ಫ್ಯಾಕ್ಟ್‌ಚೆಕ್: 62 ವರ್ಷದ ತಂದೆ ತನ್ನ ಸ್ವಂತ ಮಗಳನ್ನೆ ಮದುವೆಯಾಗಿದ್ದು ನಿಜವೇ? ಈ ಸ್ಟೋರಿ ಓದಿ

62 ವರ್ಷದ ಪಂಡಿತ್ ತನ್ನ ಸ್ವಂತ ಮಗಳನ್ನು ಮದುವೆಯಾಗಿದ್ದಾನಂತೆ, ತಮ್ಮ ಮಗಳನ್ನು ಮದುವೆಯಾದ ಬ್ರಹ್ಮ ದೇವರ ಉದಾಹರಣೆ ನೀಡಿ ಸಮರ್ಥಿಸಿಕೊಂಡಿದ್ದಾನಂತೆ, ಇದಕ್ಕೆ ಏನ್ ಹೇಳ್ತೀರಾ ಭಕ್ತರೇ ? ಎಂಬ ಹೇಳಿಕೆಯೊಂದಿ ವೃದ್ದರೊಬ್ಬರು ಯುವತಿಯನ್ನು ಮದುವೆಯಾಗುತ್ತಿರುವ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಮುದುಕನೊಬ್ಬ ಚಿಕ್ಕ ಹುಡುಗಿಯನ್ನು ಮದುವೆಯಾಗುತ್ತಿರುವ ದೃಶ್ಯಗಳು ಎಂದು ಹೇಳಿಕೊಂಡು ಟ್ವಿಟರ್‌ನಲ್ಲಿ ಇದೇ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಈ ವೈರಲ್ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ತಿಳಿಸಿ ಎಂದು ನಮ್ಮ ಏನ್‌ಸುದ್ದಿ.ಕಾಂನ ಓದುಗರು ಸಂದೇಶಗಳ ಮೂಲಕ ವಿನಂತಿಸಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಅದೇ ರೀತಿಯ ವಿಡಿಯೋವೊಂದು ಕರಣ್ ಕೊಟ್ನಾಲಾ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಿರುವುದು ಕಂಡುಬಂದಿದೆ. ಈ ಯೂಟ್ಯೂಬ್ ಚಾನೆಲ್‌ನಲ್ಲಿ 8:13 ನಿಮಿಷಗಳ ವಿಸ್ತೃತ ಆವೃತ್ತಿಯ ವೀಡಿಯೊವನ್ನು ಪ್ರಕಟಿಸಿದ್ದು, ಇದನ್ನು 62 ವರ್ಷದ ವ್ಯಕ್ತಿಯೊಬ್ಬ 17 ವರ್ಷದ ಹುಡುಗಿಯನ್ನು ಮದುವೆಯಾಗುತ್ತಿರುವ ದೃಶ್ಯಗಳು ಎಂದು ವಿವರಿಸಲಾಗಿದೆ.

ವೀಡಿಯೊದ 0:38 ನಿಮಿಷಗಳಲ್ಲಿ, ಮನರಂಜನಾ ಉದ್ದೇಶಗಳಿಗಾಗಿ ರಚಿಸಲಾದ ಸ್ಕ್ರಿಪ್ಟ್ ಮಾಡಿದ ವೀಡಿಯೊ ಎಂದು ಡಿಸ್‌ಕ್ಲೈಮ್ ಮಾಡಿರುವುದನ್ನು ನೋಡಬಹುದು. ಕರಣ್ ಕೊಟ್ನಾಳ ಅವರು ತಮ್ಮ ಸೋಶಿಯಲ್ ಮೀಡಿಯಾ ಪ್ರೊಫೈಲ್‌ನಲ್ಲಿ ತಮ್ಮನ್ನು ಫ್ರಾಂಕ್‌ಸ್ಟರ್ ಮತ್ತು ವೀಡಿಯೊ ಕ್ರಿಯೇಟರ್ ಎಂದು ಬರೆದುಕೊಂಡಿದ್ದಾರೆ. ಕರಣ್ ಕೊಟ್ನಾಳ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಹಲವಾರು ಸ್ಕ್ರಿಪ್ಟೆಡ್‌ ಮತ್ತು ಫನ್ನಿ ವೀಡಿಯೊಗಳನ್ನು ಪ್ರಕಟಿಸಲಾಗಿದೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಈ ಎಲ್ಲಾ ಪುರಾವೆಗಳಿಂದ, ವೀಡಿಯೊವನ್ನು ಸ್ಕ್ರಿಪ್ಟ್ ಮಾಡಲಾಗಿದೆ ಮತ್ತು ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಘಟನೆ ನೈಜ ಘಟನೆ ಅಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು.

https://www.youtube.com/watch?v=e_8GuZF-fm0&t=38s

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವಯೋವೃದ್ದನೊಂದಿಗೆ ಹುಡುಗಿಯೊಬ್ಬಳು ಮದುವೆಯಾಗುತ್ತಿರುವ ದೃಶ್ಯಗಳು ನಾಟಕೀಯ ದೃಶ್ಯಗಳಾಗಿದ್ದು ವಿಡಿಯೋದಲ್ಲಿ ಇದನ್ನು ಮನರಂಜನಾ ಉದ್ದೇಶಗಳಿಗಾಗಿ ರಚಿಸಲಾಗಿದ್ದು, ವಿಡಿಯೋದಿಂದ  ವ್ಯಕ್ತಿ ಅಥವಾ ಘಟನೆಯನ್ನು ಸ್ಪೂರ್ತಿಪಡೆದಿದ್ದರೆ ಅದು ಕಾಕತಾಳೀಯ ಎಂದು ಡಿಸ್‌ಕ್ಲೈಮ್ ನಲ್ಲಿ ತಿಳಿಸಲಾಗಿದೆ.

ಇದೇ ರೀತಿಯ ವಿಡಿಯೊವನ್ನು ಕಳೆದ ವಾರ 52 ವರ್ಷದ ಮಹಿಳೆಯನ್ನು 21 ವರ್ಷದ ಹುಡುಗ ಮದುವೆಯಾದ ಅಪರೂಪದ ಅಮರ ಪ್ರೇಮ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿತ್ತು. ಇದನ್ನೆ ಪರಿಶೀಲಿಸದ ಹಲವು ಮುಖ್ಯವಾಹಿನಿ ಮಾಧ್ಯಮಗಳು ವೈರಲ್ ವಿಡಿಯೊವನ್ನು ನಂಬಿ ನಿಜ ಘಟನೆ ಎಂಬಂತೆ ವರದಿ ಮಾಡಿದ್ದವು. ಆದರೆ ಇದನ್ನು ಸ್ಕ್ರಿಪ್ಟ್‌ ಮಾಡಿದ ವಿಡಿಯೋ ಎಂದು ಏನ್‌ಸುದ್ದಿ.ಕಾಂ ಫ್ಯಾಕ್ಟ್‌ಚೆಕ್ ಸ್ಟೋರಿಯನ್ನು ಪ್ರಕಟಿಸಿತ್ತು.

ಒಟ್ಟಾರೆಯಾಗಿ ಹೇಳುವುದಾರೆ, ಸಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ 62 ವರ್ಷದ ಪಂಡಿತ್ ತನ್ನ ಸ್ವಂತ ಮಗಳನ್ನೆ ಮದುವೆಯಾಗಿದ್ದಾರೆ ಎಂದು ಪ್ರತಿಪಾದಿಸಿ ಹಂಚಿಕೆ ಮಾಡಲಾಗಿರುವ ವಿಡಿಯೋ ಸ್ಕ್ರಿಪ್ಟೆಡ್ ಮಾಡಲಾದ ವಿಡಿಯೋ ಎಂದು ಫ್ಯಾಕ್ಟ್‌ಚೆಕ್ ಮೂಲಕ ತಿಳಿದು ಬಂದಿದೆ. ಸ್ಕ್ರಿಪ್ಟೆಡ್ ಮಾಡಲಾದ ವಿಡಿಯೋವನ್ನು ಸುಳ್ಳು ಪ್ರತಿಪಾದನೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹುಡುಗಿಯನ್ನು ಅಮಾನುಷವಾಗಿ ಥಳಿಸುತ್ತಿರುವ ವಿಡಿಯೋ ವೈರಲ್! ಇದೂ ಲವ್ ಜಿಹಾದಾ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights