FACT CHECK | ಬೆಂಗಳೂರಿನ ನಗರತ್ ಪೇಟೆಯ ಜುಮ್ಮಾ ಮಸೀದಿ ಬಳಿ ನಡೆದ ಘಟನೆಗೆ ಹಿಂದೂ ಮುಸ್ಲಿಂ ಎಂದು ಕೋಮು ಬಣ್ಣ ಹಚ್ಚಿದ ಬಿಜೆಪಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್

‘ನಮಾಝ್ ವೇಳೆ ಹನುಮಾನ್ ಚಾಲೀಸ್ ಹಾಕಿದ್ದರಿಂದ ಕೋಪಗೊಂಡ ಮುಸ್ಲಿಂ ಯುವಕರ ಗುಂಪು ಮೊಬೈಲ್ ಅಂಗಡಿ ಮಾಲೀಕನ ಮೇಲೆ ಹಲ್ಲೆ’ ನಡೆಸಿದೆ ಎಂಬ ಸುದ್ದಿಯೊಂದು ಮುಖ್ಯವಾಹಿನಿ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.  ಇಂತಹದ್ದೆ ಪ್ರತಿಪಾದನೆಯನ್ನು ಮಾಧ್ಯಮಗಳು ಮಾತ್ರವಲ್ಲದೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕೂಡ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಹನುಮಾನ್ ಚಲೀಸ್‌ ನಿಷೇಧ ಮಾಡಲಾಗಿದೆಯೇ ಸಿಎಂ @ಸಿದ್ದರಾಮ್ಯನವರೇ? ಕರ್ನಾಟಕದ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕಾರಣ, ಮಿತಿಮೀರಿದ ಓಲೈಕೆಯಿಂದ ಮೂಲಭೂತವಾದಿ ಮುಸ್ಲಿಮರಿಗೆ ನಾವು ಏನು ಮಾಡಿದರೂ ನಡೆಯುತ್ತೆ ಎನ್ನುವ ಮೊಂಡು ಧೈರ್ಯ ಬಂದಿದ್ದು, ಬೆಂಗಳೂರಿನ ಶಿವಾಜಿನಗರದ ಅಂಗಡಿಯಲ್ಲಿ ಹನುಮಾನ್ ಚಾಲೀಸ್ ಹಾಕಿದ್ದಕ್ಕೆ ಮುಸ್ಲಿಂ ಯುವಕರ ಗುಂಪೊಂದು ಹಿಂದೂಗಳ ಮೇಲೆ ಹಲ್ಲೆ ನಡೆಸಿದೆ. ರಾಜ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಬೆಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಅನ್ನುವುದೇ ಇಲ್ಲದಂತಾಗಿದ್ದು, ಜನಸಾಮಾನ್ಯರು ರಕ್ಷಣೆ ಇಲ್ಲದೆ ಭಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಬರೆದುಕೊಂಡು ತಮ್ಮ ಎಕ್ಸ್‌ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಹಲವು ಮಾಧ್ಯಮಗಳು ಕೂಡ ಕೋಮು ಧ್ವೇಷದ ಹಿನ್ನಲೆಯಲ್ಲಿ ಸುದ್ದಿ ಬಿತ್ತರಿಸಿರುವುದನ್ನು ಕಾಣಬಹುದು.

ಸಂಜೆ ನಮಾಜ್ ಟೈಂನಲ್ಲಿ ಹನುಮಾನ್‌ ಚಾಲೀಸ್ ಹಾಕ್ತಿಯಾ ಅಂತಾ ಯುವಕನಿಗೆ ಥಳಿತ: ಎಫ್‌ಐಅರ್‌ಗೆ ಪೊಲೀಸರು ಹಿಂದೇಟು? ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿರುವ ಸುವರ್ಣ ನ್ಯೂಸ್‌,
ಸಂಜೆ ನಮಾಜ್ ಟೈಂನಲ್ಲಿ ಹನುಮಾನ್‌ ಚಾಲೀಸ್ ಹಾಕ್ತಿಯಾ ಅಂತಾ ಯುವಕನಿಗೆ ಥಳಿತ: ಎಫ್‌ಐಅರ್‌ಗೆ ಪೊಲೀಸರು ಹಿಂದೇಟು? ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿರುವ ಸುವರ್ಣ ನ್ಯೂಸ್‌

 

‘ನಮಾಜ್‌ ವೇಳೆ ಹನುಮಾನ್‌ ಚಾಲೀಸ ಹಾಕಿದ ಆರೋಪ: ಮೊಬೈಲ್‌ ಅಂಗಡಿ ಮಾಲೀಕನಿಗೆ ಯುವಕರಿಂದ ಥಳಿತ, ಆರ್ ಅಶೋಕ್ ಕಿಡಿ’
‘ನಮಾಜ್‌ ವೇಳೆ ಹನುಮಾನ್‌ ಚಾಲೀಸ ಹಾಕಿದ ಆರೋಪ: ಮೊಬೈಲ್‌ ಅಂಗಡಿ ಮಾಲೀಕನಿಗೆ ಯುವಕರಿಂದ ಥಳಿತ, ಆರ್ ಅಶೋಕ್ ಕಿಡಿ’
Assault Case : ಮೊಬೈಲ್‌ ಶಾಪ್‌ನಲ್ಲಿ ಭಜನೆ ಹಾಡು ಹಾಕಿದ್ದಕ್ಕೆ ಕಿರಿಕ್‌; ಯುವಕನ ನೆಲಕ್ಕೆ ಕೆಡವಿ ಕಾಲಿನಿಂದ ಒದ್ದ ಪುಂಡರು’ ಎಂಬ ಶೀರ್ಷಿಕೆಯ ಸುದ್ದಿ ಪ್ರಕಟಿಸಿರುವ ವಿಸ್ತಾರ ನ್ಯೂಸ್
Assault Case : ಮೊಬೈಲ್‌ ಶಾಪ್‌ನಲ್ಲಿ ಭಜನೆ ಹಾಡು ಹಾಕಿದ್ದಕ್ಕೆ ಕಿರಿಕ್‌; ಯುವಕನ ನೆಲಕ್ಕೆ ಕೆಡವಿ ಕಾಲಿನಿಂದ ಒದ್ದ ಪುಂಡರು’ ಎಂಬ ಶೀರ್ಷಿಕೆಯ ಸುದ್ದಿ ಪ್ರಕಟಿಸಿರುವ ವಿಸ್ತಾರ ನ್ಯೂಸ್

 

ಬೆಂಗಳೂರು: ಮೊಬೈಲ್ ಅಂಗಡಿ ಮಾಲೀಕನಿಗೆ ಮನಸ್ಸೋ ಇಚ್ಚೆ ಥಳಿಸಿದ ಗೂಂಡಾಗಳು’ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿರುವ ಕನ್ನಡ ದುನಿಯಾ ವೆಬ್‌ಸೈಟ್‌
ಬೆಂಗಳೂರು: ಮೊಬೈಲ್ ಅಂಗಡಿ ಮಾಲೀಕನಿಗೆ ಮನಸ್ಸೋ ಇಚ್ಚೆ ಥಳಿಸಿದ ಗೂಂಡಾಗಳು’ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿರುವ ಕನ್ನಡ ದುನಿಯಾ ವೆಬ್‌ಸೈಟ್‌

ನಮಾಜ್ ಸಂದರ್ಭದಲ್ಲಿ  ಹನುಮಾನ್ ಚಾಲೀಸ್ ಹಾಡನ್ನು ಸ್ಪೀಕರ್ ಮೂಲಕ ಹಾಕಿದಕ್ಕೆ ಮುಸ್ಲಿಮರ ಗುಂಪು ಹಿಂದೂ ಯುವಕ ಮುಖೇಶ ಎಂಬುವವನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದು ನಿಜವೇ ಎಂದು ಸಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಪೋಸ್ಟ್‌ ಮತ್ತು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಸುದ್ದಿಯ ವಾಸ್ತವವೇನೆಂದು ಪರಿಶೀಲಿಸೋಣ.

ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್ :

ಮುಖ್ಯವಾಹಿನಿ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ಗಳನ್ನು ಗಮನಿಸಿದ ನಂತರ ಈ ಘಟನೆಗೆ ನಿಜವಾಗಿಯೂ ಕೋಮು ಆಯಾಮ ಇದೆಯೇ ಎಂದು ಪರಿಶೀಲಿಸಲು, ದಿನಾಂಕ 17 ಮಾರ್ಚ್‌ 2024ರಂದು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಪ್ರತಿಯನ್ನು ಗಮನಿಸಿದ್ದೇವೆ.

ಎಫ್‌ಐಆರ್ ಪ್ರತಿಯಲ್ಲಿ ಮುಖೇಶ್ ಎಂಬವರು ಹಲ್ಲೆ ಘಟನೆ ಸಂಬಂಧ ದೂರು ನೀಡಿದ್ದು, ನಂ.65 ಕೃಷ್ಣ ಟೆಲಿಕಾಂ ಶಾಪ್ ಜುಮ್ಮಾ ಮಸೀದಿ ರಸ್ತೆ ಸಿದ್ದಣ್ಣಗಲ್ಲಿ ಬೆಂಗಳೂರು ನಗರ ಇಲ್ಲಿ, ಸಂಜೆ 6 ಗಂಟೆಯಿಂದ 6:40ರ ನಡುವೆ ಘಟನೆ ನಡೆದಿದೆ ಎಂದು ಉಲ್ಲೇಖಿಸಲಾಗಿದೆ.

ಎಫ್‌ಐಆರ್‌ನಲ್ಲಿ ಹೇಳಿರುವಂತೆ, ‘ದೂರುದಾರ ಮುಖೇಶ್ ಅವರು ದಿನಾಂಕ 17 ಮಾರ್ಚ್ 2024ರಂದು ಸಂಜೆ 6:25ಕ್ಕೆ ಜುಮಾ ಮಸೀದಿ ರಸ್ತೆ ಸಿದ್ದಣ್ಣಗಲ್ಲಿ ನಂ.25 ಕೃಷ್ಣ ಟೆಲಿಕಾಂ ಅಂಗಡಿಯಲ್ಲಿರುವಾಗ ಸುಲೇಮಾನ್, ಶಾನವಾಜ್, ರೋಹಿತ್, ಡ್ಯಾನಿಶ್, ತರುಣಾ ಹಾಗೂ ಇತರರು ಸೇರಿಕೊಂಡು ಅಂಗಡಿಯ ಬಳಿ ಬಂದು “ಏಕೆ ಸ್ಪೀಕರ್ ಸೌಂಡ್ ಜೋರಾಗಿ ಹಾಕಿರುವೆ ನಮಗೆ ತೊಂದೆಯಾಗುತ್ತದೆ ಎಂದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ”  ಮಾತಿಗೆ ಮಾತು ಬೆಳೆಯುತ್ತಿದಂತೆ ಏಕಾಏಕಿ ಶಾನವಾಜ್ ಎಂಬುವವನು ಮುಖೇಶನ ಮುಖಕ್ಕೆ ಗುದ್ದಿದ್ದಾನೆ. ನಂತರ ಸುಲೇಮಾನ್ ಕೈಗಳಿಂದ ಹೊಡೆಯಲು ಶುರು ಮಾಡಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ನಂತರ ಮುಖೇಶ್ ಅವರನ್ನು ಅಂಗಡಿಯಿಂದ ಹೊರಗೆ ಎಳೆದು ರಕ್ತ ಬರುವಂತೆ ಹೊಡೆದಿದ್ದಾರೆ’ ಎಂದು ತಿಳಿಸಲಾಗಿದೆ.

ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

 

ಮುಖೇಶ್ ಅವರು ಕೈ ಬರಹದಲ್ಲಿ ಕೊಟ್ಟಿರುವ ದೂರಿನಲ್ಲೂ “ಏಕೆ ಸ್ಪೀಕರ್ ಸೌಂಡ್ ಜೋರಾಗಿ ಹಾಕಿರುವೆ ನಮಗೆ ತೊಂದೆಯಾಗುತ್ತದೆ ಎಂದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ” ಎಂದು ಸ್ಪಷ್ಟವಾಗಿ ಬರೆದಿದ್ದಾರೆ.

ಲಭ್ಯವಾಗಿರುವ ಎಫ್‌ಐಆರ್ ಪ್ರತಿ ಮತ್ತು ಮುಖೇಶ್ ಅವರು ಕೊಟ್ಟಿರುವ ಕೈ ಬರಹದ ದೂರಿನ ಪ್ರಕಾರ ಎಲ್ಲಿಯೂ ನಮಾಝ್ ಅಥವಾ ಆಝಾನ್ ಸಮಯದಲ್ಲಿ ಹನುಮಾನ್ ಚಾಲೀಸ್ ಹಾಕಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಉಲ್ಲೇಖಿಸಿಲ್ಲ. ಅಲ್ಲದೆ, ಮಾಧ್ಯಮಗಳು ಮತ್ತು ಬಿಜೆಪಿ ನಾಯಕರು ಆರೋಪಿಸಿದಂತೆ ಪ್ರಕರಣದ ಆರೋಪಿಗಳಲ್ಲಿ ಮುಸ್ಲಿಮರು ಮಾತ್ರವಿಲ್ಲ. ಎಫ್‌ಐಆರ್ ಪ್ರತಿಯಲ್ಲಿ ಆರು ಆರೋಪಿಗಳನ್ನು ಉಲ್ಲೇಖಿಸಲಾಗಿದ್ದು, ಈ ಪೈಕಿ ಐವರ ಹೆಸರಿದೆ. ಅದರಲ್ಲಿ ಮೂವರು ಮುಸ್ಲಿಮರು ಮತ್ತು ಇಬ್ಬರು ಹಿಂದೂ ಹೆಸರಿನ ಆರೋಪಿಗಳಿದ್ದಾರೆ. ಕ್ರಮವಾಗಿ  A1 ಸುಲೇಮಾನ್, A2 ಶಾನವಾಜ್, A3 ರೋಹಿತ್, A4 ಡ್ಯಾನಿಶ್, A5 ತರುಣಾ ಮತ್ತು ಇತರು ಎಂದು ನಮೂದಿಸಲಾಗಿದೆ.

ಒಂದು ವೇಳೆ ಹನುಮಾನ್ ಚಾಳೀಸ್ ಹಾಡನ್ನು ಹಾಕಿರುವ ಹಿನ್ನಲೆಯಲ್ಲಿಯೇ ದಾಳಿ ನಡೆದಿದ್ದರೆ ದಾಳಿ ಮಾಡಿದವರಲ್ಲಿ ಮುಸ್ಲಿಮರು ಮಾತ್ರ ಇರಬೇಕಿತ್ತು ಆದರೆ ಹಲ್ಲೆ ಮಾಡಿದವರಲ್ಲಿ ಹಿಂದೂ ಯುಕರು ಇದ್ದಾರೆ. ಹಾಗಾಗಿ ಈ ಪ್ರಕರಣದಲ್ಲಿ ಯವುದೇ ಕೋಮು ಆಯಾಮವಾಗಲಿ, ಆಜಾನ್ ಅಥಾವಾ ಹನುಮಾನ್ ಚಾಲೀಸ್‌ ಆಗಲಿ ಕಾರಣವಲ್ಲ.  ಸ್ಪೀಕರ್‌ನಲ್ಲಿ ಹೆಚ್ಚಿನ ಸೌಂಡ್ ಇಟ್ಟಿದ್ದರಿಂದ ಶಬ್ದವನ್ನು ಕಡಿಮೆ ಮಾಡುವ ವಿಚಾರಕ್ಕೆ ನಡೆದ ಗಲಾಟೆ ಎಂಬುದು ಪರಿಶೀಲನೆ ವೇಳೆ ತಿಳಿದುಬಂದಿದೆ.

ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

 

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮೋದಿ ಮತ್ತು ಅಮಿತ್ ಶಾ ಕುರಿತು ಪತ್ರಕರ್ತೆ ಕೇಳಿದ ಪ್ರಶ್ನೆಗೆ ಚುನಾವಣಾ ಆಯೋಗ ಉತ್ತರಿಸದೆ ನುಣುಚಿಕೊಂಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights