FACT CHECK | ಗ್ಯಾರೆಂಟಿ ಯೋಜನೆ ಕುರಿತು ಮಾತನಾಡಿದ್ದ ವಿದ್ಯಾರ್ಥಿ ಹೇಳಿಕೆಯನ್ನು ತಿರುಚಿದ ಬಲಪಂಥೀಯ ಬೆಂಬಲಿಗರು

ಕಾಂಗ್ರೆಸ್‌ ಗ್ಯಾರೆಂಟಿ v\s ಮೋದಿ ಗ್ಯಾರೆಂಟಿ ಕುರಿತಾದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು,  2023-24ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ (ಏಪ್ರಿಲ್ 10) ಪ್ರಕಟವಾಗಿದ್ದು. ಕಲಾ ವಿಭಾಗದಲ್ಲಿ ವಿಜಯಪುರದ SS ಪಿಯು ಕಾಲೇಜಿನ ವಿದ್ಯಾರ್ಥಿ ವೇದಾಂತ ನಾವಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿ ಮಾಧ್ಯಮಗಳ ಮುಂದೆ ಮಾತನಾಡುವಾಗ ತನ್ನ ಈ ಸಾಧನೆಗೆ ಕಾರಣವಾದ ಸರ್ಕಾರಿ ಯೋಜನೆಗಳನ್ನು ಉಲ್ಲೇಖಿಸಿ ಮಾತನಾಡಿ ಅವುಗಳ ಸಹಾಯದಿಂದ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬರಲು ಕಾರಣವಾಗಿದೆ ಎಂದು ಹೇಳುತ್ತಾನೆ.

ಆದರೆ ಕೆಲವು ಬಿಜೆಪಿ ಬೆಂಬಲಿತ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಕೇಂದ್ರ ಸರ್ಕಾರದ ಯೋಜನೆಗಳಿಂದಾಗಿ ಈ ಸಾಧನೆ ಮಾಡಿರುವುದಾಗಿ ವಿದ್ಯಾರ್ಥಿ ಹೇಳಿದ್ದಾನೆ ಎಂಬಂತೆ ಅದರ ಸಂಪೂರ್ಣ ಕ್ರಡಿಟ್‌ಅನ್ನು ತೆಗೆದುಕೊಳ್ಳಲು ಪ್ರಯತ್ನಿಸಿರುವುದನ್ನು ಕಾಣಬಹುದಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಏನಿದೆ ಎಂದು ನೋಡೋಣ.

 

ವಿದ್ಯಾರ್ಥಿ ಹೇಳಿದ್ದು ಮೋದಿ ಸರ್ಕಾರದ ಫಸಲ್‌ ಭೀಮಾ ಇಂದ 2000 ರೂ. ಸಹಾಯ ಆಯ್ತು ಅಂತ. ಕಾಂಗ್ರೆಸ್‌ ಹಾಕಿದ್ದು ಗೃಹಲಕ್ಷ್ಮಿ ಇಂದ ಅಂತ. ಅಷ್ಟಕ್ಕೂ ಗೃಹಲಕ್ಷ್ಮಿ ಇರುವುದು ಹೆಣ್ಣುಮಕ್ಕಳಿಗೆ, ಅದು ಮುಕ್ಕಾಲು ಭಾಗ ತಲುಪದ ಯೋಜನೆ” ಎಂಬ ಬರಹದೊಂದಿಗೆ ವಿಡಿಯೊವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ವಿದ್ಯಾರ್ಥಿ ನಿಜವಾಗಿಯೂ ಏನು ಹೇಳಿದ್ದಾರೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆಯನ್ನು ಪರಿಶೀಲಿಸಲು ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೋಗಳನ್ನು ಸರ್ಚ್ ಮಾಡಿದಾಗ, ಕನ್ನಡದ ನ್ಯೂಸ್‌ ಫಸ್ಟ್‌ ಸುದ್ದಿ ವಾಹಿನಿಯ  ಯುಟ್ಯುಬ್‌ ಚಾನಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೋ ಲಭ್ಯವಾಗಿದೆ.

10 ಏಪ್ರಿಲ್‌ 2024ರಂದು ಪಿಯುಸಿ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ವೇದಾಂತ್‌ ನಾವಿ ಅವರು ಕನ್ನಡದ ನ್ಯೂಸ್‌ ಫಸ್ಟ್‌ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನವು  04:09 ನಿಮಿಷ ಇದ್ದು ಅದರಲ್ಲಿ 1ನಿಮಿಷ 38ನೇ ಸೆಕೆಂಡ್‌ನಲ್ಲಿ ಸರ್ಕಾರದಿಂದ ಬರುವ 2000 ಹಣದಿಂದ ಸಹಾಯವಾಯ್ತು ಎಂದಿದ್ದಾರೆ. ನಿರೂಪಕ ಗೃಹಲಕ್ಷ್ಮಿ ಯೋಜನೆಯ ಎಂದು ಪ್ರಶ್ನಿಸಿದಾಗ ಹೌದು ಎಂದು ವೇದಾಂತ್ ಹೇಳಿದ್ದಾರೆ. ಮುಂದುವರಿದು 02:26 ನಿಮಿಷಕ್ಕೆ ಕೇಂದ್ರದ ಫಸಲ್‌ ಭೀಮಾ ಯೋಜನೆಯ 2 ಸಾವಿರ ಬಂದಿದೆ ಎಂದು ಎರಡೂ ಯೋಜನೆಯ ಹೆಸರನ್ನೂ ಉಲ್ಲೇಖಿಸಿದ್ದಾರೆ.

ಆದರೆ ಈ ವಿಡಿಯೋವನ್ನು ಎಡಿಟ್ ಮಾಡಿ ಹಂಚಿಕೊಂಡಿರುವ ಕೆಲವು ಬಿಜೆಪಿ ಬೆಂಬಲಿತ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿದ್ಯಾರ್ಥಿ ಕೇಂದ್ರದ ಯೋಜನೆಯನ್ನು ಮಾತ್ರವೇ ಉಲ್ಲೇಖಿಸಿದ್ದಾರೆ ಎಂದು ಸುಳ್ಳು ಹಂಚಿಕೊಳ್ಳುವ ಮೂಲಕ ಚೀಪ್ ಪೋಲಿಟಿಕ್ಸ್ ಮಾಡುತ್ತಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಾಜ್ಯ ಸರ್ಕಾರ ಮಾಡಿರುವ ಸಾಲದ ಕುರಿತು BJP ಹೇಳುತ್ತಿರುವ ಅಂಕಿ ಅಂಶಗಳು ಎಷ್ಟು ನಿಜ? ಎಷ್ಟು ಸುಳ್ಳು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights