ಅತ್ಯುತ್ತಮ ಖಳನಟ: ಸಾಯಿ ಕುಮಾರ್​ (ಭರಾಟೆ)

ಅತ್ಯುತ್ತಮ ಚೊಚ್ಚಲ ನಿರ್ದೇಶನ: ಮಯೂರ ರಾಘವೇಂದ್ರ (ಕನ್ನಡ್​ ಗೊತ್ತಿಲ್ಲ)

ಅತ್ಯುತ್ತಮ ಹಾಸ್ಯ ಕಲಾವಿದ: ಸಾಧು ಕೋಕಿಲ (ಯಜಮಾನ)

ಅತ್ಯುತ್ತಮ ನಿರ್ದೇಶನ: ಹರಿಕೃಷ್ಣ, ಪೋನ್​ ಕುಮಾರ್​ (ಯಜಮಾನ)

ಅತ್ಯುತ್ತಮ ಸಂಗೀತ ನಿರ್ದೇಶನ: ವಿ. ಹರಿಕೃಷ್ಣ (ಯಜಮಾನ)

ಅತ್ಯುತ್ತಮ ನೃತ್ಯ ನಿರ್ದೇಶನ: ಇಮ್ರಾನ್​ ಸರ್ದಾರಿಯಾ (ಅವನೇ ಶ್ರೀಮನ್ನಾರಾಯಣ)

ಅತ್ಯುತ್ತಮ ಹಿನ್ನೆಲೆ ಗಾಯಕಿ: ಅನನ್ಯಾ ಭಟ್​ (ಗೀತಾ- ಕೇಳದೇ ಕೇಳದೇ)

ಅತ್ಯುತ್ತಮ ಸಾಹಿತ್ಯ: ಪವನ್​ ಒಡೆಯರ್​ (ನಟಸಾರ್ವಭೌಮ)

ಅತ್ಯುತ್ತಮ ಚಿತ್ರ (ಕನ್ನಡ) – ಮೀಡಿಯಾ ಹೌಸ್ ಸ್ಟುಡಿಯೋ (ಯಜಮಾನ).

ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ಕೊಲೆ ಬೆದರಿಕೆ ಹಾಕಿದ್ದ ವಿಹೆಚ್‌ಪಿ ಮುಖಂಡ ಯೂಟರ್ನ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights