ಫ್ಯಾಕ್ಟ್‌ಚೆಕ್: ಡಾ. ಅಬ್ದುಲ್ ಕಲಾಂ ಅವರ ಸಹೋದರ ಛತ್ರಿ ರಿಪೇರಿ ಮಾಡುತ್ತಿರುವುದು ನಿಜವೇ?

ವೃದ್ದರೊಬ್ಬರು ಛತ್ರಿ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಪೋಟೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಫೋಟೋದಲ್ಲಿ ಕಾಣುವ ವೃದ್ಧನನ್ನು ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಸಹೋದರ ಎಂದು ಪ್ರತಿಪಾದಿಸಲಾಗಿದೆ.

ಡಾ. ಕಲಾಂ ಅವರ ಹಿರಿಯ ಸಹೋದರ ಮೊಹಮ್ಮದ್ ಮುತ್ತು ಮೀರಾ ಲೆಬ್ಬಾಯಿ ಮರೈಕಾಯರ್ ಅವರು 100 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಈಗಲೂ ‘ಕೊಡೆಗಳನ್ನು ರಿಪೇರಿ ಮಾಡುವ ಮೂಲಕ ದುಡಮೆ ಮಾಡುತ್ತಿದ್ದಾರೆ’ ಎಂದು ವೈರಲ್ ಪೋಸ್ಟ್‌ನಲ್ಲಿ  ಹೇಳಲಾಗಿದೆ. ಹಾಗಿದ್ದರೆ ವೈರಲ್ ಪೋಸ್ಟ್‌ನಲ್ಲಿ ಪ್ರತಿಪಾದಿಸಿದ ಸುದ್ದಿಯ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಛತ್ರಿ ರಿಪೇರಿ ಮಾಡುತ್ತಿರುವ ವ್ಯಕ್ತಿ ಅಬ್ದುಲ್ ಕಲಾಂ ಸಹೋದರನಲ್ಲ

ವೈರಲ್ ಪೋಸ್ಟ್‌ನಲ್ಲಿರುವ ಚಿತ್ರವು ಡಾ ಎಪಿಜೆ ಅಬ್ದುಲ್ ಕಲಾಮ್ ಅವರ ಸಹೋದರ ಮುತ್ತು ಮೀರಾ ಲೆಬ್ಬಾಯಿ ಮರೈಕಾ ಅವರದ್ದಲ್ಲ. ವಾಸ್ತವವಾಗಿ, ಮರೈಕಾಯರ್ ಅವರು ತಮ್ಮ 104 ನೇ ವಯಸ್ಸಿನಲ್ಲಿ ವಯೋ ಸಹಜ ಖಾಯಿಲೆಗಳಿಂದ  2021 ಮಾರ್ಚ್‌ 7 ರಂದು ನಿಧನ ಹೊಂದಿದ್ದರು. ಎಪಿಜೆ ಅಬ್ದುಲ್ ಕಲಾಂ ಇಂಟರ್‌ನ್ಯಾಶನಲ್ ಫೌಂಡೇಶನ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ ಅವರು ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದಾರೆ.

ಆದರೆ, ವೈರಲ್‌ ಆಗಿರುವ ಚಿತ್ರದಲ್ಲಿ ಹೇಳಲಾಗುತ್ತಿರುವ ಆ ವೃದ್ಧ ಡಾ.ಎ.ಪಿ.ಜೆ.ಅದ್ಬುಲ್‌ ಕಲಾಂ ಅವರ ಹಿರಿಯ ಸಹೋದರ ಎಂಬ ಹೇಳಿಕೆ ನಿಜವೆ ಎಂದು ಪರಿಶೀಲಿಸಿದಾಗ ಅದು ಸುಳ್ಳೆಂದು ತಿಳಿದುಬಂದಿದೆ. ಹಿರಿಯ ವ್ಯಕ್ತಿಯು ಕಲಾಮ್ ಅವರ ಸಹೋದರ ಮುತ್ತು ಮೀರಾ ಲೆಬ್ಬಾಯಿ ಮರೈಕಾ ಚಿತ್ರವನ್ನು ಹೋಲುತ್ತಿದೆ ಹಾಗಾಗಿ ಈ ಫೋಟೋನ್ನು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ, ಆದರೂ ಪೋಸ್ಟ್‌ನಲ್ಲಿ ಮಾಡಲಾಗುತ್ತಿರುವ ಪ್ರತಿಪಾದನೆ ತಪ್ಪಾಗಿದೆ.  ಯಾಕೆಂದರೆ ಕಲಾಂ ಅವರ ಸಹೋದರ ಮುತ್ತು ಮೀರಾ ಲೆಬ್ಬಾಯಿ ಮರೈಕಾ 2021ರಲ್ಲಿ  ತೀರಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ವಾಸ್ತವವಾಗಿ ಅಬ್ದುಲ್ ಕಲಾಮ್ ಅವರ ಸಹೋದರ ಮುತ್ತು ಮೀರಾ ಲೆಬ್ಬಾಯಿ ಮರೈಕಾ ಅವರು ಕೊಡೆ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡಿಲ್ಲ ಹಾಗಾಗಿ ಯಾರೊ ವೃದ್ದರೊಬ್ಬರ ಫೋಟೋವನ್ನು ಅಬ್ದುಲ್ ಕಲಾಮ್ ಅವರ ಸಹೋದರನ ಫೋಟೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ವೈರಲ್ ಫೋಟೋ ಸುಮಾರು 2015 ರಿಂದಲೂ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ದೇವಾಲಯದಲ್ಲಿ ಸಮಾಧಿ ನಿರ್ಮಿಸಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.