ಫ್ಯಾಕ್ಟ್‌ಚೆಕ್ : ಮುಸ್ಲಿಂ ಮಹಿಳೆಯರು ಪುರುಷರಿಗೆ ಮುಖ ತೋರಿಸುವಂತಿಲ್ಲ ಎಂಬ ಹಳೆಯ ಸ್ಕ್ರಿಪ್ಟೆಡ್ ವಿಡಿಯೋ ವೈರಲ್

ಸಂದರ್ಶನವೊಂದರಲ್ಲಿ ಹಿಜಾಬ್ ಧರಿಸಿದ ಮಹಿಳೆಯೊಬ್ಬರು ಮುಸ್ಲಿಂ ಧರ್ಮದಲ್ಲಿ ಹಿಜಾಬ್ ಧರಿಸಬೇಕೆಂಬ ನಿಯಮವಿದ್ದು, ಕಣ್ಣುಗಳನ್ನು ಮಾತ್ರವೇ ತೋರಿಬೇಕು, ಮುಖವನ್ನು ತೋರಿಸುವಂತಿಲ್ಲ ಮುಖ್ಯವಾಗಿ ನಾವು ಹುಡುಗರಿಗೆ ಮುಖವನ್ನು ತೋರಿಸುವಂತಿಲ್ಲ ಹಾಗಾಗಿ ನಾವು ಹಿಜಾಬ್ ಧರಿಸುತ್ತೇವೆ ಎಂದು ಹೇಳುತ್ತಾರೆ.

ನಿರೂಪಕ ಮುಂದುವರೆದು ನೀವು ಹುಡುಗಿಯರ ಕಾಲೇಜಿನಲ್ಲಿ ಓದುತ್ತಿದ್ದೀರಲ್ಲಾ ಎಂದು ಪ್ರಶ್ನಿಸಿದಾಗ, ನಾವು ಓದುತ್ತಿರುವ ಕಾಲೇಜಿನಲ್ಲಿ ಪಾಠ ಮಾಡುವವರು ಗಂಡಸರು ಹಾಗಾಗಿ ಅವರು ನಮ್ಮ ಮುಖ ನೋಡಬಾರದು ಎಂದು ಹಿಜಾಬ್ ಧರಿಸುತ್ತೇವೆ. ಒಂದು ವೇಳೆ ನೀವು ಹಲ್ಲು ನೋವು ಎಂದು ವೈದ್ಯರ ಬಳಿ ಹೋಗಬೇಕಾಗಿ ಬಂದು, ಪುರುಷ ವೈದ್ಯ ಇದ್ದರೆ ಏನು ಮಾಡುತ್ತೀರಿ ಎಂದು ಸಂದರ್ಶಕ ಕೇಳುತ್ತಾನೆ, ಆಗಲೂ ನಾನು ಹಿಜಾಬ್ ಧರಿಸುತ್ತೇನೆ ಎಂದು ಉತ್ತರಿಸುವ ಮಹಿಳೆ, ಒಂದು ವೇಳೆ ನಾನು ಹಿಜಾಬ್ ತೆಗೆಯಬೇಕಾದ ಸಂದರ್ಭ ಎದುರಾದರೆ, ವೈದ್ಯರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚಿಕಿತ್ಸೆ ನೀಡಬೇಕು ಎಂದು ಮಹಿಳೆ ಹೇಳುತ್ತಾಳೆ.

‘ಸಂದರ್ಶನ’ದ ಈ ನಿರ್ದಿಷ್ಟ ಮಾತುಕತೆಯನ್ನು ಹೈಲೈಟ್ ಮಾಡುವ ಕ್ಲಿಪ್ ಅನ್ನು ಹಲವಾರು ಬಲಪಂಥೀಯ ಪ್ರತಿಪಾದಕ ಸಾಮಾಜಿಕ ಮಾಧ್ಯಮಗಳ ಬಳಕೆದಾದರು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ಅನ್ನು ಪರಿಸೀಲಿಸಿದಾಗ, ವೈರಲ್ ವಿಡಿಯೋವನ್ನು ಟಿವಿ ವಿಕ್ರಮ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ಮೂಲ ವಿಡಿಯೋದಿಂದ ತೆಗೆದುಕೊಳ್ಳಲಾಗಿದೆ.  ಫೆಬ್ರವರಿ 18, 2022 ರಂದು ಟಿವಿ ವಿಕ್ರಮ ಚಾನೆಲ್‌ನಲ್ಲಿ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ವೈರಲ್ ವಿಡಿಯೋ ದೀರ್ಘ ಆವೃತ್ತಿಯು ಲಭ್ಯವಾಗಿದೆ.

ಟಿವಿ ವಿಕ್ರಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ಈ ವಿಡಿಯೋದಲ್ಲಿ ” ಈ ವಿಡಿಯೋವೊಂದು ಕಾಲ್ಪನಿಕ ಸಂದರ್ಶನವಾಗಿದ್ದು, ಶಿಕ್ಷಣ ಪಡೆಯುತ್ತಿರುವ ಮಕ್ಕಳು, ಧರ್ಮವೇ ದೊಡ್ಡದು ಎಂದು ಭಾವಿಸಿ ತಮ್ಮ ಭವಿಷ್ಯವನ್ನು ಹಾಳು ಮಾಡುಕೊಳ್ಳುವತ್ತ ಹೊರಳತ್ತಿರುವ ವಿದ್ಯಾರ್ಥಿಗಳಿಗಾಗಿ ನೀಡುತ್ತಿರುವ ಸಂದೇಶ ಎಂದು ಕ್ಲೈಮ್ ಮಾಡಲಾಗಿದೆ.

ವಾಸ್ತವವಾಗಿ ಈ ಸಂದರ್ಶನ ಸ್ಕ್ರಿಪ್ಟ್ ಮಾಡಲಾದ ಸಂದರ್ಶನವಾಗಿದ್ದು, 2022ರಲ್ಲಿ ಉಡುಪಿಯ ಕಾಲೇಜುವೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲಜಿಗೆ ಬಂದರೆ ನಾವೂ ಕೂಡ ಕೇಸರಿ ಶಾಲು ಧರಿಸಿ ಬರತ್ತೇವೆ ಎಂದು ಕೆಲವು ಹಿಂದೂ ಸಮುದಾಯದ ವಿದ್ಯಾರ್ಥಿಗಳು ತಕರಾರು ತೆಗೆಯಲು ಶುರು ಮಾಡಿದಾಗ ಸಮಸ್ಯೆ ಉಲ್ಬಣಗೊಂಡು ರಾಜ್ಯಾದ್ಯಂತ ಪರ ವಿರೋಧದ ಪ್ರತಿಭಟನೆಗಳಿಗೆ ಸಾಕ್ಷಿಯಾಗಿತ್ತು.

ಮಹೇಶ್ ವಿಕ್ರಮ್ ಹೆಗ್ಡೆ ಎಂಬ ಸಂಪಾದಕ ಟಿವಿ ವಿಕ್ರಮ ಯೂಟ್ಯೂಬ್ ಚಾನೆಲ್‌ನಲ್ಲಿ ನೋಡಿಕೊಳ್ಳುತ್ತಿದ್ದು, ಮುಸ್ಲಿಂ ವಿರೋಧಿ ಮತ್ತು ಕೋಮು ದ್ವೇಷ ಬಿತ್ತುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತ ಜನರಲ್ಲಿ ಮತೀಯ ಭಾವನೆ ಭಿತ್ತಿ, ತಪ್ಪು ಮಾಹಿತಿ ಹಂಚಿಕೊಳ್ಳುತ್ತ ಪ್ರಚೋದನೆ ನೀಡುತ್ತಿದ್ದಾರೆ ಎಂಬ ದೂರಿನ ಮೇಲೆ ಈ ಹಿಂದೆ ಬಂಧನಕ್ಕೊಳಗಾಗಿದ್ದರು.

“ಇದು ಶಿಕ್ಷಣ ಪಡೆಯೋ ಸಮಯದಲ್ಲಿ ಮಕ್ಕಳು ಧರ್ಮವೇ ದೊಡ್ಡದು ಅಂತ ತಮ್ಮ ಭವಿಷ್ಯ ನಾಶ ಮಾಡಿಕೊಳ್ತಿರೋ ಸಂದರ್ಭದಲ್ಲಿ ಕೆಲವರಿಗೆ ಒಂದಷ್ಟು ಮೆಸೇಜ್ ಕೊಡುವ ಪ್ರಯತ್ನ ಈ ಕಾಲ್ಪನಿಕ ಸಂದರ್ಶನ” ಎಂದು ಡಿಸ್‌ಕ್ರಿಪ್ಶನ್‌ನಲ್ಲಿ(ಅಡಿ ಬರೆಹದಲ್ಲಿ) ಬರೆಯಲಾಗಿದೆ.

ಟಿವಿ ವಿಕ್ರಮ ಯೂಟ್ಯೂಬ್ ಚಾನೆಲ್ ನಲ್ಲಿ  ಹಿಂದೆ ಕೆಲಸ ಮಾಡುತ್ತಿದ್ದ ಕಿರಿಕ್ ಎಂದೇ ಹೆಸರಾಗಿದ್ದ ಕಿರಿಕ್ ಕೀರ್ತಿ ಮತ್ತು ಮುಮ್ತಾಜ್ ಎಂಬ ಟಿವಿ ಆಂಕರ್ ಈ ಕಾಲ್ಪನಿಕ ಸಂದರ್ಶನವನ್ನು ನಡೆಸಿಕೊಟ್ಟಿದ್ದಾರೆ. ಫೆಬ್ರವರಿ 2022 ರಲ್ಲಿ ಸ್ಕ್ರಿಪ್ಟ್ ಮಾಡಿದ ವಿಡಿಯೋ ಸಂದರ್ಶನ ಮಾಡುವ ಮೂಲಕ ಮುಸ್ಲಿಂ ಸಮುದಾಯವನ್ನು ಅಪರಾಧಿಗಳೆಂಬಂತೆ ಬಿಂಬಿಸಿರುವುದು ಸ್ಪಷ್ಟವಾಗಿದೆ.

ಮಹೇಶ್ ವಿಕ್ರಮ್ ಹೆಗ್ಡೆ ಜೊತೆಯಲ್ಲಿ ಫೋಟೋದಲ್ಲಿ ಕಾಣುವ ಹುಡಿಗಿಯೇ ಮುಮ್ತಾಜ್. ಈಕೆ ಟಿವಿ ವಿಕ್ರಮಾದಲ್ಲಿ ಆಂಕರ್ ಆಗಿ ಕೆಲಸ ಮಾಡುತ್ತಿದ್ದು, ಹಿಜಾಬ್ ಕುರಿತಾದ ಸ್ಕ್ರಿಪ್ ವಿಡಿಯೋದಲ್ಲಿ ಹಿಜಾಬ್ ಧರಿಸಿ ಮುಸ್ಲಿಂ ಸಮುದಾಯದ ಮಹಿಳೆಯರು ದಡ್ಡರು, ಧರ್ಮಾಂಧರು  ಎಂಬಂತೆ ಮಾತನಾಡಿರುವುದು ಈಕೆಯೇ.

Image

ಒಟ್ಟಾರೆಯಾಗಿ ಹೇಳುವುದಾದರೆ, ಬಲಪಂಥೀಯ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡ ಸಂದರ್ಶನವೊಂದರ ವೈರಲ್ ಕ್ಲಿಪ್ ವಾಸ್ತವವಾಗಿ 2022ರಲ್ಲಿ ಟಿವಿ ವಿಕ್ರಮ ಯೂಟ್ಯೂಬ್ ಚಾನೆಲ್ ಮಾಡಿದ ಸ್ಕ್ರಿಪ್ಟ್ ಮಾಡಿದ ಹಳೆಯ ಸಂದರ್ಶನವಾಗಿದ್ದು ಇದನ್ನು ಮುಸ್ಲಿಂ ಮಹಿಳೆಯೊಂದಿಗೆ ನಡೆಸಿರುವ ನಿಜವಾದ ನಿಜವಾದ ಸಂದರ್ಶನ ಎಂಬಂತೆ ಚಿತ್ರಿಸಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಈ ವಿಡಿಯೋ ಜನರನ್ನು ತಪ್ಪು ದಾರಿಗೆಳೆಯುವಂತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ದಾವೂದ್ ಇಬ್ರಾಹಿಂ ಸಾವಿನ ಸುದ್ದಿ ಎಷ್ಟು ನಿಜ? ಎಷ್ಟು ಸುಳ್ಳು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights