FACT CHECK | ಆರ್ಟಿಕಲ್ 30(A)ಯನ್ನು ಮೋದಿ ರದ್ದು ಮಾಡಿದರೆ ಕಾಂಗ್ರೆಸ್ ಜೀವಸಮಾಧಿ ಆಗುತಂತೆ ನಿಜವೇ? ವಾಸ್ತವವಾಗಿ ಸಂವಿಧಾನದಲ್ಲಿ ಆರ್ಟಿಕಲ್ 30(ಎ) ಇಲ್ಲವೇ ಇಲ್ಲ

ಆರ್ಟಿಕಲ್ 30ಎ ಕುರಿತಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಸಂವಿಧಾನದ ಆರ್ಟಿಕಲ್ 30 ಪ್ರಕಾರ ಮದರಸಾಗಳಲ್ಲಿ ಕುರಾನ್ ಕಲಿಸಬಹುದು, ಆದರೆ ಆರ್ಟಿಕಲ್ 30(ಎ) ಪ್ರಕಾರ ಭಗವದ್ಗೀತೆಯನ್ನು ಶಾಲೆಗಳಲ್ಲಿ ಕಲಿಸುವಂತಿಲ್ಲ, ಇದಕ್ಕೆ ಜವಾಹಾರ್‌ಲಾಲ್ ನೆಹರು ಕಾರಣ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಸಂವಿಧಾನದ “ವಿಧಿ 30 A” ವಿರುದ್ಧ ಕೈಗೊಳ್ಳಲಿದ್ಧಾರೆನ್ನಲಾದ ಕ್ರಮವನ್ನು ಶ್ಲಾಘಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಭಾಷೆಯ ಪೋಸ್ಟ್‌ ಒಂದು ವೈರಲ್‌ ಆಗಿದೆ. ಮೋದಿ ಅವರು ಸಂವಿಧಾನದ ವಿಧಿ 30A ಅನ್ನು ರದ್ದುಗೊಳಿಸಲಿದ್ದಾರೆ ಎಂದು ಈ ವೈರಲ್‌ ಪೋಸ್ಟ್‌ ಹೇಳಿಕೊಂಡಿದೆ.

ಅಷ್ಟೇ ಅಲ್ಲದೆ ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಈ ವಿಧಿಯನ್ನು ಸೇರಿಸಿ ಹಿಂದು ಧರ್ಮ ಮತ್ತು ಹಿಂದು ಸಂಸ್ಕೃತಿ ಕುರಿತು ಸರಕಾರಿ ಶಾಲಾ ಕಾಲೇಜುಗಳಲ್ಲಿ ಕಲಿಸುವುದನ್ನು ನಿರ್ಬಂಧಿಸಿದ್ದರು, ಈ ವಿಧಿಯನ್ನು ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ವಿರೋಧಿಸಿದ್ದರು ಹಾಗೂ ಅವರ ಒತ್ತಡದ ಹಿನ್ನೆಲೆಯಲ್ಲಿ ನೆಹರೂ ಅದನ್ನು ವಾಪಸ್‌ ಪಡೆದಿದ್ದರು ಹಾಗೂ ಪಟೇಲ್‌ ನಿಧನಾನಂತರ ಮತ್ತೆ ಜಾರಿಗೆ ತಂದಿದ್ದರು ಎಂದು ಈ ವೈರಲ್‌ ಪೋಸ್ಟ್‌ ಹೇಳಿಕೊಂಡಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಸರ್ಚ್ ಮಾಡಿದಾಗ, ಸಂವಿಧಾನದ 30 ನೇ ವಿಧಿಯಲ್ಲಿ ಆರ್ಟಿಕಲ್ 30(ಎ) ಎಂಬುದೇ ಇಲ್ಲ. ಬದಲಿಗೆ 30 (1ಎ) ಎಂದಿದೆ. ಈ ವರ್ಗದ ಪ್ರಕಾರ ಭಾಷೆ, ಜಾತಿ, ಧರ್ಮ ಆಧಾರದ ಅಲ್ಪಸಂಖ್ಯಾತರು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲು ಹಕ್ಕು ಹೊಂದಿದ್ದಾರೆ. ಹಾಗೂ ಇದಕ್ಕೆ ಸಂಬಂಧಿಸಿದ ಕೆಲವು ವಿಷಯಗಳು ಆರ್ಟಿಕಲ್ 30 (1) ನಲ್ಲಿ ಅಡಕವಾಗಿವೆ.

ಆರ್ಟಿಕಲ್ 30(1) ಎಲ್ಲಾ ಅಲ್ಪಸಂಖ್ಯಾತರಿಗೆ (ಧರ್ಮ ಅಥವಾ ಭಾಷೆಯ ಆಧಾರದ ಮೇಲೆ) ತಮ್ಮ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ಆಯೋಗವನ್ನು (NCMEI) 2004 ರಲ್ಲಿ ಸ್ಥಾಪಿಸಲಾಯಿತು ಮತ್ತು 30 ನೇ ವಿಧಿಯಲ್ಲಿ ಪ್ರತಿಪಾದಿಸಲಾದ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುತ್ತದೆ.

ವಿಧಿ 30 ಅಲ್ಪಸಂಖ್ಯಾತ ಸಮುದಾಯಗಳಿಗೆ ತಮ್ಮದೇ ಭಾಷೆಯಲ್ಲಿ ಶಿಕ್ಷಣ ಒದಗಿಸಲು ಅನುವು ಮಾಡಿಕೊಡುತ್ತದೆ. ಉದಾಹರಣೆಗೆ ಮುಸ್ಲಿಮರಿಗೆ ಅವರ ಶಾಲೆಗಳಲ್ಲಿ ಉರ್ದು ಭಾಷಾ ಮಾಧ್ಯಮ ಹೊಂದಬಹುದು ಹಾಗೂ ಕ್ರೈಸ್ತ ಶಾಲೆಗಳಲ್ಲಿ ಆಂಗ್ಲ ಭಾಷಾ ಮಾಧ್ಯಮ ಹೊಂದಬಹುದು.

ಭಾರತದ ಸಂವಿಧಾನದಲ್ಲಿ ವಿಧಿ 30ಎ ಅನ್ನುವುದು ಇಲ್ಲ. ವಿಧಿ 30 ಅಲ್ಪಸಂಖ್ಯಾತ ಹಕ್ಕುಗಳನ್ನು ಖಾತ್ರಿ ಪಡಿಸುತ್ತದೆ, ಶಿಕ್ಷಣ ಸಂಸ್ಥೆಗಳನ್ನು ಅವರಿಗೆ ಸ್ಥಾಪಿಸಲು ನಿರ್ವಹಿಸಲು ಅನುಮತಿಸುತ್ತದೆ ಮತ್ತು ಧಾರ್ಮಿಕ ಗ್ರಂಥಗಳನ್ನು ಕಲಿಸುವ ನಿಟ್ಟಿನಲ್ಲಿ ಯಾವುದೇ ನಿರ್ಬಂಧಗಳನ್ನು ವಿಧಿಸುವುದಿಲ್ಲ.

ವಿಧಿ 30 ಅಲ್ಪಸಂಖ್ಯಾತ ಸಮುದಾಯಗಳಿಗೆ ತಮ್ಮದೇ ಭಾಷೆಯಲ್ಲಿ ಶಿಕ್ಷಣ ಒದಗಿಸಲು ಅನುವು ಮಾಡಿಕೊಡುತ್ತದೆ. ಉದಾಹರಣೆಗೆ ಮುಸ್ಲಿಮರಿಗೆ ಅವರ ಶಾಲೆಗಳಲ್ಲಿ ಉರ್ದು ಭಾಷಾ ಮಾಧ್ಯಮ ಹೊಂದಬಹುದು ಹಾಗೂ ಕ್ರೈಸ್ತ ಶಾಲೆಗಳಲ್ಲಿ ಆಂಗ್ಲ ಭಾಷಾ ಮಾಧ್ಯಮ ಹೊಂದಬಹುದು.

ಭಾರತದ ಸಂವಿಧಾನದಲ್ಲಿ ವಿಧಿ 30ಎ ಅನ್ನುವುದು ಇಲ್ಲ. ವಿಧಿ 30 ಅಲ್ಪಸಂಖ್ಯಾತ ಹಕ್ಕುಗಳನ್ನು ಖಾತ್ರಿ ಪಡಿಸುತ್ತದೆ, ಶಿಕ್ಷಣ ಸಂಸ್ಥೆಗಳನ್ನು ಅವರಿಗೆ ಸ್ಥಾಪಿಸಲು ನಿರ್ವಹಿಸಲು ಅನುಮತಿಸುತ್ತದೆ ಮತ್ತು ಧಾರ್ಮಿಕ ಗ್ರಂಥಗಳನ್ನು ಕಲಿಸುವ ನಿಟ್ಟಿನಲ್ಲಿ ಯಾವುದೇ ನಿರ್ಬಂಧಗಳನ್ನು ವಿಧಿಸುವುದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಆರ್ಟಿಕಲ್ 30 ಪ್ರಕಾರ ಮದರಸಾಗಳಲ್ಲಿ ಕುರಾನ್ ಕಲಿಸಬಹುದು, ಆದರೆ ಆರ್ಟಿಕಲ್ 30(ಎ) ಪ್ರಕಾರ ಭಗವದ್ಗೀತೆಯನ್ನು ಶಾಲೆಗಳಲ್ಲಿ ಕಲಿಸುವಂತಿಲ್ಲ ಎಂದು ಜಾರಿಯಲ್ಲಿ ಇಲ್ಲದೇ ಇರುವ ವಿಧಿಯನ್ನು ಆಧಾರ ರಹಿತವಾಗಿ ಉಲ್ಲೇಖಿಸಿ ಪ್ರಧಾನಿ ಮೋದಿ ಆರ್ಟಿಕಲ್ 30(ಎ)ಅನ್ನು ರದ್ದು ಮಾಡಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

 

ಸುಳ್ಳು : ಆರ್ಟಿಕಲ್ 30(A) ಪ್ರಕಾರ ಭಗವದ್ಗೀತೆಯನ್ನು ಶಾಲೆಗಳಲ್ಲಿ ಕಲಿಸುವಂತಿಲ್ಲ, ಇದಕ್ಕೆ ಜವಾಹಾರ್‌ಲಾಲ್ ನೆಹರು ಕಾರಣ, ಈಗ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಸಂವಿಧಾನದ “ವಿಧಿ 30 A” ವಿರುದ್ಧ ಕ್ರಮಕೈಗೊಳ್ಳಲಿದ್ದು, ಆರ್ಟಿಕಲ್ 30(A) ಅನ್ನು ರದ್ದುಗೊಳಿಸಲಿದ್ದಾರೆ ಎಂದು ಪ್ರತಿಪಾದನೆ ಮಾಡಲಾಗಿದೆ.

ಸತ್ಯ : ಭಾರತದ ಸಂವಿಧಾನದಲ್ಲಿ ವಿಧಿ 30ಎ ಅನ್ನುವುದು ಇಲ್ಲ. ವಿಧಿ 30 ಅಲ್ಪಸಂಖ್ಯಾತ ಹಕ್ಕುಗಳನ್ನು ಖಾತ್ರಿ ಪಡಿಸುತ್ತದೆ, ಶಿಕ್ಷಣ ಸಂಸ್ಥೆಗಳನ್ನು ಅವರಿಗೆ ಸ್ಥಾಪಿಸಲು ನಿರ್ವಹಿಸಲು ಅನುಮತಿಸುತ್ತದೆ ಮತ್ತು ಧಾರ್ಮಿಕ ಗ್ರಂಥಗಳನ್ನು ಕಲಿಸುವ ನಿಟ್ಟಿನಲ್ಲಿ ಯಾವುದೇ ನಿರ್ಬಂಧಗಳನ್ನು ವಿಧಿಸುವುದಿಲ್ಲ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕಾಂಗ್ರೆಸ್ ಮುಸ್ಲಿಮರ ಪಕ್ಷ ಎಂದು ರಾಹುಲ್ ಗಾಂಧಿ ಹೇಳಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights