ಫ್ಯಾಕ್ಟ್‌ಚೆಕ್: ಗಾಂಧಿ ಮತ್ತು ನೆಹರೂ ಭಗತ್ ಸಿಂಗ್ ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಲಿಸದಿರಲು ಕಾರಣವೇನು?

ಅಕ್ಟೋಬರ್ 2 ಗಾಂಧಿ ಜಯಂತಿ. ಇಡೀ ದೇಶವೆ ಮಹಾತ್ಮ ಗಾಂಧಿಯ ಅಹಿಂಸಾ ಸಂದೇಶವನ್ನು ನೆನೆಯುವ ಮೂಲಕ ಗಾಂಧಿ ಅವರನ್ನು ಸ್ಮರಿಸಿದೆ. ಗಾಂಧಿ ಜಯಂತಿ ಹಿನ್ನಲೆಯಲ್ಲಿ ಗಾಂಧಿ ಕುರಿತಾದ ಹಲವು ಸುದ್ದಿ ಮತ್ತು ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತದೆ.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಗತ್ ಸಿಂಗ್ ಅವರ ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಅವರ ಪರವಾಗಿ ವಕಾಲತ್ತು ವಹಿಸಲು ಯಾವುದೇ ಉನ್ನತ ವಕೀಲರನ್ನು ನೇಮಿಸಿರಲಿಲ್ಲ. ಸ್ವಾತಂತ್ರ ಸಂಗ್ರಾಮದ ಸಂದರ್ಭದಲ್ಲಿ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮತ್ತು ಮುಹಮ್ಮದ್ ಅಲಿ ಜಿನ್ನಾ ಅವರ ಹೆಸರನ್ನು ಉಲ್ಲೇಖಿಸಿ, ಈ ಮೂವರು ಭಗತ್ ಸಿಂಗ್ ಅವರ ಪ್ರಕರಣವನ್ನು ಪ್ರತಿನಿಧಿಸಲು ನಿರಾಕರಿಸಿದರು ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಮೋಹನ್‌ದಾಸ್ ಕರಮಚಂದ್ ಗಾಂಧಿ, ಜವಾಹರಲಾಲ್ ನೆಹರು ಮತ್ತು ಮೊಹಮ್ಮದ್ ಅಲಿ ಜಿನ್ನಾ ಅವರು ಆ ಕಾಲಘಟ್ಟದಲ್ಲಿ ಖ್ಯಾತ ವಕೀಲರು ಮತ್ತು ಬ್ಯಾರಿಸ್ಟರ್‌ಗಳಾಗಿದ್ದರು. ಆದರೂ ಯಾಕೆ ಯಾರೂ ಕೂಡ ಭಗತ್‌ಸಿಂಗ್ ಅವರ ಪರವಾಗಿ ವಕಾಲತ್ತು ವಹಿಸಲಿಲ್ಲ ಎಂಬ ಪ್ರಶ್ನೆಯನ್ನು ಮುಂದಿಟ್ಟು ರಿಷಿ ಎಂಬುವವರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವರು ಟ್ವಿಟರ್ ಮತ್ತು ಫೇಸ್‌ಬುಕ್ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

Question of the Day :

Mohandas Karamchand Gandhi, Jawaharlal Nehru, and Mohd Ali Jinnah were top lawyers & barristers of their time, yet none represented #BhagatSingh legally.

Why ???

— N’Pal (@TheNPalSingh) September 28, 2022

ಗಾಂಧಿ, ನೆಹರು ಮತ್ತು ಜಿನ್ನಾ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪೋಸ್ಟ್‌ಅನ್ನು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ತಂಡ ಪರಿಶೀಲಿಸಿದ್ದು ಟ್ವೀಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು ಎಂದು ವರದಿ ಮಾಡಿದೆ. ಭಗತ್‌ ಸಿಂಗ್‌ರವರು ಎರಡು ನ್ಯಾಯಾಲಯದ ವಿಚಾರಣೆಗಳನ್ನು ಎದುರಿಸಿದ್ದಾರೆ. 1929 ರ ಸೆಂಟ್ರಲ್ ಅಸೆಂಬ್ಲಿ ಬಾಂಬ್ ಸ್ಫೋಟ ಪ್ರಕರಣ ಮತ್ತು 1928ರ ಲಾಹೋರ್ ಪಿತೂರಿ ಪ್ರಕರಣದಲ್ಲಿ ಅವರು ನ್ಯಾಯಾಲದ ವಿಚಾರಣೆಗೊಳಪಟ್ಟಿದ್ದರು. ಆದರೆ ತಮ್ಮ ಪರವಾಗಿ ಯಾವುದೇ ವಕೀಲರು ವಾದ ಮಾಡುವುದನ್ನು ಭಗತ್ ಸಿಂಗ್ ನಿರಾಕರಿಸಿದ್ದರು.

ಕೀವರ್ಡ್‌ ಬಳಸಿ ಗೂಗಲ್ ಸರ್ಚ್ ಮಾಡಿದಾಗ ಆಗಸ್ಟ್ 15, 2011 ರಂದು ಪ್ರಕಟವಾದ ದಿ ಹಿಂದೂ ಪತ್ರಿಕೆಯ ಲೇಖನ ಲಭ್ಯವಾಗಿದೆ.

Image Credit: The Hindu

ಭಗತ್ ಸಿಂಗ್ ಮತ್ತು ಸಂಗಡಿಗರಿಗೆ ಗಲ್ಲು ಶಿಕ್ಷೆ ವಿಧಿಸಲು ಕಾರಣವಾದ ಎರಡು ಪ್ರಕಣಗಳು:

ಬ್ರಿಟೀಷ್ ಧೋರಣೆಯ ವಿರುದ್ಧ ಇಡೀ ದೇಶ ಆಕ್ರೋಶ ಭರಿತವಾಗಿತ್ತು. ಭಗತ್ ಸಿಂಗ್ ಕೂಡ ಬ್ರಿಟೀಷರ ವರ್ತನೆಯಿಂದ ತೀವ್ರ  ಕ್ರೋಧಗೊಂಡಿದ್ದರು. ಬ್ರಿಟೀಷರು ಭಾರತೀಯರ ಮೇಲೆ ಇನ್ನು ಮುಂದೆ ಲಾಠಿ ಬೀಸಲು ಭಯಪಡಬೇಕು ಎನ್ನುವ ಉದ್ದೇಶದಿಂದ ಭಗತ್ ಸಿಂಗ್ ಅವರ ಹೆಚ್ ಎಸ್ ಆರ್ ಎ (ಹಿಂದೂಸ್ತಾನ್  ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್) ಸಂಘಟನೆ ಸೇಡಿನ ಕ್ರಮಕ್ಕೆ ಮುಂದಾಗಿತ್ತು. ಇದಕ್ಕಾಗಿ ಡಿಸೆಂಬರ್ 7ರಂದು ಭಗತ್ ಸಿಂಗ್, ರಾಜ್ ಗುರು, ಚಂದ್ರಶೇಖರ ಅಜಾದ್ ಮತ್ತು ಸುಖದೇವ್ ಅವರು  ಲಾಲಾ ಲಜಪತ್ ರಾಯ್ ಅವರ ಮೇಲೆ ಹಲ್ಲೆಗೆ ಪ್ರತೀಕಾರವಾಗಿ ಬ್ರಿಟೀಷ್ ಅಧಿಕಾರಿ ಜೆ.ಪಿ ಸ್ಕ್ಯಾಟ್ ಅವರ ತಲೆಗೆ ಗುಂಡು ಹಾರಿಸಿ ಕೊಂದು ಹಾಕಿದ್ದರು.

ಇದಾದ ಕೆಲವೇ ತಿಂಗಳ ಅಂತರದಲ್ಲಿ ಮತ್ತೆ ಭಗತ್ ಸಿಂಗ್ ಸಮೂಹ 1929ರಂದು ಏಪ್ರಿಲ್ 8ರಂದು ದೆಹಲಿಯ ಬ್ರಿಟೀಷರ ಕೇಂದ್ರೀಯ ಶಾಸಕಾಂಗ ಭವನದ ಮೇಲೆ ಬಾಂಬ್ ಎಸೆಯಲು  ನಿರ್ಧರಿಸಿದ್ದರು. ಲೇಬರ್ ಡಿಸ್ಪೂಟ್ ಬಿಲ್ ಸೇರಿ ಇತರ ಕಾಯ್ದೆಗಳನ್ನು ವಿರೋಧಿಸುವುದು ಅವರ ಉದ್ದೇಶವಾಗಿತ್ತು. ಆದರೆ ಬಾಂಬ್ ದಾಳಿಯಲ್ಲಿ ಯಾರಿಗೂ ತೊಂದರೆಯಾಗಬಾರದು ಕೇವಲ ಗಮನ ಸೆಳೆಯುವ ಉದ್ದೇಶದಿಂದ ಮಾತ್ರ ಈ ಕೃತ್ಯ ಎಸೆಯಲು ಭಗತ್ ಸಿಂಗ್, ಭಟುಕೇಶ್ವರ್  ಅವರು ನಿರ್ಧರಿಸಿದ್ದರು. ಅಲ್ಲದೆ ಬಾಂಬ್ ಎಸೆದ ಬಳಿಕ ಪರಾರಿಯಾಗದಿರಲು ನಿರ್ಧರಿಸಿದ್ದ ಇವರು ಬ್ರಿಟೀಷರಿಗೆ ಶರಣಾಗಿದ್ದರು.

ಇಬ್ಬರನ್ನೂ ಬಂಧಿಸಿದ್ದ ಬ್ರಿಟೀಷ್ ಅಧಿಕಾರಿಗಳು ಭಟುಕೇಶ್ವರ್ ಗೆ ಆಜೀವ ಜೈಲು ಶಿಕ್ಷೆ ವಿಧಿಸಿದ್ದರೆ, ಲಾಹೋರ್ ಪ್ರಕರಣ ಸಂಬಂಧ ಭಗತ್ ಸಿಂಗ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದ್ದರು. ಜೈಲಿಗೆ  ತೆರಳಿದ್ದ ಭಗತ್ ಸಿಂಗ್ ಜೈಲಿನಲ್ಲಿದ್ದ ಭಾರತೀಯ ಕೈದಿಗಳ ಸ್ಥಿತಿಯನ್ನು ಕಂಡು ಜೈಲಿನ ಸುಧಾರಣೆಗಾಗಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಅಧಿಕಾರಿಗಳು ಎಷ್ಟೇ ಪ್ರಯತ್ನಿಸಿದರೂ  ಸತ್ಯಾಗ್ರಹವನ್ನು ಭಗತ್ ಸಿಂಗ್ ಮತ್ತು ತಂಡ ಕೈಬಿಟ್ಟಿರಲಿಲ್ಲ. ಈ ನಡುವೆ ಜೈಲಿಗೆ ಆಗಮಿಸಿದ್ದ ಜವಾಹರ್ ಲಾಲ್ ನೆಹರೂ ಅವರೂ ಕೂಡ ಭಗತ್ ಸಿಂಗ್ ಅವರಿಗೆ ಉಪವಾಸವನ್ನು ಕೈಬಿಡಲು ಮನವಿ  ಮಾಡಿದ್ದರಾದರೂ, ಭಗತ್ ಸಿಂಗ್ ಮಾತ್ರ ಯಾರ ಮನವಿಯನ್ನೂ ಪುರಸ್ಕರಿಸರಲಿಲ್ಲ. 2018 ಮೇ 10, ರಂದು ಪ್ರಕಟವಾದ THE PRINT  ವರದಿಯಲ್ಲಿ ಈ ಕುರಿತು ಉಲ್ಲೇಖ ಮಾಡಲಾಗಿದೆ. ಅದನ್ನು ಇಲ್ಲಿ ಓದಿರಿ.Image Credit: The Trial of Bhagat Singh: Politics of Justice

ಪ್ರಕರಣದ ವಿಚಾರಣೆಯು ಮೇ 7, 1929 ರಂದು ಜಿಲ್ಲಾ ಕಾರಾಗೃಹದಲ್ಲಿ ಪ್ರಾರಂಭವಾಯಿತು, ಅಲ್ಲಿ ಅಸಫ್ ಅಲಿ ಅವರು ಪ್ರತಿವಾದಕ್ಕೆ ಹಾಜರಾಗಿದ್ದರು, ರಾಯ್ ಬಹದ್ದೂರ್ ಸೂರಜ್ ನರೇನ್ ಪ್ರಾಸಿಕ್ಯೂಷನ್ ಪರವಾಗಿ ಕಾಣಿಸಿಕೊಂಡರು. ಇಲ್ಲಿ ಎಲ್ಲವೂ ಚೆನ್ನಾಗಿದೆ ಮತ್ತು ನನ್ನ ಪರವಾಗಿ ವಕಾಲತ್ತು ವಹಿಸಲು “ವಕೀಲರನ್ನು ನೇಮಿಸುವ ಅಗತ್ಯವಿಲ್ಲ” ಎಂದು ತನ್ನ ಕುಟುಂಬದ ಸದಸ್ಯರಿಗೆ ಭಗತ್ ತಿಳಿಸಿದ್ದರು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

Image Credit: The print
ಈ ವಿಚಾರವನ್ನು ಸ್ವತಃ ನೆಹರೂ ಅವರು ತಮ್ಮ ಜೀವನ ಚರಿತ್ರೆಯಲ್ಲಿ ಬರೆದುಕೊಂಡಿದ್ದರು. ಕೊನೆಗೆ ಸ್ವತಃ ಭಗತ್ ಸಿಂಗ್ ಅವರ ತಂದೆ ಕಾಂಗ್ರೆಸ್ ಪಕ್ಷ ನಿರ್ಣಯದೊಂದಿಗೆ ಜೈಲಿಗೆ ಆಗಮಿಸಿ,  ಮನವಿ ಮಾಡಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರ ತಿಳಿದಿದ್ದ ಭಗತ್ ಸಿಂಗ್ ಉಪವಾಸ ಸತ್ಯಗ್ರಹವನ್ನು ಕೈಬಿಟ್ಟಿದ್ದರು. ಮತ್ತೊಂದೆಡೆ ಬ್ರಿಟೀಷ್ ಸರ್ಕಾರ ಭಗತ್ ಸಿಂಗ್  ಅವರನ್ನು ಗಲ್ಲಿಗೇರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿತ್ತು. ಈ ವಿಚಾರ ತಿಳಿದಿದ್ದ ಗಾಂಧಿ ಭಗತ್ ಸಿಂಗ್ ಮತ್ತವರ ಸಂಗಡಿಗರ ಗಲ್ಲು ಶಿಕ್ಷೆಯನ್ನು ತಡೆಯವ ಪ್ರಯತ್ನ ಮಾಡಿದರು. ಹಿರಿಯ  ಬ್ರಿಟೀಷ್ ಅಧಿಕಾರಿ ಇರ್ವಿನ್ ರನ್ನು ಮಾರ್ಚ್ 19ರಂದು ಭೇಟಿ ಮಾಡಿದ್ದ ಚರ್ಚಿಸಿದ್ದ ಗಾಂಧಿ ಭಗತ್ ಸಿಂಗ್ ಅವರ ಗಲ್ಲು ಶಿಕ್ಷೆಯನ್ನು ಕೈಬಿಡುವಂತೆ ಮನವಿ ಮಾಡಿದ್ದರು.

Image Credit: The Print

ಗಾಂಧೀಜಿ, ನೆಹರೂ ಹಾಗೂ ಜಿನ್ನಾ ಅವರು ಭಗತ್‌ಸಿಂಗ್ ನೆರವಿಗೆ ಬರಲಿಲ್ಲ ಎಂಬುದು ಸರಿಯಾದ ಮಾಹಿತಿ ಅಲ್ಲ ಎಂದು ‘ಲಾಜಿಕಲ್ ಇಂಡಿಯನ್’ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. 1928ರ ಲಾಹೋರ್ ಸಂಚು ಹಾಗೂ 1929ರ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಭಗತ್‌ಸಿಂಗ್ ಆರೋಪಿಯಾಗಿದ್ದರು. ತಮ್ಮ ಪರ ವಾದ ಮಾಡಲು ವಕೀಲರು ಬೇಡ, ನಾನೇ ವಾದ ಮಾಡುತ್ತೇನೆ. ಅದಕ್ಕೆ ಕಾನೂನು ಸಲಹೆಗಾರರು ಸಾಕು ಎಂದು ಸ್ವತಃ ಭಗತ್‌ಸಿಂಗ್ ತಮ್ಮ ಕುಟುಂಬದವರಿಗೆ ತಿಳಿಸಿದ್ದರು ಎಂಬ ಅಂಶವು ಕಾನೂನು ತಜ್ಞ ಎ.ಜೆ.ನೂರಾನಿ ಅವರ ಪುಸ್ತಕದಲ್ಲಿ ಉಲ್ಲೇಖವಾಗಿದೆ. ಭಗತ್‌ಸಿಂಗ್ ಅವರನ್ನು ನೆಹರೂ ಅವರು ಜೈಲಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. 1931ರ ಮಾರ್ಚ್ 19ರಂದು ವೈಸ್‌ರಾಯ್ ಲಾರ್ಡ್ ಇರ್ವಿನ್ ಅವರನ್ನು ಭೇಟಿ ಮಾಡಿದ್ದ ಗಾಂಧೀಜಿ, ಕ್ಷಮಾದಾನ ನೀಡುವಂತೆ ಮನವಿ ಮಾಡಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಗಾಂಧಿ, ನೆಹರು ಮತ್ತು ಜಿನ್ನಾ ಅವರು ಭಗತ್ ಸಿಂಗ್ ಅವರ ಕಾರ್ಯಗಳನ್ನು ಬೆಂಬಲಿಸದಿದ್ದರೂ ಅವರ ಬಗ್ಗೆ  ಸಹಾನುಭೂತಿ ಹೊಂದಿದ್ದರು ಮತ್ತು ಸಿಂಗ್ ಅವರಿಗೆ ಕ್ಷಮಾದಾನ ನೀಡಬೇಕೆಂದು ಮನವಿ ಮಾಡಿದ್ದರು. ಆದರೆ ಗಾಂಧಿ ಅವರ ಮನವಿಯ ನಡುವೆಯೂ ಬ್ರಿಟೀಷ್ ಸರ್ಕಾರ 1931ರ ಮಾರ್ಚ್ 23ರಂದು ಭಗತ್ ಸಿಂಗ್ ಮತ್ತು ಅವರ ಸಂಗಡಿಗರನ್ನು ಗಲ್ಲಿಗೇರಿಸಿತ್ತು. ಹೀಗಾಗಿ ಗಾಂಧಿ ಅವರ ಪ್ರಯತ್ನ  ಫಲಿಸದೇ ಹೋಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೃಪೆ : ದಿ ಲಾಜಿಕಲ್ ಇಂಡಿಯಾ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಹಸು ಮತ್ತು ಚಿರತೆಯ ಮುದ್ದಾಟದ ಪೋಟೋ ವೈರಲ್ ! ಈ ಘಟನೆ ನಡೆದಿದ್ದೆಲ್ಲಿ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights