ಫ್ಯಾಕ್ಟ್‌ಚೆಕ್ : ಹಮಾಸ್ ಗುಂಪು ಮಕ್ಕಳನ್ನು ಬೋನಿನಲ್ಲಿ ಕೂಡಿ ಹಾಕಿ ಒತ್ತೆಯಾಳುಗಳಾಗಿ ಇಟ್ಟುಕೊಂಡದ್ದು ನಿಜವೇ?

ಇಸ್ರೇಲ್ ಮತ್ತು ಪ್ಯಾಲಸ್ತೇನ್ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಅಪಾರ ಪ್ರಮಾಣದ ಸಾವು ನೋವುಗಳು ವರದಿಯಾಗುತ್ತಿರುವ ಬೆನ್ನಲ್ಲೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು ಪುಟ್ಟ ಪುಟ್ಟ ಮಕ್ಕಳನ್ನು ಒಂದು ಕೇಜ್‌ನಲ್ಲಿ ಕೂಡಿಹಾಕಿರುವ ವಿಡಿಯೋವೊಂದು ಪ್ರಸಾರವಾಗುತ್ತಿದೆ.

ಪ್ಯಾಲೇಸ್ತೀನ್‌ನಲ್ಲಿ ಹಮಾಸ್‌ನವರು ಪುಟ್ಟ ಮಕ್ಕಳನ್ನು ಒತ್ತೆಯಾಳುಗಳಾಗಿ ಇರಿಸಿ ಪಂಜರದಲ್ಲಿ ಕೂಡಿಹಾಕಿದ್ದಾರೆ ಎಂಬ ಫೋಟೊ ಮತ್ತು ವಿಡಿಯೋಗಳು ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋ ಪೋಸ್ಟ್‌ಅನ್ನು ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸಾಪ್‌ಗಳಲ್ಲಿ ಹಂಚಿಕೊಳ್ಳಲಾಗಿದೆ.

ಹಾಗಿದ್ದರೆ ನಿಜವಾಗಿಯೂ ಹಮಾಸ್‌ ಗುಂಪು ಪುಟ್ಟ ಮಕ್ಕಳನ್ನು ಒತ್ತೆಯಾಳುಗಳಾಗಿ ಇರಿಸಿ ಪಂಜರದಲ್ಲಿ ಕೂಡಿಹಾಕಿರುವುದು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಟೊ ಮತ್ತು ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸಲು ಗೂಗಲ್ ರವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಪ್ಯಾಲೆಸ್ಟೈನ್ ನ್ಯೂಸ್ ಹೆಸರಿನ ಯೂಟ್ಯೂಬ್ ಚಾನೆಲ್‌ನಿಂದ ಜನವರಿ 2020ರಲ್ಲಿಯೇ ಈ ವಿಡಿಯೋ ಅಪ್ಲೋಡ್ ಆಗಿದ್ದು, ಆನಂತರ ಡಿಲೀಟ್ ಮಾಡಲಾಗಿದೆ.

ವಿಡಿಯೋ ಚಿತ್ರೀಕರಿಸುತ್ತಿರುವ ವ್ಯಕ್ತಿ ನಗುತ್ತಿರುವುದನ್ನು ಕೇಳಬಹುದು. “ಇದು ಹಳೆಯ ವಿಡಿಯೋ, ತನ್ನ ಮಕ್ಕಳು ಕೋಳಿ ಪಂಜರದಲ್ಲಿ ಆಟವಾಡುತ್ತಿರುವುದನ್ನು ಕಂಡ ತಂದೆ ತಮಾಷೆಗೆಂದು ಲಾಕ್ ಮಾಡಿ ವಿಡಿಯೋ ಮಾಡಿದ್ದಾರೆ” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ಇತ್ತೀಚಿನ ಇಸ್ರೇಲ್ – ಪ್ಯಾಲೇಸ್ತೀನ್ ವಿವಾದಕ್ಕೂ ಮೊದಲೇ ಅಪ್ಲೋಡ್ ಆಗಿದೆ. ಹಾಗಾಗಿ ಪ್ಯಾಲೇಸ್ತೀನ್‌ನಲ್ಲಿ ಮಕ್ಕಳನ್ನು ಪಂಜರದಲ್ಲಿ ಕೂಡಿ ಹಾಕಿ ಒತ್ತೆಯಾಳಾಗಿ ಇಟ್ಟಿದ್ದಾರೆ ಎಂಬುದು ಸುಳ್ಳು.

ಹಮಾಸ್ ಗುಂಪು ಮಕ್ಕಳನ್ನು ಅಪಹರಿಸಿ ಒತ್ತೆಯಾಳುಗಳಾಗಿ ಇಟ್ಟು ಕೊಲ್ಲುವುದಾಗಿ ಬೆದರಿಕೆ ಹಾಕಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಇಸ್ರೇಲ್ ಪ್ರಧಾನಿಯವರ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಹಮಾಸ್ ಗುಂಪು ಹತ್ಯೆಗೈದು ಸುಟ್ಟು ಹಾಕಿರುವ ಶಿಶುಗಳನ್ನು ತೋರಿಸುವ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

ಇಸ್ರೇಲ್ ರಕ್ಷಣಾ ಪಡೆಗಳು ಕ್ಫರ್ ಅಜಾದ ವಸಾಹತು ಪ್ರದೇಶದಲ್ಲಿ ಛಿದ್ರಗೊಂಡ ಮಕ್ಕಳ ದೇಹಗಳು ಪತ್ತೆಯಾಗಿವೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಡೆಯುತ್ತಿರುವ ಘರ್ಷಣೆಗೆ ಕಾರಣ ಎಂದು ವೈರಲ್ ವಿಡಿಯೋ ಶೇರ್ ಮಾಡಲಾಗುತ್ತಿದೆ. ಆದರೆ ವಾಸ್ತವವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೊವು ಇತ್ತೀಚಿನ ಸಂಘರ್ಷಕ್ಕೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಇಸ್ರೇಲ್ ಮತ್ತು ಹಮಾಸ್ ಗುಂಪಿನ ನಡುವೆ ನಡೆಯುತ್ತಿರುವ ತೀರ್ವತರವಾದ ಸಂಘರ್ಷದ ಸಂದರ್ಭದಲ್ಲಿ ಸಂಬಂಧವಿಲ್ಲ ಮಕ್ಕಳ ಹಳೆಯ ವಿಡಿಯೋ ಮತ್ತು AI ಮೂಲಕ ರಚಿಸಲಾದ ಚಿತ್ರಗಳನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ವ್ಯಕ್ತಿಯೊಬ್ಬ ಬಾಲಕನಿಗೆ ಅಮಾನವೀಯವಾಗಿ ಥಳಿಸುತ್ತಿರುವ ಘಟನೆ ಎಲ್ಲಿಯದು ಗೊತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights