ಫ್ಯಾಕ್ಟ್‌ಚೆಕ್ : ಹಮಾಸ್ ಗುಂಪು ನಡೆಸಿದ ದಾಳಿಯಲ್ಲಿ ಇಸ್ರೇಲ್‌ನ ಈ ದಂಪತಿಗಳು ಸಾಪನಪ್ಪಿಲ್ಲ

ಇಸ್ರೇಲ್‌ನಲ್ಲಿ ನಡೆಯುತ್ತಿದ್ದ ನೋವಾ ಟ್ರಾನ್ಸ್ ಮ್ಯೂಸಿಕ್ ಫೆಸ್ಟಿವಲ್ ಸಂದರ್ಭದಲ್ಲಿ ಹಮಾಸ್ ಸಶಸ್ತ್ರ ಪಡೆ ದಾಳಿ ನಡೆಸಿದ್ದು ಹಲವು ಇಸ್ರೇಲಿಗಳು ಸಾವಿಗೀಡಾಗಿದ್ದಾರೆ. ಈ ವೇಳೆ ಕೊನೆಯುಸಿರೆಳೆಯುತ್ತಿದ್ದ ದಂಪತಿಗಳಿಬ್ಬರ ಕೊನೆಯ ಕ್ಷಣಗಳನ್ನು ಸೆರೆ ಹಿಡಿಯಲಾದ ಚಿತ್ರ ಎಂಬ ಹೇಳಿಕೆಯೊಂದಿಗೆ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

1 ವ್ಯಕ್ತಿ ನ ಚಿತ್ರವಾಗಿರಬಹುದು

ಟ್ರೈಬ್ ಆಫ್ ನೋವಾ ಮ್ಯೂಸಿಕ್ ಫೆಸ್ಟಿವಲ್‌ನಲ್ಲಿ ಹಮಾಸ್ ಉಗ್ರರ ದಾಳಿಯ ನಂತರ ನೂರಾರು ಇಸ್ರೇಲಿ ನಾಗರಿಕರು ಸಾವನ್ನಪ್ಪಿದ್ದಾರೆ, ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಫೋಟೊವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 10 ಅಕ್ಟೋಬರ್ 2023 ರಂದು ಮಿರರ್ ಸುದ್ದಿ ಸೈಟ್ ಪ್ರಕಟಿಸಿದ ಲೇಖನದಲ್ಲಿ ಅದೇ ಫೋಟೋ ಕಂಡುಬಂದಿದೆ. ಹಮಾಸ್ ಗುಂಪು ನಡೆಸಿದ ದಾಳಿಯಲ್ಲಿ ಬದುಕುಳಿದ ಅಮಿತ್ ಬಾರ್ ಮತ್ತು ನಿರ್ ದಂಪತಿ ಎಂದು ವರದಿ ಮಾಡಲಾಗಿದೆ.

ಟ್ರೈಬ್ ಆಫ್ ನೋವಾ ಸಂಗೀತ ಉತ್ಸವದಲ್ಲಿ ನಡೆದ ಹಮಾಸ್ ದಾಳಿಯ ಸಂದರ್ಭದಲ್ಲಿ ಅಮಿತ್ ಬಾರ್ ಮತ್ತು ನಿರ್ ದಂಪತಿ, ದಾಳಿಯಿಂದ ತಪ್ಪಿಸಿಕೊಳ್ಳಲು ಇಬ್ಬರು ಪೊದೆಗಳಲ್ಲಿ ಅಡಗಿಕೊಂಡಿದ್ದರು. 09 ಅಕ್ಟೋಬರ್ 2023 ರಂದು ನೋವಾ ಸಂಗೀತ ಉತ್ಸವದಲ್ಲಿ ಹಮಾಸ್ ಸಶಸ್ತ್ರ ಪಡೆ ನಡೆಸಿದ ದಾಳಿಯಲ್ಲಿ ಈ ದಂಪತಿಗಳು ಬದುಕುಳಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

View this post on Instagram

 

A post shared by Amit Bar (@amit_bar_)

ಗಾಜಾ ಮತ್ತು ದಕ್ಷಿಣ ಇಸ್ರೇಲ್ ನಡುವಿನ ಗಡಿಯ ಸಮೀಪ ಮರುಭೂಮಿ ಪ್ರದೇಶದಲ್ಲಿ ನಡೆದ ನೋವಾ ಸಂಗೀತ ಉತ್ಸವದ ಮೇಲೆ ಹಮಾಸ್‌ ಗುಂಪು ನಡೆಸಿದ ದಾಳಿಯ ಭಯಾನಕ ಅನುಭವವನ್ನು ವಿವರಿಸಿ ತಮ್ಮ ಇನ್‌ಸ್ಟಾದಲ್ಲಿ ಫೋಟೊವನ್ನು ಹಂಚಿಕೊಂಡಿದ್ದಾರೆ. ದಾಳಿ ನಡೆದ ಸ್ಥಳದಲ್ಲಿ ನಾವೂ ಇದ್ದೆವು, ಈ ದಾಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಗಿಡದ ಪೊದೆಯೊಂದರಲ್ಲಿ ಬಚ್ಚಿಟ್ಟುಕೊಂಡೆವು, ಈ ಸನ್ನಿವೇಶದಿಂದ ನಾವು ಬದುಕಿ ಬರುತ್ತೇವೆ ಎಂಬ ನಂಬಿಕೆಯೇ ಇರಲಿಲ್ಲ. ನಮ್ಮ ಕಣ್ಣ ಮುಂದೆಯೇ ಕೆಲವರು ಪ್ರಾಣ ಬಿಟ್ಟರು, ನಮಗೂ ಇದೇ ಕೊನೆಯ ಕ್ಷಣಗಳು ಎಂದು ಅಂದಾಜಿಸಿದೆವು, ಹಾಗಾಗಿ ಕೊನೆಯ ಕ್ಷಣದ ಪೋಟೊವನ್ನು ತೆಗೆದುಕೊಳ್ಳಲು ನಿರ್ಧರಿಸಿ ಸೆಲ್ಫಿ ತೆಗೆದುಕೊಂಡೆವು. ಎಂದು ತಾವು ಬದುಕಿ ಬಂದ ರೋಚಕ ಸನ್ನಿವೇಶವನ್ನು ಹಂಚಿಕೊಂಡಿದ್ದಾರೆ.

ನನ್ನ ಗೆಳೆಯ ಝಿವ್ ಸುರಕ್ಷಿತವಾಗಿ ಹಿಂದಿರುಗಲಿ ಮತ್ತು ಕಾಣೆಯಾದ ಎಲ್ಲ ಸ್ನೇಹಿತರು ಸುರಕ್ಷಿವಾಗಿರಲಿ ಎಂದು ಪ್ರಾರ್ಥಿಸುವುದು ಬಟ್ಟು ಬೇರೇನು ಉಳಿದಿಲ್ಲ” ಎಂದು ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಹಮಾಸ್ ಗುಂಪು ನಡೆಸಿದ ದಾಳಿಯ ಸಂದರ್ಭದಲ್ಲಿ ದಂಪತಿಗಳಿಬ್ಬರು ತಾವು ಸಾಯುವ ಕೆನೆಯ ಕ್ಷಣದಲ್ಲಿ ಸೆರೆ ಹಿಡಿಯಲಾದ ಚಿತ್ರ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ. ವಾಸ್ತವವಾಗಿ ಈ ಇಬ್ಬರು ಬದುಕಿದ್ದಾರೆ ಮತ್ತು ಇದು ತಾವು ಪೊದೆಯೊಳಗೆ ಅಡಗಿಕೊಂಡಿದ್ದಾಗ ತೆಗೆದುಕೊಂಡ ಸೆಲ್ಫಿ ಎಂದು ತಮ್ಮ ಇನ್ಸ್ಟಾ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಪ್ಲಾಸ್ಟಿಕ್‌ ಅಕ್ಕಿ ಆಯ್ತು ಈಗ ಪ್ಲಾಸ್ಟಿಕ್‌ ಗೋಧಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights