ಫ್ಯಾಕ್ಟ್‌ಚೆಕ್: ಗುಜರಾತ್‌ನ ಶಿವಘಾಟ್‌ ಜಲಪಾತವನ್ನು ಅಂಬೋಲಿಘಾಟ್‌ ಎಂದು ಹಂಚಿಕೆ

‘ಅಂಬೋಲಿ ಘಾಟ್‌ಗೆ ಹೋಗುವ ಪ್ರವಾಸಿಗರು ಜಾಗರೂಕರಾಗಿರಬೇಕು’ ಎಂಬ ಪೋಸ್ಟ್ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದ್ದು, ವೀಡಿಯೋ ಅಂಬೋಲಿ ಘಾಟ್‌ನಿಂದ ಬಂದಿದೆ ಎಂದು ಸೂಚಿಸುತ್ತದೆ. ಮತ್ತೂ ಕೆಲವರು ಇದನ್ನು ಕರ್ನಾಟಕದ ಸಕಲೇಶಪುರದ ಮಾರ್ಗದಲ್ಲಿ ಬರುವ ಶಿರಾಡಿಘಾಟ್‌ ಎಂದು ಹಂಚಿಕೊಂಡಿದ್ದಾರೆ. ಹಾಗಾಗಿ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ ಮೂಲ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಂತೆಯೇ ಮತ್ತೊಂದು ವಿಡಿಯೊ ಫೇಸ್‌ಬುಕ್ ಪೋಸ್ಟ್‌ನಲ್ಲಿ ಕಂಡುಬಂದಿದೆ. ಈ ಪೋಸ್ಟ್‌ನಲ್ಲಿ ಹಂಚಿಕೊಂಡಿರುವಂತೆಯೇ ವಿಡಿಯೊವನ್ನು ಸಹ ಒಳಗೊಂಡಿದೆ. ಅದರಲ್ಲಿ ಉಲ್ಲೇಖಿಸಲಾದ ವಿವರಗಳ ಆಧಾರದ ಮೇಲೆ, ವೀಡಿಯೊದಲ್ಲಿರುವ ಜಲಪಾತವು ಗುಜರಾತ್‌ನ ಡ್ಯಾಂಗ್ ಜಿಲ್ಲೆಯ ಅಹ್ವಾ ಗ್ರಾಮದ ಶಿವಘಾಟ್ ಜಲಪಾತವಾಗಿದೆ ಎಂದು ತಿಳಿದುಬಂದಿದೆ.

ವಿಪುಲ್ ಪ್ರಜಾಪತಿ ಎಂಬ ಬಳಕೆದಾರರು ಗೂಗಲ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊವು ಮೂಲ ಪೋಸ್ಟ್‌ನ ವೀಡಿಯೊದಂತೆಯೇ ಜಲಪಾತವನ್ನು ಬಹುತೇಕ ಅದೇ ಕೋನದಿಂದ ತೋರಿಸುತ್ತದೆ ಮತ್ತು ಅದು ಅದೇ ಸ್ಥಳವಾಗಿದೆ ಎಂದು ನಾವು ನೋಡಬಹುದು. ಎರಡು ವೀಡಿಯೊಗಳ ಪಕ್ಕದ ಹೋಲಿಕೆಯನ್ನು ಕೆಳಗೆ ನೋಡಬಹುದು.

ಅಂತರ್ಜಾಲದಲ್ಲಿ ಲಭ್ಯವಿರುವ ವಿವಿಧ ವೀಡಿಯೊಗಳು ಶಿವಘಾಟ್ ಜಲಪಾತಗಳ ಪೋಸ್ಟ್‌ನಿಂದ ವೀಡಿಯೊದ ಸ್ಥಳವನ್ನು ಸೂಚಿಸುತ್ತವೆ. ಆ ವೀಡಿಯೊಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಗುಜರಾತಿನ ದಂಗ್ ಜಿಲ್ಲೆಯ ಅಹ್ವಾ ಗ್ರಾಮದ ಶಿವ ಘಾಟ್ ಎಂಬ ಜಲಪಾತವನ್ನು. ಅಂಬೋಲಿ ಘಾಟ್ ಎಂದು ಬೇರೆ ಬೇರೆ ಸ್ಥಳದಿಂದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ದೇಶಕ್ಕಾಗಿ ಮೋದಿ ಪ್ರದಕ್ಷಿಣೆ ಎಂದು ಅರ್ಚಕ ಸಂತೋಷ್ ತ್ರಿವೇದಿಯ ವಿಡಿಯೊ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights