ನಿದ್ರಿಸುತ್ತಿದ್ದ ಪತ್ನಿಗೆ ಹಾವಿನಿಂದ ಕಚ್ಚಿಸಿ ಕೊಲೆಗೈದ ಕ್ರೂರ ಪತಿ; ಶಿಕ್ಷೆ ವಿಧಿಸಿದ ಕೋರ್ಟ್‌

ಹಾವು ಕಚ್ಚಿ ಸಾವನ್ನಪ್ಪಿದ 25 ವರ್ಷದ ಮಹಿಳೆಯ ಪತಿಗೆ ಕೊಲೆ ಆರೋಪದಲ್ಲಿ ಶಿಕ್ಷೆ ವಿಧಿಸಿ ಕೇರಳದ ಕೊಲ್ಲಂ ಜಿಲ್ಲೆಯ ನ್ಯಾಯಾಲಯವು ತೀರ್ಪು ನೀಡಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಮಲಗುವ ಕೋಣೆಯಲ್ಲಿ ಉತ್ರಾ ಎಂಬ ಮಹಿಳೆ ನಿದ್ರಿಸುತ್ತಿದ್ದರು. ಈ ವೇಳೆ ಆಕೆಯ ಪತಿ, ಆರೋಪಿ ಸೂರಜ್ ಕೋಣೆಗೆ ನಾಗರ ಹಾವು ಬಿಟ್ಟು, ಆಕೆಗೆ ಕಚ್ಚುವಂತೆ ಮಾಡಿದ್ದನು.

ಪ್ರಕರಣದ ವಿಚಾರಣೆ ನಡೆಸಿರುವ ಕೊಲ್ಲಂನ ಆರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಆತನಿಗೆ ಶಿಕ್ಷೆ ವಿಧಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಬುಧವಾರ ಪ್ರಕಟಿಸುವುದಾಗಿ ಹೇಳಿದೆ.

ನ್ಯಾಯಾಲಯದ ತೀರ್ಪಿನ ಬಗ್ಗೆ ರಾಜ್ಯ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಪ್ರತಿಕ್ರಿಯಿಸಿದ್ದು, “ಸಾಂದರ್ಭಿಕ ಸಾಕ್ಷ್ಯದ ಆಧಾರದಲ್ಲಿ ಆರೋಪಿಯನ್ನು ತಪ್ಪಿತಸ್ಥ ಎಂದು ಪರಿಗಣಿಸಲಾಗಿರುವ ಅಪರೂಪದ ಪ್ರಕರಣಗಳಲ್ಲಿ ಇದೂ ಒಂದು. ಪ್ರಕರಣವನ್ನು ತನಿಖೆ ಮಾಡಿದ ಪೊಲೀಸ್ ತಂಡವನ್ನು ಅಭಿನಂದಿಸುತ್ತೇನೆ. ವೈಜ್ಞಾನಿಕವಾಗಿ ಮತ್ತು ವೃತ್ತಿಪರವಾಗಿ ಕೊಲೆ ಪ್ರಕರಣವನ್ನು ಹೇಗೆ ತನಿಖೆ ಮಾಡಲಾಗಿದೆ ಮತ್ತು ಪತ್ತೆ ಹಚ್ಚಲಾಗಿದೆ ಎಂಬುದಕ್ಕೆ ಇದು ಒಂದು ಅತ್ಯುತ್ತಮ ಉದಾಹರಣೆಯಾಗಿದೆ” ಎಂದು ಹೇಳಿದ್ದಾರೆ.

ಪ್ರಕರಣವನ್ನು ಭೇದಿಸಲು ವಿಧಿವಿಜ್ಞಾನ ಪ್ರಯೋಗ, ಫೈಬರ್ ಡೇಟಾ, ಪ್ರಾಣಿಗಳ ಡಿಎನ್ಎ ಮತ್ತು ಇತರ ಸಾಕ್ಷ್ಯಗಳನ್ನು ವಿಶ್ಲೇಷಿಸಲು ತನಿಖಾ ತಂಡವು ತುಂಬಾ ಶ್ರಮಿಸಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಾಲ್ಯ ವಿವಾಹದಿಂದ ದಿನಕ್ಕೆ 60 ಹೆಣ್ಣು ಮಕ್ಕಳ ಸಾವು: ವರ್ಷದಲ್ಲಿ 22,000 ಬಾಲಕಿಯರ ಸಾವು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights