ಫ್ಯಾಕ್ಟ್‌ಚೆಕ್ : BJP ನಾಯಕ ಸುಬ್ರಮಣಿಯನ್ ಸ್ವಾಮಿ ತನ್ನ ಮಗಳು ಮತ್ತು ಮೊಮ್ಮಗಳನ್ನು ಹಜ್ ಯಾತ್ರೆಗೆ ಬೀಳ್ಕೊಡುತ್ತಿರುವುದು ನಿಜವೇ?

“BJP ಯ ಹಿರಿಯ ನಾಯಕರು, ರಾಜ್ಯಸಭಾ ಸದಸ್ಯರಾದ ಸುಬ್ರಮಣಿಯನ್ ಸ್ವಾಮಿ ಅವರು ಹೈದರಾಬಾದ್ ಏರಪೋರ್ಟ್ ನಲ್ಲಿ ತನ್ನ ಮಗಳು ಮತ್ತು ಮೊಮ್ಮಗಳನ್ನು ಹಜ್ ಯಾತ್ರೆಗೆ ಬೀಳ್ಕೊಟ್ಟ ಸಂದರ್ಭದ ಚಿತ್ರ” ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಪ್ರಚೋದಿಸುವ ಕಟ್ಟರ್ ಹಿಂದೂ ನಾಯಕ ಸುಬ್ರಮಣಿಯನ್ ಸ್ವಾಮಿ, ತನ್ನ ಸ್ವಂತ ಮಗಳು ಮತ್ತು ಮೊಮ್ಮಗಳನ್ನು ಹೈದರಾಬಾದ್ ವಿಮಾನ ನಿಲ್ದಾಣದ ಮೂಲಕ ಹಜ್‌ ಯಾತ್ರೆಗೆ ಬೀಳ್ಕೊಡುತ್ತಿದ್ದಾರೆ ಹೇಳಿಕೆಯೊಂದಿಗೆ ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸುಬ್ರಮಣಿಯನ್ ಸ್ವಾಮಿ ಅವರ ಬಗ್ಗೆ ಮಾಡಿದ ಪ್ರತಿಪಾದನೆ ನಿಜವೇ ತಿಳಿಸಿ ಎಂದು ಏನ್‌ ಸುದ್ದಿ.ಕಾಂ ಗೆ ಸಂದೇಶಗಳ ಮೂಲಕ ವಿನಂತಿಸಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸುಬ್ರಮಣಿಯನ್ ಸ್ವಾಮಿ ಅವರು ಮಗಳು ಮತ್ತು ಮೊಮ್ಮಗಳನ್ನು ಹೈದರಾಬಾದ್ ವಿಮಾನ ನಿಲ್ದಾಣದ ಮೂಲಕ ಹಜ್ ಯಾತ್ರೆಗೆ ಬೀಳ್ಕೊಡುತ್ತಿದ್ದಾರೆ ಎಂದು ಪ್ರತಿಪಾದಿಸಿ ಮಾಡಾಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ವೈರಲ್ ಫೋಟೊ ಮೇ 4, 2018 ರಂದು ಬೆಂಗಳೂರಿನಲ್ಲಿ ತೆಗೆಯಲಾದ ಚಿತ್ರ ಎಂದು ತಿಳಿದು ಬಂದಿದೆ.

ಜಗದೀಶ್ ಶೆಟ್ಟಿ ಎಂಬುವವರು ಈ ಸಂದರ್ಭದಲ್ಲಿ ಸೆರೆಹಿಡಿದ ಚಿತ್ರವನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡ ಪೋಸ್ಟ್‌ ಲಭ್ಯವಾಗಿದೆ. ಈ ಪೋಸ್ಟ್‌ನಲ್ಲಿ ಶೆಟ್ಟಿಯವರು ಹೀಗೆ ಬರೆಯುತ್ತಾರೆ “ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇದನ್ನು ನೋಡಿ! ಡಾ ಸುಬ್ರಮಣಿಯನ್ ಅವರನ್ನು ಶ್ಲಾಘಿಸಿದ ಮುಸ್ಲಿಂ ಮಹಿಳೆಯರು ಅವರೊಂದಿಗೆ ಛಾಯಾಚಿತ್ರವನ್ನು ತೆಗೆದುಕೊಳ್ಳಲು ಸಹ ಬಯಸುತ್ತಾರೆ! ಆದರೆ ಅವರು ಮಾತ್ರ ತ್ರಿವಳಿ ತಲಾಖ್ ಅನ್ನು ಹೇಗೆ ನಿಷೇಧಿಸಬೇಕೆಂದು ಬಯಸುತ್ತಾರೆ ಎಂಬುದರ ಕುರಿತು ಮಾತನಾಡುತ್ತಾರೆ!” ಎಂದು ಬರೆಯುತ್ತಾರೆ.

2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಟೈಮ್ಸ್ ನೌ ನಡೆಸಿದ ರಾಜಕೀಯ ಪಕ್ಷಗಳ ಪ್ರಮುಖ ನಾಯಕರನ್ನು ಒಳಗೊಂಡ ಚರ್ಚೆಯಲ್ಲಿ ಭಾಗವಹಿಸಲು ಸುಬ್ರಮಣಿಯನ್ ಸ್ವಾಮಿ ಅವರು ಮೇ 4, 2018 ರಂದು ಬೆಂಗಳೂರಿನಲ್ಲಿ ಹಾಜರಿದ್ದರು.

ಚಿತ್ರದಲ್ಲಿರುವ ಮಹಿಳೆಯರು ಹೇಳಿಕೊಂಡಂತೆ ಸುಬ್ರಮಣಿಯನ್ ಸ್ವಾಮಿ ಅವರ ಮಗಳು ಮತ್ತು ಮೊಮ್ಮಗಳು ಅಲ್ಲ, ಹಾಗೆಯೇ ಸುಬ್ರಮಣಿಯನ್ ಸ್ವಾಮಿ ಅವರು ಮೇ 4, 2018 ರಂದು ಕರ್ನಾಟಕ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಟೈಮ್ಸ್ ನೌ ಚರ್ಚೆಗಾಗಿ ಬೆಂಗಳೂರಿನಲ್ಲಿದ್ದರು.

ಸುಬ್ರಮಣಿಯನ್ ಸ್ವಾಮಿ ಪುತ್ರಿಯರು ಯಾರು ಗೊತ್ತೆ?

ಸುಬ್ರಮಣಿಯನ್ ಸ್ವಾಮಿ ಅವರ ಹಿರಿಯ ಮಗಳು ಗೀತಾಂಜಲಿ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ ಅವರ ಹಿರಿಯ ಮಗಳು ಗೀತಾಂಜಲಿ ಸ್ವಾಮಿ

ಸುಬ್ರಮಣಿಯನ್ ಸ್ವಾಮಿ ಅವರಿಗೆ ಗೀತಾಂಜಲಿ ಸ್ವಾಮಿ ಮತ್ತು ಸುಹಾಸಿನಿ ಹೈದರ್ ಎಂಬ ಇಬ್ಬರು ಪುತ್ರಿಯರಿದ್ದಾರೆ, ಹಿರಿಯ ಮಗಳು ಗೀತಾಂಜಲಿ ಸ್ವಾಮಿ ಅವರು ವಾಣಿಜ್ಯೋದ್ಯಮಿ ಮತ್ತು ಖಾಸಗಿ ಇಕ್ವಿಟಿ ವೃತ್ತಿಪರರಾಗಿದ್ದಾರೆ. ಅವರು ನಿವೃತ್ತ IAS ಅಧಿಕಾರಿ ಮತ್ತು ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಮಾಜಿ ಕಾರ್ಯದರ್ಶಿ E.A.S ಶರ್ಮಾ ಅವರ ಪುತ್ರರಾದ MIT ಯಲ್ಲಿ ಪ್ರಾಧ್ಯಾಪಕರಾದ ಡಾ. ಸಂಜಯ್ ಶರ್ಮಾ ಅವರನ್ನು ವಿವಾಹವಾಗಿದ್ದಾರೆ. ಕಿರಿಯ ಮಗಳು ಸುಹಾಸಿನಿ  ಪತ್ರಕರ್ತೆಯಾಗಿದ್ದು, ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಹೈದರ್ ಅವರ ಪುತ್ರ ನದೀಮ್ ಹೈದರ್ ಅವರನ್ನು ವಿವಾಹವಾಗಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ಅವರ ಕಿರಿಯ ಮಗಳು ಸುಹಾಸಿನಿ ಹೈದರ್
ಸುಬ್ರಮಣಿಯನ್ ಸ್ವಾಮಿ ಅವರ ಕಿರಿಯ ಮಗಳು ಸುಹಾಸಿನಿ ಹೈದರ್

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಚಿತ್ರದಲ್ಲಿ BJP ಯ ಹಿರಿಯ ನಾಯಕ, ರಾಜ್ಯಸಭಾ ಸದಸ್ಯರಾದ ಸುಬ್ರಮಣಿಯನ್ ಸ್ವಾಮಿ ಅವರು ಹೈದರಾಬಾದ್ ಏರಪೋರ್ಟ್ ನಲ್ಲಿ ತನ್ನ ಮಗಳು ಮತ್ತು ಮೊಮ್ಮಗಳನ್ನು ಹಜ್ ಯಾತ್ರೆಗೆ ಕಳುಹಿಸುತ್ತಿರುವ ಚಿತ್ರ ಎಂದು ಹಂಚಿಕೊಳ್ಳಲಾದ ಪೋಸ್ಟ್‌ ತಪ್ಪಾಗಿದೆ. ಫೋಟೊದಲ್ಲಿರುವ ಯುವತಿಯರು ಸುಬ್ರಮಣಿಯನ್ ಸ್ವಾಮಿ ಮಗಳು ಮೊಮ್ಮಗಳಲ್ಲ. 2018ರಲ್ಲಿ ಬೆಂಗಳೂರಿನ ಏರ್‌ಪೋರ್ಟ್‌ನಲ್ಲಿ ತೆಗೆದ ಹಳೆಯ ಚಿತ್ರ ಎಂದು ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ವರದಿ ಮಾಡಿದೆ.

ಕೃಪೆ : ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಮಾವಿನ ಹಣ್ಣು ತಿಂದು ತಕ್ಷಣವೇ ಕೂಲ್ ಡ್ರಿಂಕ್ಸ್‌ ಕುಡಿದರೆ ಸಾವು ಸಂಭವಿಸುವುದೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights