Fact check: ಲತಾ ಮಂಗೇಶ್ಕರ್ ಸಾವನಪ್ಪಿದಾರೆ ಎಂಬುದು ಸುಳ್ಳು, ಚೇತರಿಸಿಕೊಳ್ಳುತ್ತಿದ್ದಾರೆ ಎಂದ ವೈದ್ಯರು

ಭಾರತದ ಹೆಸರಾಂತ ಗಾಯಕಿ ಲತಾ ಮಂಗೇಶ್ಕರ್ ಅವರು ಕೋವಿಡ್ -19 ಗೆ ಬಲಿಯಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ  ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಆದರೆ ಈ ವೈರಲ್ ಸುದ್ದಿಯನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸಿಬ್ಬಂದ್ಧಿಗಳು ಸೋಮವಾರ (ಇಂದು) ತಳ್ಳಿ ಹಾಕಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ದಾಖಲಾಗಿರುವ 92 ವಯಸ್ಸಿನ ಗಾಯಕಿ ಲತಾ ಮಂಗೇಶ್ಕರ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ,  ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು  ತಿಳಿಸಿದ್ದಾರೆ.

ಭಾರತದ ಮೆಲೋಡಿ ಕ್ವೀನ್ ಎಂದೆ ಹೆಸರಾಗಿರುವ ಲತಾ  ಮಂಗೇಶ್ಕರ್ ಅವರು ಕೋವಿಡ್ -19 ಪಾಸಿಟೀವ್ ಪರೀಕ್ಷೆಯ ನಂತರ ಜನವರಿ 8 ರಂದು ಬ್ರೀಚ್ ಕ್ಯಾಂಡಿಗೆ ದಾಖಲಾಗಿದ್ದರು. ನಂತರ ನ್ಯುಮೋನಿಯಾ ಕಂಡುಬಂದ ಕಾರಣ  ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಲತಾ ಮಂಗೇಶ್ಕರ್, ಬಾಲಿವುಡ್ ಮತ್ತು ಇತರ ಹಲವು ಭಾಷೆಗಳಲ್ಲಿ ಸಾವಿರಾರು ಹಾಡುಗಳಿಗೆ ಧ್ವನಿಯಾಗಿದ್ದಾರೆ ಮತ್ತು 2001 ರಲ್ಲಿ ಭಾರತ ರತ್ನ ಸೇರಿದಂತೆ ಪದ್ಮಭೂಷಣ, ಪದ್ಮವಿಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಅಂತರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪಡೆದಿದ್ದಾರೆ.

ಹಲವರು ತಮ್ಮ ಫೇಸ್‌ಬುಕ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ “ಲತಾ ಮಂಗೇಶ್ವರ್ ಅವರಿಗೆ ಶ್ರದ್ದಾಂಜಲಿಗಳು ಓಂ ಶಾಂತಿ” ಎಂದು ಬರೆದುಕೊಂಡು ಪೋಸ್ಟ್‌ ಮಾಡಿದ್ದಾರೆ. ಅವರು 92 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಹೇಳಿಕೊಂಡು ಪೋಸ್ಟ್ ಮಾಡುತ್ತಿದ್ದಾರೆ.

ಫ್ಯಾಕ್ಟ್ ಚೆಕ್

ಜನವರಿ 8 ರಂದು ಮಂಗೇಶ್ಕರ್ ಅವರನ್ನು ದಾಖಲಿಸಿದ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಸಂಪರ್ಕಿಸಲಾಗಿದ್ದು ನಮ್ಮೊಂದಿಗೆ ಮಾತನಾಡಿದ ಡಾ. ಪ್ರತೀತ್ ಸಮ್ದಾನಿ, ಸಹ ಪ್ರಾಧ್ಯಾಪಕ ಮತ್ತು ಲತಾ ಮಂಗೇಶ್ಕರ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ಬ್ರೀಚ್ ಕ್ಯಾಂಡಿಯ  ವೈದ್ಯ, “ಅವರು ಪ್ರಸ್ತುತ ಐಸಿಯುನಲ್ಲಿ ಚಿಕಿತ್ಸೆಯಲ್ಲಿದ್ದಾರೆ. ನಾವು ಅವರನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಅವರು ಸುಧಾರಣೆಯ ಲಕ್ಷಣಗಳನ್ನು ತೋರಿಸುತ್ತಿದ್ದಾರೆ” ಅವರು ಆಸ್ಪತ್ರೆಯಲ್ಲಿ ಎಷ್ಟು ದಿನ ಇರುತ್ತಾರೆ ಎಂದು ಹೇಳುವುದು ಕಷ್ಟ ಎಂದು ಅವರು ಹೇಳಿದರು.

“ನಾನು ಅವರ ಸ್ಥಿತಿಯನ್ನು ವಿವರಿಸಲು ಸಾಧ್ಯವಿಲ್ಲ ಅಥವಾ ಅವರನ್ನು ಯಾವಾಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ ಆದರೆ ಲತಾ ಮಂಗೇಶ್ಕರ್ ಜೀವಂತವಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ” ಎಂದು ವೈದ್ಯರು  ದೃಢಪಡಿದ್ದಾರೆ. “ಅವರು ಸಾವನ್ನಪ್ಪಿದ್ದಾರೆಂದು ಹೇಳುವ ಯಾವುದೇ ಅಪ್‌ಡೇಟ್‌ಗಳು ಸುಳ್ಳು. ಅವರನ್ನು ಐಸಿಯುನಲ್ಲಿ ದಾಖಲಿಸಲಾಗಿದೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ” ಎಂದು ಮೂಲಗಳು ತಿಳಿಸಿವೆ.

ಜನವರಿ 22 ರಂದು ಅವರ ವಕ್ತಾರರು ಮಂಗೇಶ್ಕರ್ ಅವರ ಅಧಿಕೃತ ಅಕೌಂಟ್‌ನಿಂದ ಟ್ವೀಟ್ ಕೂಡ ಮಾಡಿ, ಅವರ ಆರೋಗ್ಯ ಸ್ಥಿತಿಯ ಬಗ್ಗೆ ಸುಳ್ಳು ಊಹಾಪೋಹಗಳಿಗೆ ಗಮನ ಕೊಡಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದರು. ಅವರ ಮಾಧ್ಯಮ ತಂಡದ ಸದಸ್ಯರೊಬ್ಬರು, “ಲತಾ ದಿ” ಅವರು ಸ್ಥಿರವಾಗಿದ್ದಾರೆ. ವೈದ್ಯರು ಒಪ್ಪಿಗೆ ನೀಡಿದ ನಂತರ ಮನೆಗೆ ಬರುತ್ತಾರೆ” ಎಂದು ಹೇಳಿಕೆ ನೀಡಿರುವ ಸುದ್ದಿಗಳು ಮಾಧ್ಯಮಗಳಲ್ಲಿ ವರದಿಯಾಗಿವೆ.

ಹಾಗಾಗಿ 92 ವರ್ಷದ ಗಾಯಕಿ ಲತಾ ಮಂಗೇಶ್ಕರ್ ಅವರು ಸಾವನಪ್ಪಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ಗಳು ಸುಳ್ಳಾಗಿದ್ದು, ತಪ್ಪಾಗಿ ಹಂಚಿಕೊಳ್ಳಲಾಗಿದೆ.


ಇದನ್ನು ಓದಿರಿ: fact check: ಚೈನಾ ಗಡಿಯಲ್ಲಿ ಭಾರತೀಯ ಸೇನೆಯು ಸಿಖ್ ಧ್ವಜ ಹಾರಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.