ಫ್ಯಾಕ್ಟ್‌ಚೆಕ್ : DYFI ಪೋಸ್ಟ್‌ರ್‌ನಲ್ಲಿ ಇರುವ ಕೋಟಿ ಚೆನ್ನಯ ಸಹೋದರರ ಚಿತ್ರವನ್ನು ರಾಮ ಲಕ್ಷ್ಮಣರ ಚಿತ್ರ ಎಂದು ತಪ್ಪಾಗಿ ಹಂಚಿಕೊಂಡ ಬಲಪಂಥೀಯ ಬೆಂಬಲಿಗರು
ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್ (DYFI) ನ 12ನೆ ರಾಜ್ಯ ಸಮ್ಮೇಳನ ಇದೇ ಫೆಬ್ರವರಿ 25 ರಿಂದ ದಕ್ಷಿಣಿ ಕನ್ನಡದ ಮಂಗಳೂರಿನ ತೊಕ್ಕೊಟು ವಿನಲ್ಲಿ ನಡೆಯಲಿದೆ.
ಡಿವೈಎಫ್ಐ ಸಮಾವೇಶದ ಪೋಸ್ಟರ್ ನಲ್ಲಿ ಗಾಂಧೀಜಿ, ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಕುವೆಂಪು, ಟಿಪ್ಪು ಮತ್ತು ಶ್ರೀ ನಾರಾಯಣ ಗುರು ಚಿತ್ರದೊಂದಿಗೆ ರಾಮ ಮತ್ತು ಲಕ್ಷ್ಮಣನ ಚಿತ್ರವನ್ನು ಹಾಕಲಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಎಡ ಸಿದ್ದಾಂತದ ಬೆಂಬಲಿತ ಯುವಜನೆ ಸಂಘಟನೆಯೊಂದು ತನ್ನ ರಾಜ್ಯ ಸಮ್ಮೇಳನದ ಪೋಸ್ಟ್‌ರ್‌ನಲ್ಲಿ ರಾಮ ಮತ್ತು ಲಕ್ಷ್ಮಣನ ಚಿತ್ರವನ್ನು ಬಳಸಿಕೊಂಡಿದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಡಿವೈಎಫ್ಐ ಸಮಾವೇಶದ ಪೋಸ್ಟರ್ ನಲ್ಲಿ ಬಿಲ್ಲು ಮತ್ತು ಬಾಣಗಳನ್ನು ಹಿಡಿದಿರುವ ರಾಮ ಮತ್ತು ಲಕ್ಷ್ಮಣನ ಚಿತ್ರವನ್ನು ಬಳಸಿಕೊಂಡಿದೆಯೇ ಎಂದು ಪರಿಶೀಲಿಸಲು DYFI ನ ಅಧಿಕೃತ ಫೇಸ್‌ಬುಕ್ ಪೇಜ್‌ಅನ್ನು ಪರಿಶೀಲಿಸಿದಾಗ, ಡಿವೈಎಫ್‌ಐ ರಾಜ್ಯ ಸಮ್ಮೇಳನದ ಪೋಸ್ಟರ್‌ಅನ್ನು ಪ್ರಕಟಿಸಿದ್ದು ಅದರಲ್ಲಿ ಬಿಲ್ಲು ಮತ್ತು ಬಾಣಗಳನ್ನು ಹಿಡಿದಿರುವವರು ರಾಮ ಲಕ್ಷ್ಮಣರಲ್ಲ, ಅವರು ತುಳುನಾಡಿನ ಅವಳಿ ಸೋದರರು ಮತ್ತು ಜನಪದದ ಪ್ರಮುಖರಾದ ಕೋಟಿ ಚೆನ್ನಯರು ಎಂದು DYFI ನ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್ ಇಂಡಿಯಾ ಟುಡೆಗೆ ಮಾಹಿತಿ ನೀಡಿದ್ದಾರೆ.
DYFI ಬಿಡುಗಡೆ ಮಾಡಿರುವ ಪೋಸ್ಟರ್‌ನಲ್ಲಿ ಬಸವಣ್ಣ, ಮಹಾತ್ಮ ಗಾಂಧಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್,ಕಾರ್ಲ್ ಮಾರ್ಕ್ಸ್, ಚೆ ಗುವೇರಾ, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಟಿಪ್ಪು ಸುಲ್ತಾನ್, ಶ್ರೀ ನಾರಾಯಣ ಗುರು, ತುಳುನಾಡಿನ ರಾಣಿ ಅಬ್ಬಕ್ಕ (ಪೋರ್ಚುಗೀಸರ ವಿರುದ್ಧ ಹೋರಾಡಿದ ರಾಣಿ) , ಕುವೆಂಪು, ಮತ್ತು ಕೋಟಿ-ಚಿನ್ನಯ್ಯ ಸಹೋದರರು ಪೋಸ್ಟರ್‌ನಲ್ಲಿದ್ದಾರೆ.
ದಕ್ಷಿಣ ಕನ್ನಡದ ಭಾಗದ ತುಳುನಾಡಿನ ಕೋಟಿ ಮತ್ತು ಚಿನ್ನಯ್ಯ ಸಹೋದರರನ್ನು ಕನ್ನಡಿಗರು ಗುರುಸ್ಥಾನಿಕರೆಂದು ಪೂಜಿಸುತ್ತಾರೆ. ಇವರಿಬ್ಬರೂ ಅನ್ಯಾಯದ ವಿರುದ್ಧ ಹೋರಾಡಿದ ಮಹಾನಾಯಕರು. ವಿಜಯ ಕರ್ನಾಟಕ ನೀಡಿದ ವರದಿಯ ಸ್ಕ್ರೀನ್‌ಶಾಟ್ ಕೆಳಗೆ ಇದೆ.
ಇದೇ ರೀತಿಯ ಫೋಟೋವನ್ನು ಕೋಟಿ ಮತ್ತು ಚೆನ್ನಯರ ಜನ್ಮಸ್ಥಳವಾದ ಪಡುಮಲೆಯ ಅಭಿವೃದ್ಧಿಯ ಬಗ್ಗೆ ಮಂಗಳೂರು ಟುಡೇ ಅಕ್ಟೋಬರ್ 15, 2016 ರಂದು ಪ್ರಕಟಿಸಿದ ವರದಿಯಲ್ಲೂ ಹಾಕಲಾಗಿದೆ ಎಂದು ನ್ಯೂಸ್ ಚೆಕ್ಕರ್ ವರದಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಡಿವೈಎಫ್‌ಐ ಯುವಜನ ಸಂಘಟನೆಯ 12 ನೇ ರಾಜ್ಯ ಸಮ್ಮೇಳನ 2024 ರ ಫೆಬ್ರವರಿ 25 ರಿಂದ 27 ರವರೆಗೆ ಮಂಗಳೂರಿನ ತೊಕ್ಕೊಟ್ಟು ಯೂನಿಟಿ ಮೈದಾನದಲ್ಲಿ ನಡೆಯಲಿದೆ. ಅದರ ಭಾಗವಾಗ ಪೋಸ್ಟ್‌ರ್‌ವೊಂದನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಕೋಟಿ ಚನ್ನಯ ಸಹೋದರರ ಚಿತ್ರವನ್ನು ಹಾಕಲಾಗಿದೆ. ಆದರೆ ಬಲಪಂಥೀಯ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಕೋಟಿ ಚನ್ನಯರ ಚಿತ್ರವನ್ನುಸುಳ್ಳು ಪ್ರತಿಪಾದನೆಯೊಂದಿಗೆ ರಾಮ ಮತ್ತು ಲಕ್ಷ್ಮಣರ ಚಿತ್ರವನ್ನು ಹಾಕಲಾಗಿದೆ ಎಂದು ತಪ್ಪುದಾರಿಗೆಳೆಯುತ್ತವೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ದಲಿತರಿಗೆ ಮತದಾನದ ಹಕ್ಕು ನೀಡಬಾರದು ಎಂದು ಕಾಂಗ್ರೆಸ್ ಹೇಳಿತ್ತು ಎಂಬುದು ಸುಳ್ಳು