FACT CHECK | ಯಾವ ಬಟನ್ ಒತ್ತಿದ್ರು BJP ಗೆ ಓಟು ! ವೈರಲ್ ವಿಡಿಯೋದ ಗುಟ್ಟೇನು?

ABP ಹಿಂದಿ ಸುದ್ದಿ ವಾಹಿನಿಯ ಲೋಗೊ ಇರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ  ಆಗುತ್ತಿದ್ದು. ಬಿಜೆಪಿ ಪಕ್ಷವು ಇವಿಎಂ ಯಂತ್ರಗಳನ್ನು ತನಗೆ ಬೇಕಾದ ರೀತಿ ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿದೆ ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

Screenshot of a viral Instagram post. (Source: Instagram/Modified by Logically Facts)

ವಿಡಿಯೋದಲ್ಲಿ ಆನೆಯ ಚಿಹ್ನೆ ಇರುವ ಬಟನ್  ಒತ್ತಿದರೆ ವಿವಿ ಪ್ಯಾಟ್ ಯಂತ್ರದಲ್ಲಿ ಕಮಲದ ಚಿಹ್ನೆಯ ಸ್ಲಿಪ್ ಬರುತ್ತಿರುವುದನ್ನು ಕಾಣಬಹುದು.

ಇವಿಎಂ ಅವ್ಯವಹಾರ ಮತ್ತೊಮ್ಮೆ ಸಾಬೀತಾಗಿದೆ. ಮಾಧ್ಯಮದವರ ಪ್ರಶ್ನೆಗಳಿಗೆ ಮೋದಿ ಹೇಗೆ ಉತ್ತರಿಸಲು ಸಾಧ್ಯವಿಲ್ಲವೋ ಅದೇ ರೀತಿ  ಇವಿಎಂ ಇಲ್ಲದೆ ಮೋದಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಇವಿಎಂ ಎಂಬುದು ಮೋದಿಗೆ ವರವಾಗಿದೆ ಎಂಬ ಹೇಳಿಕೆಯೊಂದಿಗೆ ಎಕ್ಸ್‌ನಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ABP ಹಿಂದಿ ನ್ಯೂಸ್‌ ಲೋಗೋ ಹೊಂದಿರುವ ಇವಿಎಂ ವಿಡಿಯೋದ ದೃಶ್ಯಾವಳಿಗಳನ್ನು ಪರಿಶೀಲಿಸಲು, ವಿಡಿಯೋದ ಕೀ ಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 2017ರ ಏಪ್ರಿಲ್ 1 ರಂದು ಎಬಿಪಿ ನ್ಯೂಸ್‌ನ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿಅಪ್‌ಲೋಡ್‌ ಮಾಡಿದ ವಿಡಿಯೋವೊಂದು ಲಭ್ಯವಾಗಿದ್ದು,  ‘ಇವಿಎಂ ವಿವಾದ: ಭಿಂಡ್‌ನ ಎಸ್‌ಪಿ ಹಾಗೂ ಕಲೆಕ್ಟರ್ ಅಮಾನತ್ತು” ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಪ್ರಕಟಿಸಲಾಗಿದೆ.

2017ರಲ್ಲಿ ವಿವಾದಕ್ಕೆ ಕಾರಣವಾಗಿದ್ದ ವಿಡಿಯೋವನ್ನು ಪ್ರಸ್ತುತ 2024ರ ಲೋಕಸಭಾ ಚುನಾವಣೆಗೆ ಲಿಂಕ್ ಮಾಡಿ ವಿಡಿಯೋವನ್ನು ಪ್ರಸಾರ ಮಾಡಲಾಗುತ್ತಿದೆ. ಈ ವಿಡಿಯೋ ಹಳೆಯದು ಎಂಬುದನ್ನು ಪತ್ತಷ್ಟು ಸ್ಪಷ್ಟಪಡಿಸಲು, ವಿಡಿಯೋದಲ್ಲಿ ಕಂಡು ಬರುವ ಚಿತ್ರಾ ತ್ರಿಪಾಠಿ ಅವರು 2022ರ ಸೆಪ್ಟೆಂಬರ್‌ನಲ್ಲಿ ಎಬಿಪಿ ನ್ಯೂಸ್ ಬಿಟ್ಟು  ಆಜ್‌ ತಕ್‌ಗೆ ಸೇರಿದ್ದಾರೆ. ಹಾಗಾಗಿ ಈಗ ಬಿತ್ತರವಾಗುತ್ತಿರುವ ವಿಡಿಯೋ ಹಳೆಯದು ಎಂಬುದು ಸ್ಪಷ್ಟವಾಗುತ್ತದೆ.

ಮಧ್ಯ ಪ್ರದೇಶದ ಭಿಂಡ್ ಜಿಲ್ಲೆಯ ಅತೆರ್ ವಿಧಾನಸಭಾ ಕ್ಷೇತ್ರ ಹಾಗೂ ಉಮಾರಿಯಾ ಜಿಲ್ಲೆಯ ಬಾಂಧವಗಢ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟಿಗೇ ಉಪ ಚುನಾವಣೆ ಘೋಷಣೆಯಾಗಿತ್ತು. 2017ರ ಏಪ್ರಿಲ್ 9 ರಂದು ಚುನಾವಣೆಗೆ ದಿನಾಂಕ ನಿಗದಿಯಾಗಿತ್ತು. ಇದಕ್ಕೂ ಮುನ್ನ ತಯಾರಿ ಕಾರ್ಯ ನಡೆಯುತ್ತಿದ್ದ ವೇಳೆ ಭಿಂಡ್ ಜಿಲ್ಲೆಯಲ್ಲಿ ಇವಿಎಂ ಯಂತ್ರಕ್ಕೆ ಜೋಡಣೆಯಾಗಿದ್ದ ವಿವಿ ಪ್ಯಾಟ್ ಯಂತ್ರದಲ್ಲಿ ದೋಷ ಕಾಣಿಸಿಕೊಂಡಿತ್ತು. ಯಾವ ಚಿಹ್ನೆಗೆ ಒತ್ತಿದರೂ ಬಿಜೆಪಿ ಪಕ್ಷದ ಚಿಹ್ನೆ ಇರುವ ಚೀಟಿ ಬರುತ್ತಿತ್ತು. ಈ ವಿಡಿಯೋ ಭಾರೀ ವೈರಲ್ ಆಗಿತ್ತು.

ಈ ಪ್ರಕರಣ ಸಂಬಂಧ ಭಾರತೀಯ ಚುನಾವಣಾ ಆಯೋಗ ಭಿಂಡ್ ಜಿಲ್ಲೆಯ 21 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು ಮಾಡಿತ್ತು. ಇದಲ್ಲದೆ ಕಾಂಗ್ರೆಸ್ ಹಾಗೂ ಎಎಪಿ ಪಕ್ಷಗಳು ಮಧ್ಯ ಪ್ರದೇಶದ ಮುಖ್ಯ ಚುನಾವಣಾ ಆಯುಕ್ತರನ್ನೇ ವಜಾ ಮಾಡುವಂತೆ ಆಗ್ರಹಿಸಿತ್ತು. ಈ ಪ್ರಕರಣ ಸಂಬಂಧ ಅಂದಿನ ಮಧ್ಯ ಪ್ರದೇಶ ಸರ್ಕಾರ ಭಿಂಡ್ ಜಿಲ್ಲೆಯ ಡಿಸಿ, ಎಸ್‌ಪಿ ಸೇರಿದಂತೆ 19 ಅಧಿಕಾರಿಗಳನ್ನು ಎತ್ತಂಗಡಿ ಮಾಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು ಎಂದು ದಿ ಪ್ರಿಂಟ್ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2017 ರಲ್ಲಿ  ಮಧ್ಯ ಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮತಯಂತ್ರದಲ್ಲಿ ಕಾಣಿಸಿಕೊಡ ದೋಷದಲ್ಲಿ ಯಾವ ಚಿಹ್ನೆಗೆ ಒತ್ತಿದರೂ ಬಿಜೆಪಿ ಪಕ್ಷದ ಚಿಹ್ನೆ ಇರುವ ಚೀಟಿ ಬರುತ್ತಿತ್ತು. ಈ ಹಳೆಯ ವಿಡಿಯೋವನ್ನು ಪ್ರಸ್ತುತ 2024ರ ಲೋಕಸಭಾ ಚುನಾವಣೆಗೆ ಲಿಂಕ್ ಮಾಡಿ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪ್ರತಿ ಬಾರಿ ಚುನಾವಣೆ ಬಂದಾಗಲೂ EVM ನ ಯಂತ್ರ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳು ಅನುಮಾನಗಳು ವ್ಯಕ್ತವಾಗುತ್ತಲೇ ಬರುತ್ತಿದೆ. ಇಂತಹ ದೋಷಗಳು ಕೂಡ ಚುನಾವಣಾ ಆಯೋಗದ ಮೇಲಿರುವ ನಂಬಿಕೆಗಳನ್ನು ಕಡಿಮೆ ಮಾಡುತ್ತವೆ ಎನ್ನುವುದು ಕೂಡ ವಿರೋಧ ಪಕ್ಷಗಳ ವಾದ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | 1993 ಮುಂಬೈ ಸ್ಪೋಟದ ಉಗ್ರ ಅಬು ಸಲೇಂ ಜೊತೆ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಎಂದು ಸುಳ್ಳು ಪೋಸ್ಟ್‌ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights