Fact check: ಸಾವರ್ಕರ್ ಟೀಕಿಸಿದ್ದಕ್ಕೆ ಕನ್ನಡ ಹೋರಾಟಗಾರ ಹರೀಶ್ ಕುಮಾರ್ ಕುರಿತು ಸುಳ್ಳು ಸುದ್ದಿ ಹರಿಡಿದ ಬಲಪಂಥೀಯರು

ಸಾಮಾಜಿಕ ಮಾಧ್ಯಮಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಕನ್ನಡ ಪರ ಹೋರಾಟಗಾರರಾದ ಭೈರಪ್ಪ ಹರೀಶ್ ಕುಮಾರ್ ಅವರ ವಿರುದ್ಧ ಹಲವಾರು ಅವಹೇಳನಕಾರಿ ಪೋಸ್ಟ್ ಗಳು ಹರಿದಾಡುತ್ತಿವೆ. ಅಷ್ಟು ಮಾತ್ರವಲ್ಲದೆ ಬೈರಪ್ಪ ಹರೀಶ್ ಕುಮಾರ್ ಅವರು ಆತ್ಮಹತ್ಯೆ ಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಹಬ್ಬಿಸಿ ಶ್ರದ್ದಾಂಜಲಿ ಅರ್ಪಿಸುವ  ಪೋಸ್ಟ್ ಸಹ ಮಾಡಲಾಗಿದೆ. ಈ ಕುರಿತ ಫ್ಯಾಕ್ಟ್‌ಚೆಕ್ ಇಲ್ಲಿದೆ.

ಫೇಸ್‌ಬುಕ್ ನಲ್ಲಿ ಬಲಪಂಥೀಯ ವಿಚಾರಧಾರೆಯನ್ನು ಹಂಚುವ ನಾಗು ಆರ್ ಬೆಂಗಳೂರು ಎಂಬುವವರು ತಮ್ಮ ವಾಲ್ ನಿಂದ ಈ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ.

 

ನಾಗು ಆರ್ ಬೆಂಗಳೂರು ಎಂಬುವವರು ಮಾಡಿರುವ ಪೋಸ್ಟ್‌ಗೆ ಸುಮಾರು 177 ಲೈಕ್ 64 ಕಮೆಂಟ್ ಹಾಗೂ 25 ಶೇರ್ ಆಗಿವೆ. ಪೋಸ್ಟ್ ಗೆ ಕಮೆಂಟ್ ಮಾಡಿರುವವರು ಅಶ್ಲೀಲವಾಗಿ ಮತ್ತು ಅಸಹ್ಯಕರ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

ಫ್ಯಾಕ್ಟ್‌ಚೆಕ್  

ಈ ಪೋಸ್ಟ್‌ಗಳನ್ನು ಪರಿಶೀಲಿಸಲು ನಾವು ಫ್ಯಾಕ್ಟ್‌ಚೆಕ್ ಮಾಡಿದಾಗ ಭೈರಪ್ಪ ಹರೀಶ್ ಕುಮಾರ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಉದ್ದಶಪೂರ್ವಕವಾಗಿ ಸುಳ್ಳು ಸುದ್ದಿ ಹರಡಿದ್ದಾರೆ ಎಂದು ತಿಳಿದುಬಂದಿದೆ.

ensuddi.com ಸ್ವತಃ ಭೈರಪ್ಪ ಹರೀಶ್ ಕುಮಾರ್ ಅವರಿಗೆ ಕರೆ ಮಾಡಿದಾಗ ಅವರು ನನ್ನ ವಿಚಾರಗಳನ್ನು ಸಹಿಸದ ಬಲಪಂಥೀಯರು ಸುಳ್ಳು ಹರಡುತ್ತಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಏಸ್ ಸುದ್ದಿ ಜೊತೆ ಮಾತನಾಡಿದ ಅವರು, “ನಾನು ಸಂಪೂರ್ಣ ಆರೋಗ್ಯವಾಗಿದ್ದು, ಆತ್ಮಹತ್ಯೆಯನ್ನಾಗಲಿ ಅಥವ ಆತ್ಮಹತ್ಯೆಯ ಪ್ರಯತ್ನವನ್ನಾಗಲಿ ಮಾಡಿರುವುದಿಲ್ಲ. 10 ವರ್ಷಗಳ ಹಿಂದೆ ನಾನು ಅನಾರೋಗ್ಯದ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದ ಫೋಟೊವನ್ನು ಎಡಿಟ್ ಮಾಡಿ, ಆತ್ಮಹತ್ಯೆಗೆ ಯತ್ನಿಸಿದ್ದೇನೆ ಎಂದು ಬಲಪಂಥೀಯ ಪ್ರತಿಪಾದಕರು ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಪೇಜ್ ಮೂಲಕ ಸಹ ಸ್ಪಷ್ಟೀಕರಣ ನೀಡಿದ್ದಾರೆ.

ನಾನು ಇತ್ತೀಚೆಗೆ ಸಾವರ್ಕರ್ ಟೀಕಿಸಿ ಒಂದು ಫೇಸ್‌ಬುಕ್ ಪೋಸ್ಟ್ ಹಾಕಿದ್ದೆ. ಅದನ್ನು ಸಹಿಸದ ಬಲಪಂಥೀಯರು ನನ್ನ ವಿರುದ್ಧ ಇಲ್ಲ ಸಲ್ಲದ ಸುಳ್ಳು ಸುದ್ದಿ ಹರಡಿ ವಿಕೃತ ಮನಸ್ಥಿತಿ ತೋರಿಸುತ್ತಿದ್ದಾರೆ. ಇದ್ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಲಾಗದ ಹೇಡಿಗಳು ಮಾತ್ರ ಹೀಗೆ ಮಾಡುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಘಟನೆಯ ವಿವರ

2022 ಜನವರಿ 21 ರಂದು ಭೈರಪ್ಪ ಹರೀಶ್ ಅವರು ಸಾವರ್ಕರ್ ಪುಸ್ತಕ ಕುರಿತಾಗಿ ತಮ್ಮ ಫೆಸ್‌ಬುಕ್ ನಲ್ಲಿ “ಬ್ರಿಟಿಷರ ಬೂಟು ನೆಕ್ಕಿ ಕ್ಷಮಾಪಣೆ ಬರೆದುಕೊಟ್ಟ ಇವರ ಪುಕ್ಕಲುತನ ಓದಲು 25 % ಡಿಸ್ಕೌಂಟ್..”  ಎಂದು ಬರೆದಿದ್ದರು.

ಹರೀಶ್ ಕುಮಾರ್ ಅವರ ಈ  ಪೋಸ್ಟ್‌ಗೆ ಬಲಪಂಥೀಯ ಗುಂಪಿನಿಂದ ಅಶ್ಲೀಲ ಪದಬಳಕೆ ಮಾಡಿ ಅವಹೇಳನಕಾರಿ ಪೋಸ್ಟ್‌ಗಳನ್ನು ಮಾಡಿರುವುದನ್ನು ಇಲ್ಲಿ ನೋಡಬಹುದು ಅವುಗಳನ್ನು ಸ್ವತಃ ಭೈರಪ್ಪ ಹರೀಶ್ ಕುಮಾರ್ ಅವರೆ ಪೋಸ್ಟ್ ಮಾಡಿದ್ದಾರೆ.

 

ಸಾವರ್ಕರ್ ಅವರ ಪುಸ್ತಕದ ಕುರಿತಾಗಿ ಭೈರಪ್ಪ ಹರೀಶ್ ಕುಮಾರ್ ಅವರ ಒಂದು ಪೋಸ್ಟ್‌ ಸಹಿಸಿಕೊಳ್ಳದ ಬಲಪಂಥೀಯರು ನಂತರ ಹಲವಾರು ಎಡಿಟೆಡ್ ಫೋಟೊ ಬಳಸಿ ಆತ್ಮಹತ್ಯೆಯ ಸುಳ್ಳು ಫೋಟೊ ವೈರಲ್ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳವುದಾದರೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾಗುತ್ತಿರುವ ಭೈರಪ್ಪ ಹರೀಶ್ ಅವರ ಆತ್ಮಹತ್ಯೆ ಕುರಿತಾದ ಪೋಸ್ಟ್ ಸುಳ್ಳಾಗಿದೆ. ಸಾವರ್ಕರ್ ಟೀಕಿಸಿದ್ದಾಗಿ ಈ ಸುಳ್ಳು ಸುದ್ದಿ ಹರಡಲಾಗಿದೆ.


ಇದನ್ನು ಓದಿರಿ: Fact check: ಮುಂಬೈ ಅವಘಡದ ವೈರಲ್ ವಿಡಿಯೊದ ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights