FACT CHECK | ರಾಮೇಶ್ವರ ಕೆಫೆ ಬಾಂಬ್ ಸ್ಪೋಟದ ರೂವಾರಿ ರಾಮಚಂದ್ರ ಕಲ್ಸಂಗ್ರ ಎಂಬ ವ್ಯಕ್ತಿಯೇ? ಈತ ಚಕ್ರವರ್ತಿ ಸೂಲಿಬೆಲೆ ಅಪ್ತನೇ?
ಇತ್ತೀಚೆಗೆ, ಬೆಂಗಳೂರಿನ ವೈಟ್ ಫೀಲ್ಡ್ ನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆ ಎಂಬ ಹೋಟೆಲ್ ನಲ್ಲಿ ಸ್ಫೋಟ ಸಂಭವಿಸಿತ್ತು. ಸ್ಪೋಟ ಪ್ರಕರಣದಕ್ಕೆ ಸಂಬಂಧಿಸಿದಂತೆ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು ಬಾಂಬ್ ಸ್ಪೋಟಿಸಿದ ಭಯೋತ್ಪಾದಕ ರಾಮಚಂದ್ರ ಕಲ್ಸಂಗ್ರ ಎಂಬ ವ್ಯಕ್ತಿಯನ್ನು ಎನ್‌ಐಎ ಬಂಧಿಸಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
ಭಯೋತ್ಪಾಧಕ RSS ಕಾರ್ಯಕರ್ತ ರಾಮಚಂದ್ರ ಕಲ್ಸಂಗ್ರನನ್ನು NIA ಬಂಧಿಸಿದೆ. ಬಂಧಿತ ಭಯೋತ್ಪಾದಕ ಚಕ್ರವರ್ತಿ ಸೂಲಿಬೆಲೆ ಅಪ್ತ ರಾಮಚಂದ್ರ ಕಲಸಂಗ್ರ ರಾಮೇಶ್ವರ ಕೆಫೆ ಸ್ಪೋಟದ ಭಯೋತ್ಪಾದಕ ಎಂಬ ಹೇಳಿಕೆಯೊಂದಿಗೆ ವಾಟ್ಸಾಪ್ ಮತ್ತು ಫೇಸ್‌ಬುಕ್‌ಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಸ್ಫೋಟಿಸಿ ಪರಾರಿಯಾಗಿದ್ದ ಆರೋಪಿಯ ಸುಳಿವು ನೀಡಿದವರಿಗೆ ಹತ್ತು ಲಕ್ಷ ರೂಪಾಯಿ ಬಹುಮಾನವನ್ನು ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಘೋಷಿಸಿತ್ತು. ಆದರೆ ಈಗ ಚಕ್ರವರ್ತಿ ಸೂಲಿಬೆಲೆ ಆಪ್ತ ಎಂದು ಹೇಳುವ ವ್ಯಕ್ತಿ ಬಾಂಬ್ ಸ್ಪೋಟಿಸಿದ ವ್ಯಕ್ತಿ ಎಂದು ಕ್ಲೈಮ್ ಮಾಡಲಾಗುತ್ತಿದೆ.
ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ಸುದ್ದಿಯ ಸತ್ಯಾಸತ್ಯೆಯನ್ನು ಪರಿಶೀಲಿಸುವಂತೆ ಏನ್‌ಸುದ್ದಿ.ಕಾಂನ ವಾಟ್ಸಾಪ್ ಸಂದೇಶಗಳ ಮೂಲಕ ವಿನಂತಿಸಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಎನ್‌ಐಎ ಸೋಶಿಯಲ್ ಮೀಡಿಯಾದ ಹ್ಯಾಂಡಲ್‌ಗಳನ್ನು ಸರ್ಚ್ ಮಾಡಿದಾಗ, ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ NIA ಅಧಿಕಾರಿಗಳು ಆರೋಪಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದು, ಬಳ್ಳಾರಿ, ಕಲಬುರಗಿಗೆ, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಶೋಧ ನಡೆಸಿದ್ದಾರೆ.
https://twitter.com/NIA_India/status/1766363637008957551
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಹೇಳಿರುವ ರಾಮಚಂದ್ರ ಕಲ್ಸಂಗ್ರ ಎಂಬ ವ್ಯಕ್ತಿಯು ಸಂಜೋತಾ ಎಕ್ಸ್‍ಪ್ರೆಸ್ ಸ್ಫೋಟ ಪ್ರಕರಣದ ಪ್ರಮುಖ ರೂವಾರಿ ಎಂದು ಹೇಳಲಾಗುತ್ತಿದೆ. ರಾಮಚಂದ್ರ ಕಲ್ಸಂಗ್ರ 18 ಫೆಬ್ರವರಿ 2007 ರ ಸಂಝೌತಾ ಎಕ್ಸ್‌ಪ್ರೆಸ್ ಸ್ಫೋಟಕ್ಕೆ ಸಂಬಂಧಿಸಿದ ಭಯೋತ್ಪಾದಕನಾಗಿದ್ದಾನೆ. ಈತನ ಬಂಧನಕ್ಕೆ ಕಾರಣವಾಗುವ ಯಾವುದೇ ಮಾಹಿತಿಗೆ ಎನ್‌ಐಎ 10 ಲಕ್ಷ ಬಹುಮಾನವನ್ನು ಘೋಷಿಸಿದೆ. ಮತ್ತು ಈತ ಎನ್‌ಐಎ ಹೊರಡಿಸಿರುವ 2012ರ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾನೆ.
![]()
ಆದ್ದರಿಂದ ಈ ವ್ಯಕ್ತಿಗೂ ರಾಮೇಶ್ವರ ಕೆಫೆ ಸ್ಫೋಟಕ್ಕೂ ಯಾವುದೇ ಸಂಬಂಧವಿಲ್ಲ. ರಾಮಚಂದ್ರ ಕಲ್ಸಂಗ್ರ ರಾಮೇಶ್ವರ ಕೆಫೆ ಸ್ಪೋಟದ ಭಯೋತ್ಪಾದಕ ಎಂಬುದು ಸುಳ್ಳು.
ಒಟ್ಟಾರೆಯಾಗಿ ಹೇಳುವುದಾದರೆ, 18 ಫೆಬ್ರವರಿ 2007 ರ ಸಂಝೌತಾ ಎಕ್ಸ್‌ಪ್ರೆಸ್ ಸ್ಫೋಟದ ರೂವಾರಿ ರಾಮಚಂದ್ರ ಕಲ್ಸಂಗ್ರ ಎಂಬುವವನ ಚಿತ್ರವನ್ನು ಹಂಚಿಕೊಂಡು ಈತನೇ ರಾಮೇಶ್ವರ ಕೆಫೆ ಸ್ಪೋಟದ ಭಯೋತ್ಪಾದಕ ಮತ್ತು ಚಕ್ರವರ್ತಿ ಸೂಲಿಬೆಲೆ ಅಪ್ತ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಗದಗ ಜಿಲ್ಲೆಯ ಹೈವೆಯೊಂದರಲ್ಲಿ ಕಾಣಿಸಿಕೊಂಡ ಚಿರತೆಯ ದೃಶ್ಯಗಳನ್ನು ಮೈಸೂರು-ಬೆಂಗಳೂರು ಹೈವೆಯದ್ದು ಎಂದು ತಪ್ಪಾಗಿ ಹಂಚಿಕೆ

